AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬ್ರಹ್ಮಾಸ್ತ್ರ’ ಸೀಕ್ವೆಲ್​ಗಳ ಬಿಡುಗಡೆ ದಿನಾಂಕದ ಬಗ್ಗೆ ಬ್ರೇಕಿಂಗ್ ನ್ಯೂಸ್​ ನೀಡಿದ ಅಯಾನ್​ ಮುಖರ್ಜಿ

Brahmastra Movie Sequels: ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಕ್ಕ ಬೆಂಬಲ ಕಂಡು ಅಯಾನ್​ ಮುಖರ್ಜಿ ಅವರ ಹುಮ್ಮಸ್ಸು ಹೆಚ್ಚಿತು. ಈಗ ಅವರು ಪಾರ್ಟ್​ 2 ಹಾಗೂ ಪಾರ್ಟ್​ 3 ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

‘ಬ್ರಹ್ಮಾಸ್ತ್ರ’ ಸೀಕ್ವೆಲ್​ಗಳ ಬಿಡುಗಡೆ ದಿನಾಂಕದ ಬಗ್ಗೆ ಬ್ರೇಕಿಂಗ್ ನ್ಯೂಸ್​ ನೀಡಿದ ಅಯಾನ್​ ಮುಖರ್ಜಿ
ರಣಬೀರ್ ಕಪೂರ್
ಮದನ್​ ಕುಮಾರ್​
|

Updated on: Apr 04, 2023 | 1:05 PM

Share

2022ರಲ್ಲಿ ಬಾಲಿವುಡ್​ ಪಾಲಿಗೆ ‘ಬ್ರಹ್ಮಾಸ್ತ್ರ’ ಸಿನಿಮಾ (Brahmastra Movie) ಆಶಾಕಿರಣ ಆಗಿತ್ತು. ಬೇರೆಲ್ಲ ಸ್ಟಾರ್​ ನಟರ ಚಿತ್ರಗಳು ನೆಲ ಕಚ್ಚುತ್ತಿರುವಾಗ ರಣಬೀರ್​ ಕಪೂರ್​ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ಮೋಡಿ ಮಾಡಿತು. ಭಾರತದ ಮಾರುಕಟ್ಟೆಯಲ್ಲಿ ಈ ಚಿತ್ರ ಬರೋಬ್ಬರಿ 257 ಕೋಟಿ ರೂಪಾಯಿ ಕಮಾಯಿ ಮಾಡಿತ್ತು. ಅದರಿಂದ ನಿರ್ದೇಶಕ ಅಯಾನ್​ ಮುಖರ್ಜಿ (Ayan Mukerji) ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ರಣಬೀರ್​ ಕಪೂರ್​ (Ranbir Kapoor) ಮುಖದಲ್ಲಿ ನಗು ಮೂಡಿತು. ‘ಬ್ರಹ್ಮಾಸ್ತ್ರ’ ರಿಲೀಸ್​ ಆಗುವುದಕ್ಕೂ ಮುನ್ನವೇ ಅದರ ಪಾರ್ಟ್​ 2 ಮತ್ತು ಪಾರ್ಟ್​ 3 ಘೋಷಿಸಲಾಗಿತ್ತು. ಈಗ ಆ ಸಿನಿಮಾಗಳ ರಿಲೀಸ್​ ದಿನಾಂಕದ ಬಗ್ಗೆ ನಿರ್ದೇಶಕ ಅಯಾನ್​ ಮುಖರ್ಜಿ ಅವರು ಅಪ್​ಡೇಟ್​ ನೀಡಿದ್ದಾರೆ.

ಆರಂಭದಲ್ಲಿ ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ ಟ್ರೋಲ್​ ಕಾಟ ಎದುರಾಗಿತ್ತು. ಕಳಪೆ ಗ್ರಾಫಿಕ್ಸ್​ ಇದೆ ಎಂಬ ಕಾರಣಕ್ಕೆ ಟ್ರೇಲರ್​ ನೋಡಿದವರು ಕಟು ಟೀಕೆ ಮಾಡಿದ್ದರು. ಆದರೆ ಬಾಕ್ಸ್​ ಆಫೀಸ್​ ಗಳಿಕೆ ಮೇಲೆ ಟ್ರೋಲ್​ನಿಂದ ಕೆಟ್ಟ ಪರಿಣಾಮ ಆಗಲಿಲ್ಲ. ಪ್ರೇಕ್ಷಕರ ವಲಯದಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಕೂಡ ಈ ಸಿನಿಮಾ 7 ವಾರಗಳ ಕಾಲ ಪ್ರದರ್ಶನ ಕಂಡು 257 ಕೋಟಿ ರೂಪಾಯಿ ಗಳಿಸಿತು. ಪ್ರೇಕ್ಷಕರಿಂದ ಸಿಕ್ಕ ಬೆಂಬಲ ಕಂಡು ಅಯಾನ್​ ಮುಖರ್ಜಿ ಅವರ ಹುಮ್ಮಸ್ಸು ಹೆಚ್ಚಿತು. ಈಗ ಅವರು‘ಬ್ರಹ್ಮಾಸ್ತ್ರ: ಪಾರ್ಟ್​ 2’ ಹಾಗೂ ‘ಬ್ರಹ್ಮಾಸ್ತ್ರ: ಪಾರ್ಟ್​ 3’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ
Image
Alia Bhatt: ಪತ್ನಿ ಆಲಿಯಾ ಗರ್ಭಿಣಿ, ಆದ್ರೆ ಬೇರೆ ನಟಿ ಜೊತೆ ಹೆಚ್ಚಿತು ರಣಬೀರ್​ ಹಾಟ್ನೆಸ್​; ಎಚ್ಚರಿಕೆ ನೀಡಿದ ಫ್ಯಾನ್ಸ್
Image
Brahmastra: ಶಿವ ಎಂಬ ಪಾತ್ರ ಮಾಡಿ, ಶೂ ಧರಿಸಿ ದೇವಸ್ಥಾನ ಪ್ರವೇಶಿಸಿದ ರಣಬೀರ್​; ಇದು ‘ಬ್ರಹ್ಮಾಸ್ತ್ರ’ ಎಡವಟ್ಟು
Image
Brahmastra Trailer: ಬೆಂಕಿಯೂ ಸುಡಲಾರದ ವ್ಯಕ್ತಿಯ ಪಾತ್ರದಲ್ಲಿ ರಣಬೀರ್​ ಕಪೂರ್​; ಹೇಗಿದೆ ‘ಬ್ರಹ್ಮಾಸ್ತ್ರ’ ಟ್ರೇಲರ್​?
Image
ರಣಬೀರ್​​-ಆಲಿಯಾ ಮದುವೆಗೆ ದೀಪಿಕಾ, ಕತ್ರಿನಾ ಗಿಫ್ಟ್​ ಏನು? ದಂಪತಿಗೆ ಕೋಟ್ಯಂತರ ರೂ. ಬೆಲೆಯ ಉಡುಗೊರೆ

ಇದನ್ನೂ ಓದಿ: Ranbir Kapoor: ಮಗಳ ಮೇಲಿನ ಪ್ರೀತಿಗೆ ಸಿನಿಮಾ ಕೆಲಸಗಳಿಂದ ದೂರ ಇರಲು ನಿರ್ಧರಿಸಿದ ರಣಬೀರ್​ ಕಪೂರ್​

ಸೋಶಿಯಲ್​ ಮೀಡಿಯಾದಲ್ಲಿ ಅಯಾನ್​ ಮುಖರ್ಜಿ ಅವರು ಹಂಚಿಕೊಂಡಿರುವ ಮಾಹಿತಿ ಪ್ರಕಾರ ‘ಬ್ರಹ್ಮಾಸ್ತ್ರ: ಪಾರ್ಟ್​ 2’ ಸಿನಿಮಾ 2026ರ ಡಿಸೆಂಬರ್​ ತಿಂಗಳಲ್ಲಿ ಬಿಡುಗಡೆ ಆಗಲಿದೆ. ‘ಬ್ರಹ್ಮಾಸ್ತ್ರ: ಪಾರ್ಟ್​ 3’ ಚಿತ್ರ 2027ರ ಡಿಸೆಂಬರ್​ಗೆ ತೆರೆಕಾಣಲಿದೆ. ಅಂದರೆ ಪ್ರೇಕ್ಷಕರು ಈ ಚಿತ್ರಗಳನ್ನು ಕಣ್ತುಂಬಿಕೊಳ್ಳಲು 3-4 ವರ್ಷ ಕಾಯಬೇಕು.

View this post on Instagram

A post shared by Ayan Mukerji (@ayan_mukerji)

ಸಿನಿಮಾಗಳ ಆಯ್ಕೆಯಲ್ಲಿ ರಣಬೀರ್ ಕಪೂರ್​ ಅವರು ಚ್ಯೂಸಿ ಆಗಿದ್ದಾರೆ. ತಮಗೆ ಸೂಕ್ತ ಎನಿಸುವ ಸಿನಿಮಾಗಳನ್ನು ಮಾತ್ರ ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. ಸದ್ಯ ಅವರ ಗಮನವೆಲ್ಲ ‘ಅನಿಮಲ್​’ ಚಿತ್ರದ ಮೇಲಿದೆ. ಆ ಸಿನಿಮಾ ಆಗಸ್ಟ್​ 11ರಂದು ರಿಲೀಸ್​ ಆಗಲಿದೆ. ‘ಅನಿಮಲ್​’ ತೆರೆಕಂಡ ಬಳಿಕ ರಣಬೀರ್​ ಕಪೂರ್​ ಅವರು ಬ್ರೇಕ್​ ತೆಗೆದುಕೊಳ್ಳಲಿದ್ದಾರೆ. ಮಗಳ ಜೊತೆ ಕಾಲ ಕಳೆಯಬೇಕು ಎಂಬುದು ಅವರ ಉದ್ದೇಶ. ನಂತರ ಅವರು ‘ಬ್ರಹ್ಮಾಸ್ತ್ರ: ಪಾರ್ಟ್​ 2’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್