ಸಾರಾ ಅಲಿ ಖಾನ್ (Sara Ali Khan) ಅವರು ಸ್ಟಾರ್ ನಟನ ಮಗಳು. ಇವರು ಕೂಡ ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರಿಗೆ ಸೆಲೆಬ್ರಿಟಿ ಪಟ್ಟ ಸಿಕ್ಕಿದೆ. ಆದರೆ, ಜನಸಾಮಾನ್ಯರಂತೆ ಇರಲು ಅವರು ಬಯಸುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಅವರು ರಸ್ತೆ ಬದಿಯ ಅಂಗಡಿಯಲ್ಲಿ ಶಾಪಿಂಗ್ ಮಾಡಿದ್ದಾರೆ. ಅವರ ಸಿಂಪ್ಲಿಸಿಟಿಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಕೇಳಿ ಬರುತ್ತಿದೆ.
ಸಾರಾ ಅಲಿ ಖಾನ್ ಸೋಲಿನ ಸುಳಿಯಲ್ಲಿದ್ದರು. ಇತ್ತೀಚೆಗೆ ತೆರೆಗೆ ಬಂದ ಅವರ ನಟನೆಯ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಕೂಡ ಸೋಲಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಸಿನಿಮಾ ಗೆದ್ದಿದೆ. ವಿಕ್ಕಿ ಕೌಶಲ್ ನಟನೆಯ ಈ ಚಿತ್ರ ಸೂಪರ್ ಹಿಟ್ ಎನಿಸಿಕೊಂಡಿದೆ. ಹಾಗಿದ್ದರೂ ಕೂಡ ಸಾರಾ ಅವರು ಅಟ್ಟಕ್ಕೆ ಏರಿ ಕುಳಿತಿಲ್ಲ. ತಮ್ಮ ಸರಳತೆಯನ್ನು ಅವರು ಮುಂದುವರಿಸಿಕೊಂಡು ಹೋಗಿದ್ದಾರೆ.
ಬಾಂದ್ರಾದಲ್ಲಿ ಸಾರಾ ಅಲಿ ಖಾನ್ ನಡೆದುಕೊಂಡು ಹೋಗಿದ್ದಾರೆ. ರಸ್ತೆ ಬದಿ ಅಂಗಡಿಯಲ್ಲಿ ಸಾಮಾನ್ಯರಂತೆ ತೆರಳಿ ಬಟ್ಟೆ ಖರೀದಿ ಮಾಡಿದ್ದಾರೆ. ಈ ವಿಡಿಯೋನ ಪಾಪರಾಜಿಗಳು ಹಂಚಿಕೊಂಡಿದ್ದಾರೆ. ಸಾರಾ ಅವರನ್ನು ಎಲ್ಲರೂ ಹೊಗಳಿದ್ದಾರೆ. ಈ ಸರಳತೆ ಹೀಗೆಯೇ ಮುಂದುವರಿಯಲಿ ಎಂದು ಅನೇಕರು ಹೇಳಿದ್ದಾರೆ.
ಇದನ್ನೂ ಓದಿ: ‘ನಿಮಗೆ ಇಷ್ಟ ಇಲ್ಲ ಅಂತ ನಾನು ದೇವಸ್ಥಾನಕ್ಕೆ ಹೋಗೋದು ನಿಲ್ಲಿಸಲ್ಲ’: ಸಾರಾ ಅಲಿ ಖಾನ್
ಸಾರಾ ಅಲಿ ಖಾನ್ ಅವರು ಸಿನಿಮೇತರ ವಿಚಾರಕ್ಕೂ ಸುದ್ದಿ ಆಗುತ್ತಾರೆ. ಅವರು ಆಗಾಗ ಹಿಂದೂ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇದರಿಂದ ಅವರು ಟ್ರೋಲ್ ಆದ ಉದಾಹರಣೆ ಇದೆ. ಆದರೆ, ಇದಕ್ಕೆಲ್ಲ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ‘ನಿಮಗೆ ಇಷ್ಟ ಇಲ್ಲ ಎನ್ನುವ ಕಾರಣಕ್ಕೆ ನಾನು ದೇವಸ್ಥಾನಕ್ಕೆ ತೆರಳುವುದನ್ನು ನಿಲ್ಲಿಸುವುದಿಲ್ಲ’ ಎಂದು ಸಾರಾ ಅಲಿ ಖಾನ್ ಅವರು ಓಪನ್ ಆಗಿಯೇ ಹೇಳಿಕೊಂಡಿದ್ದರು.
ದೇವಸ್ಥಾನಕ್ಕೆ ತೆರಳುವುದು ಒಂದು ಪ್ರಚಾರದ ಗಿಮಿಕ್ ಎಂದು ನೆಟ್ಟಿಗರು ಸಾರಾ ಅಲಿ ಖಾನ್ ಅವರ ಕಾಲೆಳೆದಿದ್ದರು. ಚಿತ್ರದ ಗೆಲುವಿಗಾಗಿ ಸೆಲೆಬ್ರಿಟಿಗಳು ಇಂಥದ್ದನ್ನೆಲ್ಲ ಮಾಡುತ್ತಾರೆ ಎಂಬ ಕಮೆಂಟ್ಗಳು ಕೂಡ ಬಂದಿದ್ದವು. ಅದಕ್ಕೆಲ್ಲ ಸಾರಾ ಅಲಿ ಖಾನ್ ಅವರು ತಲೆಕೆಡಿಸಿಕೊಂಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:46 am, Sat, 15 July 23