ಎಲ್ಲ ಕಡೆಗಳಲ್ಲಿ ಅಮಿತಾಭ್ ಬಚ್ಚನ್ ಅವರ ವಿಚ್ಛೇದನ ವದಂತಿ ಚರ್ಚೆ ಆಗುತ್ತಿದೆ. ಹೀಗಿರುವಾಗಲೇ ಅಮಿತಾಭ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಸೇರಿ ರಿಯಲ್ ಎಸ್ಟೇಟ್ ಮೇಲೆ ಬರೋಬ್ಬರಿ 24.95 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಪಶ್ಚಿಮ ಮುಂಬೈನಲ್ಲಿ ತಂದೆ-ಮಗ ಒಟ್ಟಾಗಿ ಅಪಾರ್ಟ್ಮೆಂಟ್ ಖರೀದಿ ಮಾಡಿದ್ದಾರೆ. ಒಂದೇ ವರ್ಷದಲ್ಲಿ ಇವರು ಮಾಡಿದ ಹೂಡಿಕೆ 100 ಕೋಟಿ ರೂಪಾಯಿ ದಾಟಿದೆ.
ಮುಲುಂದ್ ಭಾಗದಲ್ಲಿ 3 ಬಿಎಚ್ಕೆ ಹಾಗೂ 4 ಬಿಎಚ್ಕೆ ಫ್ಲ್ಯಾಟ್ಗಳನ್ನು ಅಭಿಷೇಕ್ ಹಾಗೂ ಅಮಿತಾಭ್ ಒಟ್ಟಾಗಿ ಖರೀದಿ ಮಾಡಿದ್ದಾರೆ. ಒಂದೇ ಕಟ್ಟಡದಲ್ಲಿ 10 ಫ್ಲ್ಯಾಟ್ಗಳು ಇವೆ. ಈ ಪೈಕಿ ಅಭಿಷೇಕ್ ಬಚ್ಚನ್ ಅವರು ಆರು ಫ್ಲ್ಯಾಟ್ಗಳನ್ನು ಖರೀದಿ ಮಾಡಿದ್ದು 14.77 ಕೋಟಿ ರೂಪಾಯಿ ಕೊಟ್ಟಿದ್ದಾರೆ. ಉಳಿದ ನಾಲ್ಕು ಫ್ಲ್ಯಾಟ್ಗಳನ್ನು ಅಮಿತಾಭ್ ಬಚ್ಚನ್ ಅವರು 10 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ.
ಕೊವಿಡ್ ನಂತರ ಅಮಿತಾಭ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ನಿರಂತರವಾಗಿ ಹೂಡಿಕೆ ಮಾಡುತ್ತಿದ್ದಾರೆ. ನಾಲ್ಕು ವರ್ಷಗಳಲ್ಲಿ ಮುಂಬೈ ಭಾಗದಲ್ಲೇ 2019 ಕೋಟಿ ರೂಪಾಯಿ ಹೂಡಿಕೆ ಆಗಿದೆ. ಈ ವರ್ಷವೇ 100 ಕೋಟಿ ರೂಪಾಯಿನ ತಂದೆ-ಮಗ ರಿಯಲ್ ಎಸ್ಟೇಟ್ಮೇಲೆ ಹಾಕಿದ್ದಾರೆ.
ಇದನ್ನೂ ಓದಿ: ಬರ್ತ್ ಡೇ ಪಾರ್ಟಿಗೆ ಐಶ್ವರ್ಯಾ-ಆರಾಧ್ಯ ಜೊತೆ ಅಭಿಷೇಕ್ ಬಚ್ಚನ್ ಬಂದಿಲ್ಲ ಎಂಬುದು ನಿಜವೇ?
ಅಭಿಷೇಕ್ ಬಚ್ಚನ್ ಕುಟುಂಬದಲ್ಲಿ ಯಾವುದೂ ಸರಿ ಇಲ್ಲ ಎನ್ನಲಾಗುತ್ತಿದೆ. ಅಭಿಷೇಕ್ ಹಾಗೂ ಐಶ್ವರ್ಯಾ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಹರಿದಾಡಿದೆ. ಇವರು ಬೇರೆ ಆದರೆ ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾ ರೈಗೆ ಜೀವನಾಂಶ ನೀಡಬೇಕಾಗುತ್ತದೆ. ಅದು ನೂರಾರು ಕೋಟಿ ರೂಪಾಯಿ ಮೇಲೆ ಆಗಲಿದೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:57 am, Fri, 25 October 24