Anupam Shyam Death: ಬಹು ಅಂಗಾಂಗ ವೈಫಲ್ಯದಿಂದ ಹಿರಿಯ ನಟ ಅನುಪಮ್​ ಶ್ಯಾಮ್​ ನಿಧನ

Anupam Shyam: ‘ಮನ್​ ಕಿ ಅವಾಜ್:​ ಪ್ರತಿಗ್ಯಾ’ ಸೀರಿಯಲ್​ ಮೂಲಕ ಅನುಪಮ್​ ಶ್ಯಾಮ್ ಫೇಮಸ್​ ಆಗಿದ್ದರು. ‘ಸ್ಲಂ ಡಾಗ್​ ಮಿಲಿಯನೇರ್​’, ‘ಬ್ಯಾಂಡಿಟ್​ ಕ್ವೀನ್​’ ಮುಂತಾದ ಸಿನಿಮಾಗಳಲ್ಲೂ ಅವರು ನಟಿಸಿದ್ದರು.

Anupam Shyam Death: ಬಹು ಅಂಗಾಂಗ ವೈಫಲ್ಯದಿಂದ ಹಿರಿಯ ನಟ ಅನುಪಮ್​ ಶ್ಯಾಮ್​ ನಿಧನ
ಅನುಪಮ್​ ಶ್ಯಾಮ್​
Edited By:

Updated on: Aug 09, 2021 | 10:16 AM

ಹಿರಿಯ ನಟ ಅನುಪಮ್​ ಶ್ಯಾಮ್​ (Anupam Shyam) ಅವರು ಸೋಮವಾರ (ಆ.9) ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೆಲವೇ ದಿನಗಳ ಹಿಂದೆ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹು ಅಂಗಾಗ ವೈಫಲ್ಯದಿಂದ ಅವರು ಕೊನೆಯುಸಿರು ಎಳೆದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. ಮೂತ್ರಪಿಂಡದ ಸೋಂಕಿನ (Kidney Infection) ಕಾರಣ ಅನುಪಮ್​ ಶ್ಯಾಮ್​ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ನಿಧನದ ಸುದ್ದಿಯನ್ನು ಸ್ನೇಹಿತ, ನಟ ಯಶ್​ಪಾಲ್​ ಶರ್ಮಾ ಖಚಿತಪಡಿಸಿದ್ದಾರೆ.

‘ಮನ್​ ಕಿ ಅವಾಜ್:​ ಪ್ರತಿಗ್ಯಾ’ ಸೀರಿಯಲ್​ ಮೂಲಕ ಅನುಪಮ್​ ಶ್ಯಾಮ್ ಫೇಮಸ್​ ಆಗಿದ್ದರು. ‘ಸ್ಲಂ ಡಾಗ್​ ಮಿಲಿಯನೇರ್​’, ‘ಬ್ಯಾಂಡಿಟ್​ ಕ್ವೀನ್​’ ಮುಂತಾದ ಸಿನಿಮಾಗಳಲ್ಲೂ ಅವರು ನಟಿಸಿದ್ದರು. ಅನುಪಮ್​ ಶ್ಯಾಮ್​ ನಿಧನಕ್ಕೆ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ‘ಅವರು ಕೊನೆಯುಸಿರು ಎಳೆಯುವಾಗ ಸಹೋದರರಾದ ಅನುರಾಗ್​ ಮತ್ತು ಕಾಂಚನ್​ ಜೊತೆಯಲ್ಲಿ ಇದ್ದರು. ಅನುಪಮ್​ಗೆ ಮಧುಮೇಹ ಅಧಿಕವಾಗಿತ್ತು. ತಮ್ಮ ಕೊನೇ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಇನ್ಸುಲಿನ್​ ತೆಗೆದುಕೊಳ್ಳುತ್ತಿದ್ದರು’ ಎಂದು ಯಶ್​ಪಾಲ್  ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ:

ಜಯಂತಿ ನಿಧನಕ್ಕೆ ಕಂಬನಿ ಮಿಡಿದ ಪುನೀತ್​ ರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್

ದಿಲೀಪ್​ ಕುಮಾರ್​ ನಿಧನಕ್ಕೆ ಪಾಕ್​ ಕ್ರಿಕೆಟರ್ ಶಾಹಿದ್​ ಅಫ್ರಿದಿ ಸಂತಾಪ; ಯೂಸುಫ್ ಖಾನ್ ಸಾಹೀಬ್​ ಸದಾ ನಮ್ಮ ಹೃದಯದಲ್ಲಿ ನೆಲೆಸಿರುತ್ತಾರೆ ಎಂದು ಟ್ವೀಟ್​

Published On - 10:14 am, Mon, 9 August 21