ರಣವೀರ್ ಸಿಂಗ್ (Ranveer Singh) ಅವರು ಪಾಪ್ ಸಂಸ್ಕೃತಿ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಚಿತ್ರ ವಿಚಿತ್ರ ಬಟ್ಟೆ ಧರಿಸಿ ಅವರು ಅನೇಕ ಬಾರಿ ಕಾಣಿಸಿಕೊಂಡಿದ್ದು ಇದೆ. ರಣವೀರ್ ಸಿಂಗ್ ಅವರಿಗೆ ಕ್ರಿಕೆಟ್ ಬಗ್ಗೆ ಹೆಚ್ಚು ಆಸಕ್ತಿ ಇದೆ. ಕ್ರಿಕೆಟ್ ಸ್ಟೇಡಿಯಂಗೆ ಹಲವು ಬಾರಿ ಬಂದು ಆಟಗಾರರನ್ನು ಚಿಯರ್ ಮಾಡಿದ್ದಾರೆ. ಇತ್ತೀಚೆಗೆ ಎನ್ಬಿಎ, ಇಪಿಎಲ್ ಹಾಗೂ ಯುಎಫ್ಸಿ ಮ್ಯಾಚ್ಗಳಲ್ಲಿ ಹಾಜರಿ ಹಾಕಿದ ನಂತರದಲ್ಲಿ ಈಗ ಅವರು ಫಾರ್ಮುಲಾ ಒನ್ (ಎಫ್ 1) ರೇಸ್ನಲ್ಲಿ ಭಾಗಿ ಆಗಿದ್ದರು. ಈ ವೇಳೆ ಅವರು ಹಲವು ಸೆಲೆಬ್ರಿಟಿಗಳನ್ನು ಭೇಟಿ ಮಾಡಿದ್ದಾರೆ.
ಫಾರ್ಮುಲಾ 1 ಲೆಜೆಂಡ್ ಫೆಲಿಪಿ ಮಾಸ್ಸಾ ಅವರನ್ನು ರಣವೀರ್ ಭೇಟಿ ಮಾಡಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್, ಜೋ ರೂಟ್, ಬೌಲರ್ ಜೇಮ್ಸ್ ಆ್ಯಂಡ್ರ್ಯೂಸನ್ ಅವರನ್ನು ರಣವೀರ್ ಭೇಟಿ ಮಾಡಿದ್ದಾರೆ. ಇಂಗ್ಲೆಂಡ್ ಆಟಗಾರ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಬೌಲರ್ ಜೋಫ್ರಾ ಆರ್ಚರ್ ಜತೆ ಐಪಿಎಲ್ ಬಗ್ಗೆ ರಣವೀರ್ ಸಿಂಗ್ ಮಾತನಾಡಿದ್ದಾರೆ ಎನ್ನಲಾಗಿದೆ. ಜೋಫ್ರಾ ಆರ್ಚರ್ ಅವರು ಗಾಯದ ಸಮಸ್ಯೆಯಿಂದ ಕಳೆದ ಸೀಸನ್ನಲ್ಲಿ ಆಟ ಆಡಿರಲಿಲ್ಲ.
ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್ ಜತೆಯೂ ರಣವೀರ್ ಕಾಣಿಸಿಕೊಂಡಿದ್ದಾರೆ. ಕ್ರಿಸ್ ಗೇಲ್ ಅವರು ಹಲವು ವರ್ಷಗಳ ಕಾಲ ಐಪಿಎಲ್ ಆಡಿದ್ದಾರೆ. ಈ ಕಾರಣಕ್ಕೆ ಅವರಿಗೆ ಭಾರತೀಯರ ಮೇಲೆ ವಿಶೇಷ ಪ್ರೀತಿ ಇದೆ. ಈ ಮೊದಲು ಕೂಡ ರಣವೀರ್ ಸಿಂಗ್ ಅವರು ಹಲವು ಬಾರಿ ಕ್ರಿಸ್ ಗೇಲ್ನ ಭೇಟಿ ಆಗಿದ್ದರು. ಖ್ಯಾತ ಗಾಯಕ ಏಕಾನ್ ಜತೆಗೂ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ.
ರಣವೀರ್ ಸಿಂಗ್ ಅವರು ತೆಗೆದುಕೊಂಡ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ರಣವೀರ್ ಸಿಂಗ್ ಅವರ ಲುಕ್ಗೆ ಫ್ಯಾನ್ಸ್ ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ರಣವೀರ್ ಸಿಂಗ್ ಅವರು ಹಳದಿ ಡ್ರೆಸ್ ಹಾಕಿ ಕಣ್ಣಿಗೆ ವಿಚಿತ್ರ ಗ್ಲಾಸ್ ಧರಿಸಿದ್ದರು.
ಇದನ್ನೂ ಓದಿ: ‘ನಾನು ವಿವಾದಾತ್ಮಕ ಫೋಟೋ ಅಪ್ಲೋಡ್ ಮಾಡಿಲ್ಲ’; ಪೊಲೀಸರ ಎದುರು ರಣವೀರ್ ಸಿಂಗ್ ಹೇಳಿಕೆ
ರಣವೀರ್ ಸಿಂಗ್ ಅವರಿಗೆ ಇತ್ತೀಚೆಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ‘ಸರ್ಕಸ್’, ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರಕ್ಕೆ ಕರಣ್ ಜೋಹರ್ ನಿರ್ದೇಶನ ಮಾಡುತ್ತಿದ್ದಾರೆ. ಆಲಿಯಾ ಭಟ್ ಈ ಚಿತ್ರಕ್ಕೆ ನಾಯಕಿ.