ಮತ್ತೆ ಅನಂತ್ ಅಂಬಾನಿ-ರಾಧಿಕಾರ ಪ್ರೀ ವೆಡ್ಡಿಂಗ್ ಪಾರ್ಟಿ, ಕಳೆದ ಬಾರಿಗಿಂತಲೂ ಅದ್ಧೂರಿ

ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಜೊತೆ ವಿವಾಹವಾಗಲಿದ್ದು ಮಾರ್ಚ್ ತಿಂಗಳಲ್ಲಿ ಈ ಜೋಡಿಯ ಅದ್ಧೂರಿ ಪ್ರೀ ವೆಡ್ಡಿಂಗ್ ಪಾರ್ಟಿ ನಡೆದಿದ್ದು, ವಿಶ್ವವೇ ತಿರುಗಿನೋಡುವಷ್ಟು ಅದ್ಧೂರಿ ಪಾರ್ಟಿ ಇದಾಗಿತ್ತು. ಇದೀಗ ಎರಡನೇ ಬಾರಿ ಪ್ರೀ ವೆಡ್ಡಿಂಗ್ ನಡೆಯಲಿದೆ. ಎಲ್ಲಿ? ಇಲ್ಲಿದೆ ಮಾಹಿತಿ.

ಮತ್ತೆ ಅನಂತ್ ಅಂಬಾನಿ-ರಾಧಿಕಾರ ಪ್ರೀ ವೆಡ್ಡಿಂಗ್ ಪಾರ್ಟಿ, ಕಳೆದ ಬಾರಿಗಿಂತಲೂ ಅದ್ಧೂರಿ
Follow us
ಮಂಜುನಾಥ ಸಿ.
|

Updated on: May 21, 2024 | 1:13 PM

ವಿಶ್ವದ ಟಾಪ್ ಶ್ರೀಮಂತರಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿಯ (Mukhesh Ambani) ಪುತ್ರ ಅನಂತ್ ಅಂಬಾನಿ (Anant Ambani) ಹಾಗೂ ರಾಧಿಕಾ ಮರ್ಚೆಂಟ್​ರ ವಿವಾಹಪೂರ್ವ ಸಂಭ್ರಮ (ಪ್ರೀ ವೆಡ್ಡಿಂಗ್) ಪಾರ್ಟಿ ಮಾರ್ಚ್ 1 ರಿಂದ ಆರಂಭಗೊಂಡು ಸುಮಾರು ಒಂದು ವಾರಗಳ ಕಾಲ ನಡೆಯಿತು. ಹಾಲಿವುಡ್ ತಾರೆಯರಾದ ರಿಹಾನಾ, ಎಕಾನ್ ಸೇರಿದಂತೆ ಹಲವು ದಿಗ್ಗಜರು ಕಾರ್ಯಕ್ರಮಕ್ಕೆ ಆಗಮಿಸಿ ವೇದಿಕೆ ಮೇಲೆ ಹಾಡಿ, ಕುಣಿದು ಮನೊರಂಜನೆ ನೀಡಿದರು. ಇಡೀ ಬಾಲಿವುಡ್ ಮಂದಿ ಅನಂತ್ ಅಂಬಾನಿ-ರಾಧಿಕಾರ ಪ್ರೀ ವೆಡ್ಡಿಂಗ್ ಪಾರ್ಟಿಗೆ ಹಾಜರಾಗಿತ್ತು. ದಕ್ಷಿಣ ಭಾರತ ಚಿತ್ರರಂಗದ ಕೆಲವು ತಾರೆಯರು ಸಹ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಇದೀಗ ಮತ್ತೊಮ್ಮೆ ಅಂದರೆ ಎರಡನೇ ಪ್ರೀ ವೆಡ್ಡಿಂಗ್ ಪಾರ್ಟಿಯನ್ನು ಆಯೋಜನೆ ಮಾಡಲಾಗುತ್ತಿದೆ. ಕಳೆದ ಬಾರಿಗಿಂತಲೂ ಈ ಬಾರಿಯ ಪಾರ್ಟಿ ಅದ್ಧೂರಿಯಾಗಿರಲಿದೆ.

ಅನಂತ್ ಹಾಗೂ ರಾಧಿಕಾರ ಎರಡನೇ ಪ್ರೀ ವೆಡ್ಡಿಂಗ್ ಪಾರ್ಟಿ ವಿದೇಶದಲ್ಲಿ ನಡೆಯಲಿದೆ. ಅದೂ ದೊಡ್ಡ ಐಶಾರಾಮಿ ಹಡಗಿನಲ್ಲಿ. ಇದೇ ತಿಂಗಳ 28ಕ್ಕೆ ಎರಡನೇ ಪ್ರೀ ವೆಡ್ಡಿಂಗ್ ಪಾರ್ಟಿ ಆಯೋಜನೆಗೊಳ್ಳಲಿದ್ದು, ಈ ಬಾರಿಯ ಪಾರ್ಟಿ ನಡೆಯಲಿರುವುದು ಸಮುದ್ರದಲ್ಲಿ. ಇಟಲಿಯಿಂದ ಐಶಾರಾಮಿ ಶಿಪ್​ನಲ್ಲಿ ಹೊರಟು, ಫ್ರಾನ್ಸ್​ನ ದಕ್ಷಿಣ ತೀರವನ್ನು ಈ ಬೃಹತ್ ಹಾಗೂ ಐಶಾರಾಮಿ ಹಡಗು ತಲುಪಲಿದೆ. ಈ ಪಾರ್ಟಿಯಲ್ಲಿ ಸುಮಾರು 800 ಮಂದಿ ಅತಿಥಿಗಳು ಭಾಗಿಯಾಗಲಿದ್ದಾರೆ. ಕಳೆದ ಬಾರಿ ರಾಜಸ್ಥಾನದಲ್ಲಿ ನಡೆದಿದ್ದ ಪಾರ್ಟಿಯಲ್ಲಿ 1200ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಆದರೆ ಈ ಪಾರ್ಟಿಗೆ ಅಂಬಾನಿ ಕುಟುಂಬಕ್ಕೆ ಬಹಳ ಆಪ್ತವಾಗಿರುವ ಪ್ರಮುಖರಷ್ಟೆ ಭಾಗಿಯಾಗಲಿದ್ದಾರೆ. 800 ಅತಿಥಿಗಳು ಭಾಗಿಯಾಗುವ ಈ ಕಾರ್ಯಕ್ರಮದಲ್ಲಿ 600 ಮಂದಿ ಸೇವಕರೇ ಇರಲಿದ್ದಾರೆ.

ಇದನ್ನೂ ಓದಿ:ಅನಂತ್ ಅಂಬಾನಿ ಧರಿಸಿದ್ದ 10 ಕೋಟಿ ರೂಪಾಯಿ ವಾಚ್ ನೋಡಿ ದಿಗ್ಭ್ರಮೆಗೊಂಡ ಜುಕರ್​ಬರ್ಗ್ ಪತ್ನಿ

ಇಟಲಿಯಿಂದ ಹೊರಡುವ ಐಶಾರಾಮಿ ಹಡುಗು 4380 ಕಿ.ಮೀ ಸಮುದ್ರದಲ್ಲಿಯೇ ಪ್ರಯಾಣ ನಡೆಸಲಿದೆ. ಹಡಗಿನಲ್ಲಿ ಅದ್ಧೂರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮ ಸಂಪೂರ್ಣ ಖಾಸಗಿ ಕಾರ್ಯಕ್ರಮವಾಗಿದ್ದು, ಕಾರ್ಯಕ್ರಮಕ್ಕೆ ಹೊರಗಿನ ಫೋಟೊಗ್ರಾಫರ್​ಗಳಿಗೆ ಅವಕಾಶವಿರುವುದಿಲ್ಲ, ಹಾಗೂ ಭಾಗವಹಿಸುವ ಅತಿಥಿಗಳಿಗೂ ಸಹ ಕೆಲವು ನಿಬಂಧನೆಗಳನ್ನು ಹೇರಲಾಗಿದೆ. ಈ ಕಾರ್ಯಕ್ರಮದಲ್ಲಿಯೂ ಸಹ ಕೆಲವು ಬಾಲಿವುಡ್ ಹಾಗೂ ಹಾಲಿವುಡ್ ತಾರೆಯರು ಭಾಗಿ ಆಗಲಿದ್ದಾರೆ. ಶಾರುಖ್, ಸಲ್ಮಾನ್ ಖಾನ್, ರಣ್​ಬೀರ್ ಕಪೂರ್, ಆಲಿಯಾ, ರಣ್ವೀರ್ ಸಿಂಗ್ ಇನ್ನೂ ಕೆಲವು ಬಾಲಿವುಡ್ ತಾರೆಯರು ಹಾಗೂ ಕ್ರಿಕೆಟರ್​ಗಳು ಈ ಐಶಾರಾಮಿ ಹಡಗಿನಲ್ಲಿ ತೆರಳಲಿದ್ದಾರೆ.

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರುಗಳು ಜುಲೈ ತಿಂಗಳಲ್ಲಿ ವಿವಾಹವಾಗಲಿದ್ದಾರೆ. ಇವರು ಜನವರಿ 19ರಂದು ನಿಶ್ಚಿತಾರ್ಥ ಮಾಡಿಕೊಂಡರು. ಬಹಳ ವರ್ಷಗಳಿಂದಲೂ ಈ ಇಬ್ಬರು ಪ್ರೀತಿಯಲ್ಲಿದ್ದರು. ರಾಧಿಕಾ ಮರ್ಚೆಂಟ್ ಸಹ ದೊಡ್ಡ ಉದ್ಯಮಿಯ ಪುತ್ರಿ. ರಾಧಿಕಾರ ತಂದೆ ವೀರೆನ್ ಮರ್ಚೆಂಟ್ ಎನ್​ಕೋರ್ ಹೆಲ್ತ್​ಕೇರ್ ಸಂಸ್ಥೆಯ ಸಿಇಓ, ರಾಧಿಕಾರ ತಾಯಿ ಶಾಲಿನಿ ಮರ್ಚೆಂಟ್ ಸಹ ತಮ್ಮದೇ ಆದ ಉದ್ಯಮವನ್ನು ಹೊಂದಿದ್ದಾರೆ. ರಾಧಿಕಾ ಹಾಗೂ ಅನಂತ್ ಶಾಲಾ ದಿನಗಳಿಂದಲೂ ಆಪ್ತರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ