AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಹುನಿರೀಕ್ಷಿತ ಕ್ರಿಕೆಟಿಗನ ಬಯೋಪಿಕ್ ಘೋಷಣೆ, ಯಾರು ಆ ಆಟಗಾರ

ಕ್ರಿಕೆಟಿಗರಾದ ಸಚಿನ್, ಮಹೇಂದ್ರ ಸಿಂಗ್ ಧೋನಿ, ಮೊಹಮ್ಮದ್ ಅಜರುದ್ಧೀನ್ ಅವರುಗಳ ಜೀವನ ಕುರಿತಾದ ಸಿನಿಮಾ ಈಗಾಗಲೇ ಬಂದಿವೆ. ಇದೀಗ ಕ್ರಿಕೆಟ್ ಪ್ರೇಮಿಗಳ ಬಹುಬೇಡಿಕೆಯ ಕ್ರಿಕೆಟರ್ ಬಯೋಪಿಕ್ ಈಗ ಬರಲಿದೆ.

ಬಹುನಿರೀಕ್ಷಿತ ಕ್ರಿಕೆಟಿಗನ ಬಯೋಪಿಕ್ ಘೋಷಣೆ, ಯಾರು ಆ ಆಟಗಾರ
Follow us
ಮಂಜುನಾಥ ಸಿ.
|

Updated on: Aug 20, 2024 | 12:56 PM

ಬಾಲಿವುಡ್​ನಲ್ಲಿ ಬಯೋಪಿಕ್​ಗಳ ಹಾವಳಿ ಜೋರಾಗಿದೆ. ಕೆಲವು ಬಹಳ ಒಳ್ಳೆಯ ಬಯೋಪಿಕ್​ಗಳು ಮೂಡಿಬಂದಿವೆಯಾದರೂ ಕೆಲವು ಕೇವಲ ನಾಮ್​ ಕೆ ವಾಸ್ತೆ ಎಂಬಂತೆ ಮಾಡಿದ್ದು ಸಹ ಇವೆ. ರಾಜಕಾರಣಿ, ಕ್ರೀಡಾಪಟುಗಳು, ನಟ-ನಟಿಯರು, ರೌಡಿಗಳು, ಮಾಫಿಯಾ ದೊರೆಗಳು ಹೀಗೆ ಹಲವರ ಬಗ್ಗೆ ಬಯೋಪಿಕ್​ಗಳನ್ನು ಬಾಲಿವುಡ್​ ಮಾಡಿದ್ದಾಗಿದೆ. ಆದರೆ ಬಾಲಿವುಡ್ಡಿಗರಿಗೆ ಕ್ರೀಡಾಪಟುಗಳ ಬಯೋಪೆಕ್​ ಮೇಲೆ ವಿಶೇಷ ಕಾಳಜಿ. ಈಗಾಗಲೇ ಕ್ರಿಕೆಟ್, ಹಾಕಿ, ಬ್ಯಾಡ್​ಮಿಂಟನ್, ಬಾಕ್ಸಿಂಗ್ ಇನ್ನೂ ಕೆಲವು ಕ್ರೀಡೆಗಳ ಕ್ರೀಡಾಪಟುಗಳ ಜೀವನ ಆಧರಿಸಿದ ಸಿನಿಮಾಗಳು ಬಂದಿದ್ದಾಗಿದೆ. ಇದೀಗ ಕ್ರಿಕೆಟಿಗರೊಬ್ಬರ ಜೀವನ ಆಧರಿಸಿದ ಸಿನಿಮಾ ಘೋಷಣೆ ಮಾಡಲಾಗಿದೆ.

ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ಮೊಹಮ್ಮದ್ ಅಜರುದ್ದೀನ್ ಅವರುಗಳ ಜೀವನ ಆಧರಿಸಿದ ಸಿನಮಾ ಈಗಾಗಲೇ ತೆರೆಗೆ ಬಂದಿದೆ. ಹಿಟ್ ಸಹ ಆಗಿವೆ. ಆದರೆ ಒಬ್ಬ ಕ್ರಿಕೆಟಿಗನ ಬಗ್ಗೆ ಸಿನಿಮಾ ಆಗಬೇಕೆಂಬ ಬೇಡಿಕೆ ಆಗಾಗ್ಗೆ ಕೇಳಿ ಬರುತ್ತಲಿತ್ತು. ಅದುವೇ ಯುವರಾಜ್ ಸಿಂಗ್. ಭಾರತ ಗೆದ್ದ ವಿಶ್ವಕಪ್ ಹಾಗೂ ಟಿ20 ವಿಶ್ವಕಪ್​ನಲ್ಲಿಯೂ ಪಂದ್ಯಶ್ರೇಷ್ಠ ಎನಿಸಿಕೊಂಡ ಯುವರಾಜ್ ಸಿಂಗ್ ಆಟದ ಮಧ್ಯೆಯೇ ಕ್ಯಾನ್ಸರ್​ನೊಂದಿಗೆ ಹೋರಾಡಿ ಮತ್ತೆ ಕ್ರಿಕೆಟ್​ಗೆ ಮರಳಿದವರು. ಚಾಂಪಿಯನ್ ಕ್ರಿಕೆಟಿಗ ಎಂದೇ ಹೆಸರಾಗಿರುವ ಯುವರಾಜ್ ಸಿಂಗ್ ಜೀವನದ ಬಗ್ಗೆ ಸಿನಿಮಾ ಮಾಡುವುದಾಗಿ ಇದೀಗ ಅಧಿಕೃತವಾಗಿ ಘೋಷಣೆ ಆಗಿದೆ.

ಇದನ್ನೂ ಓದಿ:ಕನ್ನಡಿಗನ ಬಯೋಪಿಕ್​​ನಲ್ಲಿ ಅಕ್ಷಯ್​ ಕುಮಾರ್​; ಹೇಗಿದೆ ‘ಸರ್ಫಿರಾ’ ಟ್ರೇಲರ್​?

ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾ ನಿರ್ಮಾಣ ಮಾಡಿದ್ದ ಭೂಷಣ್ ಕುಮಾರ್, ಯುವರಾಜ್ ಸಿಂಗ್ ಜೀವನ ಕುರಿತಾದ ಸಿನಿಮಾದ ನಿರ್ಮಾಣ ಮಾಡಲಿದ್ದಾರೆ. ಭೂಷಣ್ ಜೊತೆಗೆ ರವಿ ಭಗ್​ಚಂದಕ ಸಹ ಸಿನಿಮಾಕ್ಕೆ ಬಂಡವಾಳ ತೊಡಗಿಸಲಿದ್ದಾರೆ. ಯುವರಾಜ್ ಸಿಂಗ್, ಇಬ್ಬರು ನಿರ್ಮಾಪಕರ ಜೊತೆಗೆ ತೆಗೆಸಿಕೊಂಡಿರುವ ಚಿತ್ರ ಇದೀಗ ವೈರಲ್ ಆಗಿದ್ದು, ಬಯೋಪಿಕ್ ಮಾಡುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಲಾಗಿದೆ.

ರವಿ ಭಗ್​ಚಂದಕ ಈ ಹಿಂದೆ ಸಚಿನ್ ತೆಂಡೂಲ್ಕರ್ ಅವರ ಜೀವನ ಆಧರಿಸಿದ ಡಾಕ್ಯುಮೆಂಟರಿಯನ್ನು ಸಹ ನಿರ್ಮಾಣ ಮಾಡಿದ್ದರು. ಇದೀಗ ಯುವರಾಜ್ ಸಿಂಗ್ ಜೀವನದ ಕುರಿತಾದ ಸಿನಿಮಾದ ಮೇಲೆ ಬಂಡವಾಳ ಹೂಡಲು ತಯಾರಾಗಿದ್ದಾರೆ. 2000 ದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟ ಯುವರಾಜ್ ಸಿಂಗ್, ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್​ನಿಂದ ಭಾರತೀಯ ಕ್ರಿಕೆಟ್​ನ ಚಹರೆಯನ್ನೇ ಬದಲು ಮಾಡಿದರು. 2011 ರ ವಿಶ್ವಕಪ್ ಹಾಗೂ ಅದಕ್ಕೂ ಮುಂಚೆ ಗೆದ್ದ ಟಿ20 ವಿಶ್ವಕಪ್ ಎರಡರಲ್ಲೂ ಪಂದ್ರ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅದಾದ ಬಳಿಕ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಜೀವನ್ಮರಣ ಹೋರಾಟದಲ್ಲಿಯೂ ಗೆಲುವು ಸಾಧಿಸಿದರು ಯುವರಾಜ್ ಸಿಂಗ್.

ಕ್ರಿಕೆಟ್ ಪ್ರೇಮಿಗಳು ಮೊದಲಿನಿಂದಲೂ ಯುವರಾಜ್ ಸಿಂಗ್ ಅವರ ಬಯೋಪಿಕ್ ನಿರ್ಮಾಣ ಆಗಬೇಕೆಂದು ಬೇಡಿಕೆ ಇಟ್ಟಿದ್ದರು. ಇದೀಗ ಕೊನೆಗೂ ಯುವರಾಜ್ ಸಿಂಗ್ ಅವರ ಜೀವನ ಕುರಿತಾದ ಸಿನಿಮಾ ತೆರೆಗೆ ಬರುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಅಸಹನೆಯಿಂದ ಬಿಸಿನೀರು ಕೊಡುವಂತೆ ಅಂಗರಕ್ಷನಿಗೆ ಹೇಳಿದ ಮಲ್ಲಿಕಾರ್ಜುನ ಖರ್ಗೆ
ಅಸಹನೆಯಿಂದ ಬಿಸಿನೀರು ಕೊಡುವಂತೆ ಅಂಗರಕ್ಷನಿಗೆ ಹೇಳಿದ ಮಲ್ಲಿಕಾರ್ಜುನ ಖರ್ಗೆ
ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್
ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್
ಮೂರು-ಪರೀಕ್ಷೆ ನೀತಿಯಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರಯೋಜನ: ಮಧು
ಮೂರು-ಪರೀಕ್ಷೆ ನೀತಿಯಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರಯೋಜನ: ಮಧು
ನಿರಂತರ ಮಳೆಗೆ ದೇವಿಮನೆ ಘಟ್ಟ ಭಾಗದ ಗುಡ್ಡ ಕುಸಿತ: ಹೆದ್ದಾರಿ ತುಂಬಾ ಮಣ್ಣು
ನಿರಂತರ ಮಳೆಗೆ ದೇವಿಮನೆ ಘಟ್ಟ ಭಾಗದ ಗುಡ್ಡ ಕುಸಿತ: ಹೆದ್ದಾರಿ ತುಂಬಾ ಮಣ್ಣು
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಇಡೀ ಪಂದ್ಯದ ಚಿತ್ರಣ ಬದಲಿಸಿದ ಫಾಫ್ ಡುಪ್ಲೆಸಿಸ್ ಸ್ಟನ್ನಿಂಗ್ ಕ್ಯಾಚ್
ಇಡೀ ಪಂದ್ಯದ ಚಿತ್ರಣ ಬದಲಿಸಿದ ಫಾಫ್ ಡುಪ್ಲೆಸಿಸ್ ಸ್ಟನ್ನಿಂಗ್ ಕ್ಯಾಚ್