ಸೆಕೆಂಡ್​ ಹ್ಯಾಂಡ್ ಬಟ್ಟೆ ಧರಿಸುತ್ತಾರೆ ಅಕ್ಷಯ್​ ಕುಮಾರ್​ ಮಗ ಆರವ್​; ಕಾರಣ ಏನು?

ಕ್ರಿಕೆಟರ್​ ಶಿಖರ್​ ಧವನ್​ ಅವರು ಹೊಸ ಟಾಕ್​ಶೋ ಆರಂಭಿಸಿದ್ದಾರೆ. ಈ ಕಾರ್ಯಕ್ರಮದ ಮೊದಲ ಎಪಿಸೋಡ್​ನಲ್ಲಿ ಅಕ್ಷಯ್​ ಕುಮಾರ್​ ಅವರು ಅತಿಥಿಯಾಗಿ ಆಗಮಿಸಿದ್ದಾರೆ. ಈ ವೇಳೆ ಅವರು ಮಗನ ಬಗ್ಗೆ ಮಾತನಾಡಿದ್ದಾರೆ. ‘ನಾನು ಮತ್ತು ಟ್ವಿಕಲ್​ ಅವರು ಮಗನನ್ನು ಬೆಳೆಸಿದ ರೀತಿ ಬಗ್ಗೆ ನನಗೆ ಹೆಮ್ಮೆ ಇದೆ. ಆತ ತುಂಬ ಸಿಂಪಲ್​ ಹುಡುಗ’ ಎಂದು ಅಕ್ಷಯ್​ ಕುಮಾರ್​ ಹೇಳಿದ್ದಾರೆ.

ಸೆಕೆಂಡ್​ ಹ್ಯಾಂಡ್ ಬಟ್ಟೆ ಧರಿಸುತ್ತಾರೆ ಅಕ್ಷಯ್​ ಕುಮಾರ್​ ಮಗ ಆರವ್​; ಕಾರಣ ಏನು?
ಅಕ್ಷಯ್​ ಕುಮಾರ್​, ಟ್ವಿಂಕಲ್​ ಖನ್ನಾ, ಆರವ್​ ಕುಮಾರ್​
Follow us
|

Updated on: May 21, 2024 | 6:25 PM

ಸ್ಟಾರ್​ ಸೆಲೆಬ್ರಿಟಿಗಳ ಮಕ್ಕಳು ಹೊಸ ಹೊಸ ಬ್ರ್ಯಾಂಡೆಡ್​ ಬಟ್ಟೆಗಳನ್ನು ಧರಿಸಿ ಮಿಂಚುತ್ತಾರೆ. ಒಮ್ಮೆ ಧರಿಸಿದ ಬಟ್ಟೆಯನ್ನು ಮತ್ತೆ ಧರಿಸುವುದಿಲ್ಲ. ಫ್ಯಾಷನ್​ ಸಲುವಾಗಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ಬಾಲಿವುಡ್​ ನಟ ಅಕ್ಷಯ್​ ಕುಮಾರ್ ಅವರ ಪುತ್ರ ಆರವ್​ ಕುಮಾರ್ (Aarav Kumar) ​ ಆ ರೀತಿ ಅಲ್ಲ. ಆರವ್​ ಕುಮಾರ್​ ಅವರು ಸಿಂಪಲ್​ ಆಗಿರಲು ಬಯಸುತ್ತಾರೆ. ಈ ವಿಚಾರವನ್ನು ಅಕ್ಷಯ್​ ಕುಮಾರ್​ ಬಹಿರಂಗಪಡಿಸಿದ್ದಾರೆ. ಆರವ್​ ಕುಮಾರ್​ ಸೆಕೆಂಡ್​ ಹ್ಯಾಂಡ್​ ಬಟ್ಟೆ (Second Hand Clothes) ಧರಿಸುತ್ತಾರೆ ಎಂದು ಕೂಡ ಅಕ್ಷಯ್​ ಕುಮಾರ್ (Akshay Kumar)​ ಹೇಳಿದ್ದಾರೆ. ಈ ವಿಷಯ ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.

‘ಲಂಡನ್​ ಯೂನಿವರ್ಸಿಟಿಯಲ್ಲಿ ಆರವ್​ ಓದುತ್ತಿದ್ದಾನೆ. 15 ವರ್ಷಕ್ಕೆ ಆತ ಮನೆಬಿಟ್ಟು ಹೋದ. ವಿದ್ಯಾಭ್ಯಾಸದ ಬಗ್ಗೆ ಅವನಿಗೆ ಯಾವಾಗಲೂ ಆಸಕ್ತಿ ಇತ್ತು. ಒಬ್ಬನೇ ಇರಲು ಇಷ್ಟಪಡುತ್ತಾನೆ. ಅವನು ಮನೆಯಿಂದ ಹೊರಗೆ ಹೋಗಬಾರದು ಅಂದು ನಾನು ಬಯಸಿದ್ದೆ. ಆದರೆ ಅದು ಅವನ ನಿರ್ಧಾರ. ಹಾಗಂತ ನಾನು ಅವನನ್ನು ತಡೆಯಲಿಲ್ಲ. ಯಾಕೆಂದರೆ ನಾನು ಕೂಡ 14ನೇ ವಯಸ್ಸಿಗೆ ಮನೆ ಬಿಟ್ಟವನು’ ಎಂದು ಅಕ್ಷಯ್​ ಕುಮಾರ್​ ಹೇಳಿದ್ದಾರೆ.

‘ಆರವ್​ ತನ್ನ ಬಟ್ಟೆಯನ್ನು ತಾನೇ ತೊಳೆದುಕೊಳ್ಳುತ್ತಾನೆ. ಚೆನ್ನಾಗಿ ಅಡುಗೆ ಮಾಡುತ್ತಾನೆ ಕೂಡ. ದುಬಾರಿಯಾದ ಬಟ್ಟೆಗಳನ್ನು ಖರೀದಿಸಲು ಆತ ಇಷ್ಟಪಡುವುದಿಲ್ಲ. ಫಿಫ್ಟಿ ಎಂಬ ಸೆಕೆಂಡ್​ ಹ್ಯಾಂಡ್​ ಅಂಗಡಿಗೆ ಅವನು ಹೋಗುತ್ತಾನೆ. ಅಲ್ಲಿ ಬಟ್ಟೆ ಖರೀದಿಸುತ್ತಾನೆ. ಸಂಪನ್ಮೂಲ ವ್ಯರ್ಥ ಮಾಡುವುದು ಅವನಿಗೆ ಇಷ್ಟ ಇಲ್ಲ’ ಎಂದಿದ್ದಾರೆ ಅಕ್ಷಯ್​ ಕುಮಾರ್​.

ಇದನ್ನೂ ಓದಿ: 500 ರೂಪಾಯಿ ಬಾಡಿಗೆ ಮನೆ ಖರೀದಿಸಲಿರುವ ಅಕ್ಷಯ್​ ಕುಮಾರ್​; ಕಾರಣ ಏನು?

ಆರವ್​ ಕುಮಾರ್​ ಅವರಿಗೆ ಈಗ 21 ವರ್ಷ ವಯಸ್ಸು. ಹಾಗಾದರೆ ಅವರು ಯಾವಾಗ ಹೀರೋ ಆಗಿ ಬಾಲಿವುಡ್​ಗೆ ಎಂಟ್ರಿ ನೀಡುತ್ತಾರೆ ಎಂಬ ಪ್ರಶ್ನೆ ಹಲವರಲ್ಲಿ ಇರಬಹುದು. ಆದರೆ ಅಲ್ಲೊಂದು ಟ್ವಿಸ್ಟ್​ ಇದೆ. ಆರವ್​ ಕುಮಾರ್​ ಅವರಿಗೆ ನಟನೆ ಇಷ್ಟವಿಲ್ಲ. ಫ್ಯಾಷನ್​ ಕ್ಷೇತ್ರದಲ್ಲಿ ಸಾಧನೆ ಮಾಡಲು ಅವರು ನಿರ್ಧರಿಸಿದ್ದಾರೆ. ಮಗ ಆಯ್ಕೆ ಮಾಡಿಕೊಂಡಿರುವ ಈ ದಾರಿಯ ಬಗ್ಗೆ ಅಕ್ಷಯ್​ ಕುಮಾರ್​ ಅವರಿಗೆ ಹೆಮ್ಮೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ