AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

55 ರೂಪಾಯಿ ಬಾಡಿಗೆ ರೂಮಿನಲ್ಲಿ ವಾಸವಾಗಿದ್ದ ಸಲ್ಮಾನ್​ ಖಾನ್​ ತಂದೆ ಸಲೀಂ ಖಾನ್

ಇಂದು ಸಲ್ಮಾನ್​ ಖಾನ್ ಕುಟುಂಬದಲ್ಲಿ ಸಾವಿರಾರು ಕೋಟಿ ರೂಪಾಯಿ ಇದೆ. ಆದರೆ ಸಲ್ಮಾನ್​ ಖಾನ್​ ಅವರ ತಂದೆ ಸಲೀಂ ಖಾನ್​ ಬಾಡಿಗೆ ಮನೆಯಲ್ಲಿ ಜೀವನ ಮಾಡುತ್ತಿದ್ದರು. ಆ ದಿನಗಳನ್ನು ಸಲೀಂ ಖಾನ್​ ಅವರು ಈಗ ಮೆಲುಕು ಹಾಕಿದ್ದಾರೆ. ‘ಆ್ಯಂಗ್ರಿ ಯಂಗ್​ ಮೆನ್​’ ಸಾಕ್ಷ್ಯಚಿತ್ರದಲ್ಲಿ ಅವರ ಸಂದರ್ಶನ ಇದೆ. ಸಲೀಂ ಖಾನ್​ ಅವರು ನೆನಪಿನ ಪುಟ ತೆರೆದಿದ್ದಾರೆ.

55 ರೂಪಾಯಿ ಬಾಡಿಗೆ ರೂಮಿನಲ್ಲಿ ವಾಸವಾಗಿದ್ದ ಸಲ್ಮಾನ್​ ಖಾನ್​ ತಂದೆ ಸಲೀಂ ಖಾನ್
ಸಲೀಂ ಖಾನ್​, ಸಲ್ಮಾನ್​ ಖಾನ್​
ಮದನ್​ ಕುಮಾರ್​
|

Updated on: Aug 20, 2024 | 7:02 PM

Share

ನಟ ಸಲ್ಮಾನ್​ ಖಾನ್​ ಅವರ ಬಳಿ ಬರೋಬ್ಬರಿ 2900 ಕೋಟಿ ರೂಪಾಯಿಗೂ ಅಧಿಕ ಹಣ ಇದೆ. ಭಾರತದ ಶ್ರೀಮಂತ ನಟರಲ್ಲಿ ಅವರು ಕೂಡ ಒಬ್ಬರು. ಸಲ್ಮಾನ್​ ಖಾನ್​ ಕುಟುಂಬದ ಶ್ರೀಮಂತಿಕೆ ಹೆಚ್ಚುತ್ತಲೇ ಇದೆ. ಆದರೆ ಒಂದು ಕಾಲದಲ್ಲಿ ಅವರ ಫ್ಯಾಮಿಲಿ ಬಡತನದಲ್ಲಿತ್ತು! ಹೌದು, ಈಗ ಬಹುಕೋಟಿ ರೂಪಾಯಿ ಬೆಲೆ ಬಾಳುವ ಬಂಗಲೆಗಳನ್ನು ಹೊಂದಿರುವ ಸಲ್ಮಾನ್​ ಖಾನ್​ ಅವರ ತಂದೆ ಸಲೀಂ ಖಾನ್​ ಕೇವಲ 55 ರೂಪಾಯಿ ಬಾಡಿಗೆಯ ರೂಮ್​ನಲ್ಲಿ ವಾಸವಾಗಿದ್ದರು. ‘ಆ್ಯಂಗ್ರಿ ಯಂಗ್​ ಮೆನ್​’ ಸಾಕ್ಷ್ಯಚಿತ್ರದಲ್ಲಿ ಅವರು ಈ ವಿಷಯ ಬಹಿರಂಗ ಮಾಡಿದ್ದಾರೆ.

ಬಾಲಿವುಡ್​ನ ಅನೇಕ ಸೂಪರ್​ ಹಿಟ್​ ಸಿನಿಮಾಗಳ ಹಿಂದೆ ಬರಹಗಾರನಾಗಿ ಕೆಲಸ ಮಾಡಿದವರು ಸಲೀಂ ಖಾನ್​. ಅವರ ಜೊತೆ ಜಾವೇದ್ ಅಖ್ತರ್ ಕೂಡ ಕೈ ಜೋಡಿಸಿದ್ದರು. ‘ಶೋಲೆ’ ರೀತಿಯ ಬ್ಲಾಕ್​ ಬಸ್ಟರ್​ ಸಿನಿಮಾಗಳ ಕಥೆ-ಚಿತ್ರಕಥೆ ಮೂಡಿಬಂದಿದ್ದು ಇದೇ ಸಲೀಂ-ಜಾವೇದ್​ ಜೋಡಿಯ ಲೇಖನದಲ್ಲಿ. ಈ ಸ್ಟಾರ್​ ಬರಹಗಾರರ ಜೀವನ ಮತ್ತು ಸಾಧನೆ ಬಗ್ಗೆ ‘ಆ್ಯಂಗ್ರಿ ಯಂಗ್​ ಮೆನ್​’ ಡಾಕ್ಯುಮೆಂಟರಿಯಲ್ಲಿ ವಿವರಿಸಲಾಗಿದೆ.

ಇಂದೋರ್​ನಿಂದ ಮುಂಬೈಗೆ ಬಂದಿದ್ದ ಸಲೀಂ ಖಾನ್​ ಅವರು ಕಷ್ಟ ದಿನಗಳನ್ನು ಕಂಡಿದ್ದರು. ಅವರು ಮುಂಬೈಗೆ ಹೋಗುವುದು ಅವರ ಅಣ್ಣನಿಗೆ ಇಷ್ಟ ಇರಲಿಲ್ಲ. ‘ನೀವು ಖಂಡಿತಾ ವಾಪಸ್​ ಓಡಿ ಬರುತ್ತೀಯ’ ಎಂದು ಅಣ್ಣ ಹೇಳಿದ್ದರು ಸಲೀಂ ಅವರ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಹಾಗಾಗಿ ಎಷ್ಟೇ ಕಷ್ಟ ಆದರೂ ಪರವಾಗಿಲ್ಲ, ವಾಪಸ್​ ಮುಂಬೈ ಬಿಟ್ಟು ಮನೆಗೆ ಹೋಗಬಾರದು ಎಂಬುದು ಸಲೀಂ ಹಠವಾಗಿತ್ತು.

ಇದನ್ನೂ ಓದಿ: ಬಾಲಿವುಡ್​ ದಿಗ್ಗಜರ ಸಾಕ್ಷ್ಯಚಿತ್ರದಲ್ಲಿ ರಾಕಿಂಗ್​ ಸ್ಟಾರ್​ ಯಶ್​; ಇದು ಯಶಸ್ಸು

ಆರಂಭದಲ್ಲಿ ತಮಗೆ ಸಿಕ್ಕ ಎಲ್ಲ ಅವಕಾಶಗಳನ್ನು ಸಲೀಂ ಖಾನ್​ ಒಪ್ಪಿಕೊಂಡರು. ನಂತರ ತಮಗೆ ನಟನೆಗಿಂತಲೂ ಕ್ಯಾಮೆರಾ ಹಿಂದೆ ಕೆಲಸ ಮಾಡುವ ಸಾಮರ್ಥ್ಯ ಚೆನ್ನಾಗಿದೆ ಎಂಬುದು ಅವರಿಗೆ ತಿಳಿಯಿತು. ಹಾಗಾಗಿ ಕಥೆ-ಚಿತ್ರಕಥೆ ಬರಹಗಾರನಾಗಿ ಮುಂದುವರಿಯಲು ಅವರು ನಿರ್ಧರಿಸಿದರು. ಜಾವೇದ್ ಅಖ್ತರ್​ ಜೊತೆ ಸೇರಿಕೊಂಡು ಸಲೀಂ ಖಾನ್​ ಅವರು ‘ಶೋಲೆ’, ‘ದೀವಾರ್​’, ‘ಝಂಜೀರ್​’, ‘ಡಾನ್​’, ‘ಮಿಸ್ಟರ್​ ಇಂಡಿಯಾ’ ಮುಂತಾದ ಸಿನಿಮಾಗಳಿಗೆ ಕಥೆ ಬರೆದರು. ಕನ್ನಡದ ‘ರಾಜ ನನ್ನ ರಾಜ’ ಮತ್ತು ‘ಪ್ರೇಮದ ಕಾಣಿಕೆ’ ಸಿನಿಮಾಗಳಿಗೆ ಕಥೆ ಬರೆದಿದ್ದು ಕೂಡ ಸಲೀಂ ಮತ್ತು ಜಾವೇದ್​.

‘ಆ್ಯಂಗ್ರಿ ಯಂಗ್​ ಮೆನ್​’ ಸಾಕ್ಷ್ಯಚಿತ್ರದಲ್ಲಿ ಯಶ್, ಸಲ್ಮಾನ್​ ಖಾನ್, ಕರಣ್​ ಜೋಹರ್​, ಆಮಿರ್​ ಖಾನ್​ ಮುಂತಾದ ನಟರ ಸಂದರ್ಶನ ಇದೆ. ‘ಅಮೇಜಾನ್​ ಪ್ರೈಂ ವಿಡಿಯೋ’ ಒಟಿಟಿಯಲ್ಲಿ ಆಗಸ್ಟ್​ 20ರಂದು ಈ ಡಾಕ್ಯುಮೆಂಟರಿ ಬಿಡುಗಡೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್