AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್​ ಖಾನ್​ ಜೊತೆ ಅಟ್ಲಿ ಹೊಸ ಸಿನಿಮಾ ಅನೌನ್ಸ್​ ಮಾಡಲು ದಿನಾಂಕ ನಿಗದಿ ಆಯ್ತಾ?

ನಿರ್ದೇಶಕ ಅಟ್ಲಿ ಮತ್ತು ನಟ ಸಲ್ಮಾನ್​ ಖಾನ್​ ಅವರು ಒಂದಾಗಿ ಸಿನಿಮಾ ಮಾಡುತ್ತಾರೆ ಎಂಬ ಬಗ್ಗೆ ಬಹಳ ಹಿಂದಿನಿಂದಲೂ ಗಾಸಿಪ್​ ಕೇಳಿಬರುತ್ತಿದೆ. ಈ ಪ್ರಾಜೆಕ್ಟ್​ನಲ್ಲಿ ಸಲ್ಮಾನ್​ ಖಾನ್​ ಜೊತೆ ಮತ್ತೋರ್ವ ಸೂಪರ್​ ಸ್ಟಾರ್​ ಕೂಡ ಇರುತ್ತಾರೆ ಎನ್ನಲಾಗಿದೆ. ಈ ಸಿನಿಮಾದ ಘೋಷಣೆ ಶೀಘ್ರದಲ್ಲೇ ಆಗಲಿದೆ ಎಂದು ಗುಸುಗುಸು ಹಬ್ಬಿದೆ. ಆ ಕುರಿತು ಇನ್ನಷ್ಟು ವಿವರ ಇಲ್ಲಿದೆ...

ಸಲ್ಮಾನ್​ ಖಾನ್​ ಜೊತೆ ಅಟ್ಲಿ ಹೊಸ ಸಿನಿಮಾ ಅನೌನ್ಸ್​ ಮಾಡಲು ದಿನಾಂಕ ನಿಗದಿ ಆಯ್ತಾ?
ಅಟ್ಲಿ, ಸಲ್ಮಾನ್​ ಖಾನ್​
ಮದನ್​ ಕುಮಾರ್​
|

Updated on: Aug 27, 2024 | 10:36 PM

Share

ನಟ ಸಲ್ಮಾನ್​ ಖಾನ್​ ಅವರು ಒಂದು ದೊಡ್ಡ ಗೆಲುವಿಗಾಗಿ ಕಾದಿದ್ದಾರೆ. ಯಾಕೆಂದರೆ, ಅವರು ಇತ್ತೀಚೆಗೆ ನಟಿಸಿದ ಸಿನಿಮಾಗಳೆಲ್ಲವೂ ಸೋತಿವೆ. ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್’, ‘ಟೈಗರ್​ 3’ ಸಿನಿಮಾಗಳು ಸಲ್ಮಾನ್​ ಖಾನ್​ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದವು. ಹಾಗಾಗಿ ಅವರಿಗೆ ಒಂದು ಭರ್ಜರಿ ಹಿಟ್​ ಬೇಕಾಗಿದೆ. ಇದಕ್ಕಾಗಿ ಅವರು ಸೌತ್​ ಸಿನಿಮಾ ನಿರ್ದೇಶಕರ ಜೊತೆ ಕೈ ಜೋಡಿಸುತ್ತಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಜೊತೆ ಸಲ್ಮಾನ್​ ಖಾನ್ ಹೊಸ ಸಿನಿಮಾ ಘೋಷಣೆ ಮಾಡಲು ದಿನಾಂಕ ಫಿಕ್ಸ್​ ಆಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಆಗಿದೆ.

ಅಟ್ಲಿ ಅವರು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಹೊಂದಿದ್ದಾರೆ. ತಮಿಳು ಚಿತ್ರರಂಗದಲ್ಲಿ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದ ಅವರನ್ನು ಶಾರುಖ್​ ಖಾನ್​ ಅವರು ಬಾಲಿವುಡ್​ಗೆ ಕರೆಸಿಕೊಂಡರು. ಅಟ್ಲಿ-ಶಾರುಖ್​ ಖಾನ್​ ಕಾಂಬಿನೇಷನ್​ನಲ್ಲಿ ಮೂಡಿಬಂದಿದ್ದ ‘ಜವಾನ್’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿತು. ಆ ಸಿನಿಮಾದ ಯಶಸ್ಸಿನ ಬಳಿಕ ಅಟ್ಲಿ ಜೊತೆ ಸಿನಿಮಾ ಮಾಡಲು ಸಲ್ಮಾನ್​ ಖಾನ್​ ಆಸಕ್ತಿ ತೋರಿಸಿದರು ಎನ್ನಲಾಗಿದೆ.

ಸದ್ಯಕ್ಕೆ ಸಲ್ಮಾನ್​ ಖಾನ್​ ಅವರು ದಕ್ಷಿಣ ಭಾರತದ ಮತ್ತೋರ್ವ ಸ್ಟಾರ್​ ನಿರ್ದೇಶಕ ಎ.ಆರ್​. ಮುರುಗದಾಸ್​ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ‘ಸಿಕಂದರ್​’ ಎಂದು ಶೀರ್ಷಿಕೆ ಇಡಲಾಗಿದೆ. ರಶ್ಮಿಕಾ ಮಂದಣ್ಣ ಮತ್ತು ಸಲ್ಮಾನ್​ ಖಾನ್​ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಬಳಿಕ ಸಲ್ಮಾನ್​ ಖಾನ್​ ಅವರು ಅಟ್ಲಿ ಜೊತೆಗಿನ ಚಿತ್ರವನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ.

ಇದನ್ನೂ ಓದಿ: 55 ರೂಪಾಯಿ ಬಾಡಿಗೆ ರೂಮಿನಲ್ಲಿ ವಾಸವಾಗಿದ್ದ ಸಲ್ಮಾನ್​ ಖಾನ್​ ತಂದೆ ಸಲೀಂ ಖಾನ್

ಅಟ್ಲಿ ಜೊತೆ ಸಿನಿಮಾ ಮಾಡಿದರೆ ಸಲ್ಮಾನ್​ ಖಾನ್​ಗೆ ಖಂಡಿತವಾಗಿ ಭರ್ಜರಿ ಗೆಲುವು ಸಿಗಲಿದೆ ಎಂಬ ಅಭಿಪ್ರಾಯ ಅಭಿಮಾನಿಗಳಿಗೆ ಇದೆ. ಸ್ವತಃ ಸಲ್ಲು ಕೂಡ ಇದೇ ಆಲೋಚನೆ ಮಾಡಿದಂತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್​ 30ರಂದು ಈ ಹೊಸ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಸದ್ಯಕ್ಕಂತೂ ಈ ಬಗ್ಗೆ ಸಲ್ಮಾನ್​ ಖಾನ್​ ಕಡೆಯಿಂದಾಗಲಿ, ಅಟ್ಲಿ ಕಡೆಯಿಂದಾಗಲಿ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಹಾಗಿದ್ದರೂ ಕೂಡ ಗಾಸಿಪ್​ ಮಂದಿಯ ಬಾಯಲ್ಲಿ ಈ ಸುದ್ದಿ ಹರಿದಾಡುತ್ತಿದೆ.

ಒಟ್ಟಿನಲ್ಲಿ ಅಟ್ಲಿ ಅವರು ಬಾಲಿವುಡ್​ ಮಂದಿಯ ಫೇವರಿಟ್​ ಡೈರೆಕ್ಟರ್​ ಆಗಿರುವುದಂತೂ ನಿಜ. ಆ ಬೇಡಿಕೆಗೆ ತಕ್ಕಂತೆ ಅವರ ಸಂಭಾವನೆ ಕೂಡ ಜಾಸ್ತಿ ಆಗಿದೆ. ಬಾಲಿವುಡ್​ ಮಂದಿಯ ಪಾರ್ಟಿಗಳಲ್ಲಿ ಅಟ್ಲಿ ಆಗಾಗ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ