AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಝಹೀರ್ ಇಖ್ಬಾಲ್ ಜತೆ ಮದುವೆ ಆದ ಬೆನ್ನಲೇ ಮನೆ ಮಾರಿದ ಸೋನಾಕ್ಷಿ ಸಿನ್ಹಾ; ಎಲ್ಲರಿಗೂ ಶಾಕ್

ಇದೇ ಮನೆಯಲ್ಲಿ ಸೋನಾಕ್ಷಿ ಸಿನ್ಹಾ ಅವರ ಮದುವೆ ನಡೆದಿತ್ತು. ಝಹೀರ್​ ಇಖ್ಬಾಲ್​ ಜೊತೆ ಮದುವೆ ಆದ ಕೆಲವೇ ದಿನಗಳಲ್ಲಿ ಸೋನಾಕ್ಷಿ ಸಿನ್ಹಾ ಅವರು ಈ ಮನೆಯನ್ನು ಮಾರಿದ್ದಾರೆ. ಇದು ಎಷ್ಟು ವಿಶಾಲವಾಗಿದೆ? ಈ ಮನೆಯ ಬೆಲೆ ಎಷ್ಟು ಕೋಟಿ ರೂಪಾಯಿ? ಇಲ್ಲಿ ಏನೆಲ್ಲ ಸೌಕರ್ಯ ಇದೆ ಎಂಬುದನ್ನು ತಿಳಿಸುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಝಹೀರ್ ಇಖ್ಬಾಲ್ ಜತೆ ಮದುವೆ ಆದ ಬೆನ್ನಲೇ ಮನೆ ಮಾರಿದ ಸೋನಾಕ್ಷಿ ಸಿನ್ಹಾ; ಎಲ್ಲರಿಗೂ ಶಾಕ್
ಸೋನಾಕ್ಷಿ ಸಿನ್ಹಾ, ಝಹೀರ್​ ಇಖ್ಬಾಲ್​
ಮದನ್​ ಕುಮಾರ್​
|

Updated on: Aug 20, 2024 | 5:49 PM

Share

ನಟಿ ಸೋನಾಕ್ಷಿ ಸಿನ್ಹಾ ಅವರು ಮದುವೆಯಾಗಿ ಈಗಿನ್ನೂ 2 ತಿಂಗಳು ಕಳೆಯುತ್ತಿದೆ. ಪ್ರಿಯಕರ ಝಹೀರ್​ ಇಖ್ಬಾಲ್​ ಜೊತೆ ಅವರು ಮದುವೆ ಆಗಿದ್ದು, ಆರಾಮಾಗಿ ಜೀವನ ಮಾಡುತ್ತಿದ್ದಾರೆ. ಆದರೆ ಈ ನಡುವೆ ಒಂದು ಶಾಕಿಂಗ್​ ವಿಚಾರ ತಿಳಿದುಬಂದಿದೆ. ಸೋನಾಕ್ಷಿ ಅವರು ಮುಂಬೈನಲ್ಲಿ ಇರುವ ತಮ್ಮ ಮನೆಯನ್ನು ಮಾರುತ್ತಿದ್ದಾರೆ ಎಂಬ ವಿಷಯ ಬಹಿರಂಗ ಆಗಿದೆ. ಬಹುಕೋಟಿ ರೂಪಾಯಿ ಬೆಲೆ ಬಾಳುವ ಈ ಮನೆಯನ್ನು ಅವರು ಯಾಕೆ ಮಾರುತ್ತಿದ್ದಾರೆ? ಅಂಥ ಅನಿವಾರ್ಯತೆ ಏನು ಎಂದು ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಮುಂಬೈನ ಬಾಂದ್ರಾದಲ್ಲಿ ಸೋನಾಕ್ಷಿ ಸಿನ್ಹಾ ಅವರು ಮನೆ ಹೊಂದಿದ್ದರು. ಸಮುದ್ರ ಕಡೆಗೆ ಮುಖ ಮಾಡಿರುವ ಈ ಫ್ಲಾಟ್​ ತುಂಬ ವಿಶಾಲವಾಗಿದೆ. 4200 ಚದರ ಅಡಿ ವಿಸ್ತೀರ್ಣದ ಈ ಮನೆಯಲ್ಲಿ ವಿಶಾಲವಾದ 2 ಬೆಡ್​ ರೂಮ್ ಇದೆ. ಅಸಲಿಗೆ, ಇದು 4 ಬೆಡ್​ ರೂಮ್​ನಷ್ಟು ವಿಶಾಲವಾದ ಜಾಗ. ಆದರೆ ಆ ಜಾಗದಲ್ಲಿ 2 ಬೆಡ್​ ರೂಮ್​ ಇದ್ದು, ಜಿಮ್, ಪ್ರೈವೇಟ್​ ಲಿಫ್ಟ್​ ಮುಂತಾದ ಸೌಕರ್ಯಗಳು ಇವೆ.

ಇದನ್ನೂ ಓದಿ: ಐದೇ ನಿಮಿಷದಲ್ಲಿ ಮದುವೆ ಡ್ರೆಸ್​ ಆಯ್ಕೆ ಮಾಡಿದ್ದ ನಟಿ ಸೋನಾಕ್ಷಿ ಸಿನ್ಹಾ; ಹೇಗೆ ಸಾಧ್ಯ?

ರಿಯಲ್​ ಎಸ್ಟೇಟ್​ ಕಂಪನಿಯೊಂದು ಈ ಮನೆಯ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದೆ. ಮನೆಯ ಎಲ್ಲ ಕೋಣೆಯನ್ನು ತೋರಿಸಲಾಗಿದೆ. ಎಲ್ಲಿಯೂ ಇದು ಸೋನಾಕ್ಷಿ ಸಿನ್ಹಾ ಅವರ ಮನೆ ಎಂದು ಉಲ್ಲೇಖಿಸಿಲ್ಲ. ಆದರೆ ಈ ವಿಡಿಯೋ ನೋಡಿದ ನೆಟ್ಟಿಗರಿಗೆ ಇದು ಸೋನಾಕ್ಷಿಯ ಮನೆ ಎಂಬುದು ಖಚಿತವಾಗಿದೆ. ಸ್ವತಃ ಸೋನಾಕ್ಷಿ ಸಿನ್ಹಾ ಕೂಡ ಈ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಲೈಕ್ ಮಾಡಿದ್ದಾರೆ.

ಅಂದಹಾಗೆ, ಈ ಮನೆಯ ಬೆಲೆ ಬರೋಬ್ಬರಿ 25 ಕೋಟಿ ರೂಪಾಯಿ! ಮುಂಬೈ ಮಹಾನಗರದಲ್ಲಿ ಇಷ್ಟು ದುಬಾರಿ ಬೆಲೆ ಬಾಳುವ ಆಸ್ತಿಯನ್ನು ಮಾರುವುದು ಎಂದರೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಇತ್ತೀಚೆಗಷ್ಟೇ ಮದುವೆ ಆಗಿರುವ ಸೋನಾಕ್ಷಿ ಸಿನ್ಹಾ ಅವರು ಮನೆ ಮಾರಾಟ ಮಾಡುತ್ತಿರುವುದು ಯಾಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಸೋನಾಕ್ಷಿ ಸಿನ್ಹಾ ಮತ್ತು ಝಹೀರ್​ ಇಖ್ಬಾಲ್​ ಅವರ ಮದುವೆ ನಡೆದಿದ್ದು ಕೂಡ ಇದೇ ಮನೆಯಲ್ಲಿ. ಈಗ ಅವರಿಗೆ ಹಣದ ಕೊರತೆ ಉಂಟಾಗಿರಬಹುದೇ ಎಂಬ ಪ್ರಶ್ನೆ ಸಹ ಅಭಿಮಾನಿಗಳನ್ನು ಕಾಡುತ್ತಿದೆ. ಇದಕ್ಕೆ ಸೋನಾಕ್ಷಿ ಸಿನ್ಹಾ ಉತ್ತರ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ!
ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ!
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು