ಕನ್ನಡಿಗನ ಬಯೋಪಿಕ್​​ನಲ್ಲಿ ಅಕ್ಷಯ್​ ಕುಮಾರ್​; ಹೇಗಿದೆ ‘ಸರ್ಫಿರಾ’ ಟ್ರೇಲರ್​?

ನಟ ಅಕ್ಷಯ್​ ಕುಮಾರ್​ ಅವರಿಗೆ ಬಯೋಪಿಕ್​ಗಳು ಹೊಸದಲ್ಲ. ಈಗಾಗಲೇ ಅನೇಕ ಸಾಧಕರ ಜೀವನಾಧಾರಿತ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈಗ ಕರ್ನಾಟಕದ ಸಾಧಕನ ಕಥೆಯನ್ನು ಇಟ್ಟುಕೊಂಡು ಅವರು ‘ಸರ್ಫಿರಾ’ ಸಿನಿಮಾ ಮಾಡಿದ್ದಾರೆ. ಈ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿ ಸದ್ದು ಮಾಡುತ್ತಿದೆ. ಜುಲೈ 12ರಂದು ರಿಲೀಸ್​ ಆಗಲಿರುವ ಈ ಸಿನಿಮಾಗೆ ಸುಧಾ ಕೊಂಗರಾ ನಿರ್ದೇಶನ ಮಾಡಿದ್ದಾರೆ.

ಕನ್ನಡಿಗನ ಬಯೋಪಿಕ್​​ನಲ್ಲಿ ಅಕ್ಷಯ್​ ಕುಮಾರ್​; ಹೇಗಿದೆ ‘ಸರ್ಫಿರಾ’ ಟ್ರೇಲರ್​?
ಅಕ್ಷಯ್​ ಕುಮಾರ್​
Follow us
ಮದನ್​ ಕುಮಾರ್​
|

Updated on: Jun 18, 2024 | 4:02 PM

ಸೋಲು-ಗೆಲುವು ಏನೇ ಇದ್ದರೂ ನಟ ಅಕ್ಷಯ್​ ಕುಮಾರ್​ (Akshay Kumar) ಅವರು ಸಿನಿಮಾ ಮಾಡುವ ವೇಗ ಕಡಿಮೆ ಆಗಲ್ಲ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಒಪ್ಪಿಕೊಂಡು ಅವರು ನಟಿಸುತ್ತಲೇ ಇದ್ದಾರೆ. ಈಗ ಅವರ ಹೊಸ ಸಿನಿಮಾ ‘ಸರ್ಫಿರಾ’ (Sarfira) ಬಿಡುಗಡೆಗೆ ಸಜ್ಜಾಗಿದೆ. ಜುಲೈ 12ರಂದು ಈ ಸಿನಿಮಾ ತೆರೆಕಾಣಲಿದೆ. ವಿಶೇಷ ಏನೆಂದರೆ, ಇದು ಕನ್ನಡಿಗ ಕ್ಯಾಪ್ಟನ್​ ಜಿ.ಆರ್​. ಗೋಪಿನಾಥ್​ ಜೀವನದ ವಿವರಗಳನ್ನು ಆಧರಿಸಿ ತಯಾರಾದ ಸಿನಿಮಾ. ಈ ಸಿನಿಮಾದಲ್ಲಿ ತಮಿಳು ನಟ ಸೂರ್ಯ (Suriya) ಅವರು ಅತಿಥಿ ಪಾತ್ರ ಮಾಡಿದ್ದಾರೆ. ಈ ಎಲ್ಲ ಕಾರಣಗಳಿಂದ ದಕ್ಷಿಣ ಭಾರತದಲ್ಲೂ ‘ಸರ್ಫಿರಾ’ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಬಡವರಿಗೆ ಕೂಡ ಕಡಿಮೆ ದರದಲ್ಲಿ ವಿಮಾನಯಾನ ಸೇವೆ ಸಿಗಬೇಕು ಎಂಬ ಕನಸು ಕಂಡು ಸಾಧನೆ ಮಾಡಿದ ಕನ್ನಡಿಗ ಕ್ಯಾಪ್ಟನ್​ ಜಿ.ಆರ್​. ಗೋಪಿನಾಥ್​ ಅವರ ಜೀವನವನ್ನು ಆಧರಿಸಿ ತಮಿಳಿನಲ್ಲಿ ‘ಸೂರರೈ ಪೋಟ್ರು’ ಸಿನಿಮಾ ಮೂಡಿಬಂದಿತ್ತು. ಈಗ ಅದೇ ಸಿನಿಮಾವನ್ನು ಹಿಂದಿಗೆ ರಿಮೇಕ್​ ಮಾಡಲಾಗಿದೆ. ತಮಿಳಿನಲ್ಲಿ ಸೂರ್ಯ ಮುಖ್ಯಭೂಮಿಕೆ ನಿಭಾಯಿಸಿದ್ದರು. ಈಗ ಹಿಂದಿ ರಿಮೇಕ್​ನಲ್ಲಿ ಆ ಪಾತ್ರವನ್ನು ಅಕ್ಷಯ್​ ಕುಮಾರ್​ ಮಾಡಿದ್ದಾರೆ.

ಕ್ಯಾಪ್ಟನ್​ ಗೋಪಿನಾಥ್​ ಅವರ ಜೀವನದ ಕಥೆ ತುಂಬ ಸ್ಫೂರ್ತಿದಾಯಕವಾಗಿದೆ. ಹಾಗಾಗಿ ನಟ ಸೂರ್ಯ ಅವರು ಬಹಳ ಆಸಕ್ತಿ ವಹಿಸಿ ‘ಸೂರರೈ ಪೋಟ್ರು’ ಸಿನಿಮಾ ಮಾಡಿದ್ದರು. ತಮಿಳಿನ ಆ ಸಿನಿಮಾ ಕನ್ನಡ, ಹಿಂದಿ ಮುಂತಾದ ಭಾಷೆಗಳಿಗೆ ಡಬ್​ ಕೂಡ ಆಗಿತ್ತು. ಹಿಂದಿ ಪ್ರೇಕ್ಷಕರು ಸಹ ಮೂಲ ಸಿನಿಮಾವನ್ನು ಒಟಿಟಿಯಲ್ಲಿ ನೋಡಿದ್ದಾರೆ. ಹಾಗಿದ್ದರೂ ಕೂಡ ಅಕ್ಷಯ್​ ಕುಮಾರ್​ ಈ ಚಿತ್ರವನ್ನು ರಿಮೇಕ್​ ಮಾಡಿದ್ದು ಯಾಕೆ ಎಂಬ ಕೌತುಕ ಎಲ್ಲರಲ್ಲೂ ಇದೆ.

ಇದನ್ನೂ ಓದಿ: ಸೆಕೆಂಡ್​ ಹ್ಯಾಂಡ್ ಬಟ್ಟೆ ಧರಿಸುತ್ತಾರೆ ಅಕ್ಷಯ್​ ಕುಮಾರ್​ ಮಗ ಆರವ್​; ಕಾರಣ ಏನು?

ಸದ್ಯ ಬಿಡುಗಡೆ ಆಗಿರುವ ‘ಸರ್ಫಿರಾ’ ಟ್ರೇಲರ್​ ನೋಡಿದರೆ ‘ಸೂರರೈ ಪೋಟ್ರು’ ಸಿನಿಮಾದ ಪ್ರತಿ ಫ್ರೇಮ್​ ಕೂಡ ನೆನಪಾಗುತ್ತದೆ. ಮೇಕಿಂಗ್​ ದೃಷ್ಟಿಯಲ್ಲಿ ಹೆಚ್ಚೇನೂ ಬದಲಾವಣೆ ಆದಂತಿಲ್ಲ. ಒಟಿಟಿಯಲ್ಲಿ ಜನರು ಈಗಾಗಲೇ ನೋಡಿದ ಕಥೆಯನ್ನು ಮತ್ತೆ ಚಿತ್ರಮಂದಿರದಲ್ಲಿ ನೋಡಲು ಬರುತ್ತಾರಾ ಎಂಬುದು ಜುಲೈ 12ರಂದು ಗೊತ್ತಾಗಲಿದೆ. ಮೂಲ ಸಿನಿಮಾಗೆ ನಿರ್ದೇಶನ ಮಾಡಿದ್ದ ಸುಧಾ ಕೊಂಗರಾ ಅವರೇ ಈಗ ಹಿಂದಿ ರಿಮೇಕ್​ಗೂ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈ ಸಿನಿಮಾದ ನಿರ್ಮಾಣದಲ್ಲಿ ಸೂರ್ಯ ಹಾಗೂ ಜ್ಯೋತಿಕಾ ಕೂಡ ಪಾಲುದಾರಿಕೆ ಹೊಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ