ಸೌರವ್​ ಗಂಗೂಲಿ ಬಯೋಪಿಕ್​ನಲ್ಲಿ ನಟಿಸಲ್ವಾ ಆಯುಷ್ಮಾನ್​ ಖುರಾನಾ? ಎದುರಾಯ್ತು ವಿಘ್ನ

ಕ್ರಿಕೆಟರ್​ಗಳ ಬಯೋಪಿಕ್​ನಲ್ಲಿ ನಟಿಸುವ ಅವಕಾಶ ಸಿಕ್ಕರೆ ಕಲಾವಿದರು ಖುಷಿಯಿಂದ ಒಪ್ಪಿಕೊಳ್ಳುತ್ತಾರೆ. ಆಯುಷ್ಮಾನ್​ ಖುರಾನಾ ಅವರು ಸೌರವ್​ ಗಂಗೂಲಿ ಪಾತ್ರದಲ್ಲಿ ಅಭಿನಯಿಸಲು ಉತ್ಸುಕರಾಗಿದ್ದರು. ಆದರೆ ಈಗ ಅವರು ಮನಸ್ಸು ಬದಲಾಯಿಸಿದ್ದಾರೆ ಎಂದು ಸುದ್ದಿ ಹಬ್ಬಿದೆ. ಅವರು ಚಿತ್ರತಂಡದಿಂದ ಹೊರನಡೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಪ್ರಕಟ ಆಗಿದೆ.

ಸೌರವ್​ ಗಂಗೂಲಿ ಬಯೋಪಿಕ್​ನಲ್ಲಿ ನಟಿಸಲ್ವಾ ಆಯುಷ್ಮಾನ್​ ಖುರಾನಾ? ಎದುರಾಯ್ತು ವಿಘ್ನ
ಆಯುಷ್ಮಾನ್​ ಖುರಾನಾ, ಸೌರವ್​ ಗಂಗೂಲಿ

Updated on: Aug 22, 2024 | 7:04 PM

ಯಾವುದೇ ಪಾತ್ರವನ್ನು ಕೊಟ್ಟರೂ ನಟ ಆಯುಷ್ಮಾನ್​ ಖುರಾನಾ ಅವರು ಅದಕ್ಕೆ ಜೀವ ತುಂಬುತ್ತಾರೆ. ಈಗಾಗಲೇ ಅವರು ‘ಡ್ರೀಮ್​ ಗರ್ಲ್​’, ‘ಬಾಲಾ’ ಮುಂತಾದ ಸಿನಿಮಾಗಳ ಚಾಲೆಂಜಿಂಗ್​ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಒಳ್ಳೊಳ್ಳೆಯ ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಅವುಗಳಲ್ಲಿ ಪ್ರಮುಖವಾದದ್ದು ಸೌರವ್​ ಗಂಗೂಲಿ ಬಯೋಪಿಕ್​. ಹೌದು, ಬಹಳ ಹಿಂದೆಯೇ ಈ ಸುದ್ದಿ ಕೇಳಿ ಅಭಿಮಾನಿಗಳಿಗೆ ಖುಷಿ ಆಗಿತ್ತು. ಬಯೋಪಿಕ್​ನಲ್ಲಿ ಸೌರವ್​ ಗಂಗೂಲಿಯ ಪಾತ್ರವನ್ನು ಆಯುಷ್ಮಾನ್​ ಖುರಾನಾ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಆ ಪ್ರಾಜೆಕ್ಟ್​ಗೆ ವಿಘ್ನ ಎದುರಾದಂತಿದೆ. ಈ ಸಿನಿಮಾದಿಂದ ಆಯುಷ್ಮಾನ್​ ಖುರಾನಾ ಹೊರ ನಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ನಿರ್ದೇಶಕ ಲವ್ ರಂಜನ್​ ಅವರು ಸೌರವ್​ ಗಂಗೂಲಿ ಜೀವನಾಧಾರಿತ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. 2021ರಿಂದಲೂ ಆಯುಷ್ಮಾನ್​ ಖುರಾನಾ ಜೊತೆ ಅವರು ಮಾತುಕಥೆ ನಡೆಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಯುಷ್ಮಾನ್​ ಖುರಾನಾ ಅವರು 2024ರ ಕೊನೆಯಲ್ಲಿ ಈ ಚಿತ್ರದ ಶೂಟಿಂಗ್​ನಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಆದರೆ ಈಗ ಒಂದು ಸಮಸ್ಯೆ ಎದುರಾಗಿದೆ.

ವರದಿಗಳ ಪ್ರಕಾರ, ಆಯುಷ್ಮಾನ್​ ಖುರಾನಾ ಅವರು ಡೇಟ್ಸ್​ ಕೊರತೆಯಿಂದಾಗಿ ಸೌರವ್​ ಗಂಗೂಲಿಯ ಬಯೋಪಿಕ್​ನಿಂದ ಹೊರನಡೆದಿದ್ದಾರೆ. ಅಲ್ಲದೇ, ಈಗಾಗಲೇ ಬಾಲಿವುಡ್​ನಲ್ಲಿ ಬಯೋಪಿಕ್​ಗಳ ಸಂಖ್ಯೆ ಮಿತಿ ಮೀರಿದೆ ಎಂದು ತಮ್ಮ ನಿರ್ಧಾರಕ್ಕೆ ಆಯುಷ್ಮಾನ್​ ಕಾರಣ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಚಿತ್ರತಂಡಕ್ಕೆ ಶಾಕ್​ ಆಗಿದೆ. ಹೊಸದಾಗಿ ಪಾತ್ರವರ್ಗದ ಆಯ್ಕೆ ನಡೆಯಬೇಕಿದೆ. ಸೌರವ್​ ಗಂಗೂಲಿ ಪಾತ್ರಕ್ಕೆ ಹೊಸದಾಗಿ ಯಾವ ನಟ ಆಯ್ಕೆ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಗಂಗೂಲಿ ಪಾತ್ರದಲ್ಲಿ ಆಯುಷ್ಮಾನ್​ ಖುರಾನಾ ಅವರನ್ನು ನೋಡಬೇಕು ಎಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆ ಆಗಿದೆ.

ಇದನ್ನೂ ಓದಿ: ಮೊದಲ ದಲಿತ ಕ್ರಿಕೇಟಿಗನ ಬಗ್ಗೆ ಬಯೋಪಿಕ್; ಮುಖ್ಯಭೂಮಿಕೆಯಲ್ಲಿ ಅಜಯ್ ದೇವಗನ್

ಇನ್ನೊಂದು ಮೂಲದ ಪ್ರಕಾರ, ಆಯುಷ್ಮಾನ್​ ಖುರಾನಾ ಅವರು ಈ ರೀತಿಯ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಅವರಿನ್ನೂ ಪೂರ್ತಿ ಸ್ಕ್ರಿಪ್ಟ್​ ನರೇಷನ್​ ಕೇಳುವುದು ಬಾಕಿ ಇದೆ. ಹಾಗಿದ್ದರೂ ಕೂಡ ಗಾಸಿಪ್​ ಹಬ್ಬಿದೆ. ಬೆಂಕಿ ಇಲ್ಲದೇ ಹೊಗೆ ಆಡಲ್ಲ ಎಂದು ಗಾಸಿಪ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಸ್ವತಃ ಆಯುಷ್ಮಾನ್​ ಖುರಾನಾ ಅವರೇ ಈ ವಿಚಾರಕ್ಕೆ ಸ್ಪಷ್ಟನೆ ನೀಡಿದರೆ ಎಲ್ಲ ಅನುಮಾನಗಳು ಬಗೆಹರಿಯಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us