Kangana Ranaut: ‘ಎಮರ್ಜೆನ್ಸಿ’ ಬಿಡುಗಡೆಗೆ ವಿರೋಧ: ನಟಿ ಕಂಗನಾಗೆ ಕೊಲೆ ಬೆದರಿಕೆ

|

Updated on: Aug 27, 2024 | 10:53 AM

Kangana Ranaut: ನಟಿ, ಬಿಜೆಪಿ ಸಂಸದೆ ಕಂಗನಾ ರನೌತ್​ಗೆ ಕೊಲೆ ಬೆದರಿಕೆ ಹಾಕಲಾಗಿದೆ. ಕೆಲ ವ್ಯಕ್ತಿಗಳು ತಮಗೆ ಕೊಲೆ ಬೆದರಿಕೆ ಹಾಕಿರುವ ವಿಡಿಯೋವನ್ನು ಸ್ವತಃ ಕಂಗನಾ ರನೌತ್ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

Kangana Ranaut: ‘ಎಮರ್ಜೆನ್ಸಿ’ ಬಿಡುಗಡೆಗೆ ವಿರೋಧ: ನಟಿ ಕಂಗನಾಗೆ ಕೊಲೆ ಬೆದರಿಕೆ
ಕಂಗನಾ
Follow us on

ನಟಿ, ಸಂಸದೆ ಕಂಗನಾ ರನೌತ್ ತಮ್ಮ ಟ್ವೀಟ್​ಗಳಿಂದ ಆಗಾಗ್ಗೆ ಟೀಕೆಗೆ ಗುರಿಯಾಗುತ್ತಲೇ ಇರುತ್ತಾರೆ. ದ್ವೇಷಪೂರಿತ ಟ್ವೀಟ್​ಗಳಿಗಾಗಿ ಸಾಕಷ್ಟು ನಿಂದನೆ, ದೂರುಗಳನ್ನು ಸಹ ಅವರು ಎದುರಿಸಿದ್ದಾರೆ. ಆದರೆ ಇದೀಗ ತಮ್ಮ ಸಿನಿಮಾದ ಕಾರಣಕ್ಕೆ ಕಂಗನಾ ರನೌತ್​ಗೆ ಕೊಲೆ ಬೆದರಿಕೆಗಳು ಎದುರಾಗಿವೆ. ಕಂಗನಾ ರನೌತ್, ‘ಎಮರ್ಜೆನ್ಸಿ’ ಸಿನಿಮಾ ನಿರ್ಮಾಣ ಮಾಡಿದ್ದು, ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಆದರೆ ಸಿನಿಮಾ ಬಿಡುಗಡೆ ಮಾಡಬಾರದೆಂದು ಕೆಲವರು ಒತ್ತಾಯ ಮಾಡಿದ್ದು, ಕೊಲೆ ಬೆದರಿಕೆಗಳು ಸಹ ಬಂದಿವೆ.

ನಟಿ ಕಂಗನಾ ಸ್ವತಃ ಈ ಕೊಲೆ ಬೆದರಿಕೆ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋನಲ್ಲಿ ಸಿಖ್ ಸಮುದಾಯದ ಕೆಲ ವ್ಯಕ್ತಿಗಳು ಕೋಣೆಯೊಂದರಲ್ಲಿ ಕುಳಿತು ವಿಡಿಯೋ ಮಾಡಿದ್ದು, ವಿಡಿಯೋನಲ್ಲಿ ಕಂಗನಾರನ್ನು ಉದ್ದೇಶಿಸಿ ಮಾತನಾಡಿರುವ ಒಬ್ಬ ವ್ಯಕ್ತಿ, ‘ಒಂದೊಮ್ಮೆ ನೀನು ಈ ಸಿನಿಮಾ ಬಿಡುಗಡೆ ಮಾಡಿದರೆ ಪಂಜಾಬಿಯರಿಂದ ಹೇಗಾದರೂ ಚಪ್ಪಲಿಯಲ್ಲಿ ಹೊಡೆತ ತಿಂದೇ ತಿನ್ನುತ್ತೀಯ ಮಾತ್ರವಲ್ಲದೆ, ಕ್ರಿಶ್ಚಿಯನ್, ಮುಸ್ಲಿಂ ಇತರೆ ಹಿಂದೂಗಳು ಸಹ ನಿನ್ನನ್ನು ಚಪ್ಪಲಿಯಿಂದ ಸ್ವಾಗತ ಮಾಡಲಿದ್ದಾರೆ’ ಎಂದಿದ್ದಾರೆ.

ಇದನ್ನೂ ಓದಿ:ಮೊದಲ ಪ್ರಯತ್ನದಲ್ಲೇ ಗೆಲುವು, ಕಂಗನಾ ರನೌತ್ ಹೇಳಿದ್ದು ಹೀಗೆ

ಅದೇ ವಿಡಿಯೋನಲ್ಲಿ ಇನ್ನೊಬ್ಬ ಪಂಜಾಬಿ ವ್ಯಕ್ತಿ ಮಾತನಾಡಿ, ‘ಸಿನಿಮಾದಲ್ಲಿ ಒಂದೊಮ್ಮೆ ಜರ್ನಲ್ ಸಿಂಗ್ ಬಿಂದಾರ್ನ್​ವಾಲೆ ಅವರನ್ನು ಭಯೋತ್ಪಾದಕ ಎಂದು ನೀನು ತೋರಿಸಿದ್ದರೆ, ನೆನಪಿರಲಿ, ನೀನು ಯಾರ ಬಗ್ಗೆ ಸಿನಿಮಾ ಮಾಡುತ್ತಿದ್ದೀಯೋ ಅವರ ಗತಿ ಏನಾಯ್ತು ಎಂಬುದು (ಇಂದಿರಾ ಗಾಂಧಿ) ಅದೇ ಗತಿ ನಿನಗೂ ಆಗುತ್ತದೆ. ಅವರಿಗಾಗಿ ನಾವು ತಲೆ ಕಡಿಸಿಕೊಳ್ಳಲು ತಯಾರಿದ್ದೀವಿ ಹಾಗೆಯೇ ತಲೆ ಕಡಿಯಲು ಸಹ ತಯಾರಾಗುತ್ತೀವಿ’ ಎಂದಿದ್ದಾರೆ. ವಿಡಿಯೋನಲ್ಲಿ ನಟ, ರಾಜಕಾರಣಿ ಏಜಾಜ್ ಖಾನ್ ಸಹ ಇದ್ದಾರೆ. ಆದರೆ ಅವರು ಈ ಬಗ್ಗೆ ಏನೂ ಮಾತನಾಡಿಲ್ಲ.

ಸಿಖ್ ಸಮುದಾಯ, ಕಂಗನಾ ರನೌತ್​ರ ‘ಎಮರ್ಜೆನ್ಸಿ’ ಸಿನಿಮಾಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇಂದಿರಾ ಗಾಂಧಿಯ ಹತ್ಯೆಯನ್ನು ಸಿಖ್ ಸಮುದಾಯಕ್ಕೆ ಸೇರಿದ ಅವರ ಬಾಡಿಗಾರ್ಡ್​ಗಳೇ ಮಾಡಿದ್ದರು. ಇಂದಿರಾ ಗಾಂಧಿ, ‘ಬ್ಲೂ ಸ್ಟಾರ್ ಆಪರೇಷನ್’ ಮಾಡಿ ಅಮೃತ್​ಸರದ ಗೋಲ್ಡನ್​ ಟೆಂಪಲ್​ನಲ್ಲಿ ನುಸುಳಿದ್ದ ಕೆಲವು ಪ್ರತ್ಯೇಕತವಾದಿಗಳನ್ನು ಕೊಲ್ಲಿಸಿದ್ದರು. ಇದೇ ಕಾರಣಕ್ಕೆ ಇಂದಿರಾ ಗಾಂಧಿಯವರ ಹತ್ಯೆ ಮಾಡಲಾಗಿತ್ತು. ಈಗ ಕಂಗನಾ, ಇಂದಿರಾ ಗಾಂಧಿಯ ಕುರಿತು ಸಿನಿಮಾದಲ್ಲಿ ‘ಬ್ಲೂ ಸ್ಟಾರ್ ಆಪರೇಷನ್’ ಘಟನೆಯ ಪ್ರಸ್ತಾಪ ಆಗಲಿದ್ದು, ಪ್ರತ್ಯೇಕವಾದಿಗಳನ್ನು ಭಯೋತ್ಪಾದಕರಂತೆ ತೋರಿಸುವ ಸಾಧ್ಯತೆ ಇರುವ ಕಾರಣ ಈ ಸಿನಿಮಾಕ್ಕೆ ಸಿಖ್ ಸಮುದಾಯದ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ