Aishwarya Rai: ಕಾನ್ ಚಿತ್ರೋತ್ಸವದಲ್ಲಿ ಮಸ್ತ್​ ಆಗಿ ಕಾಣಿಸಿಕೊಂಡ ಐಶ್ವರ್ಯಾ ರೈ; ನಟಿಯ ಅಂದಕ್ಕೆ ಸೋತ ಫ್ಯಾನ್ಸ್

Cannes Film Festival: ಸೆಲೆಬ್ರಿಟಿಗಳು ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕುವುದು ಕಾನ್​ ಚಿತ್ರೋತ್ಸವದ ಒಂದು ವಿಶೇಷ ಆಕರ್ಷಣೆ. ಇಂತಹ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ ಭಾಗಿ ಆಗಿದ್ದಾರೆ.  

Aishwarya Rai: ಕಾನ್ ಚಿತ್ರೋತ್ಸವದಲ್ಲಿ ಮಸ್ತ್​ ಆಗಿ ಕಾಣಿಸಿಕೊಂಡ ಐಶ್ವರ್ಯಾ ರೈ; ನಟಿಯ ಅಂದಕ್ಕೆ ಸೋತ ಫ್ಯಾನ್ಸ್
ಐಶ್ವರ್ಯಾ ರೈ

Updated on: May 19, 2023 | 8:04 AM

ನಟಿ ಐಶ್ವರ್ಯಾ ರೈ (Aishwarya Rai) ಅವರು ಕುಟುಂಬದ ಕೆಲಸಗಳ ಮಧ್ಯೆ ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ ಹಲವು ಅವಾರ್ಡ್ ಫಂಕ್ಷನ್​ಗಳಿಗೆ ಅವರು ಹಾಜರಿ ಹಾಕುತ್ತಾರೆ. ಈ ರೀತಿಯ ಸಮಾರಂಭಗಳಲ್ಲಿ ಐಶ್ವರ್ಯಾ ಅವರನ್ನು ನೋಡುವುದೇ ಫ್ಯಾನ್ಸ್​​ಗೆ ಹಬ್ಬ. ಅವರು ಧರಿಸುವ ಬಟ್ಟೆ ಎಲ್ಲರ ಗಮನ ಸೆಳೆಯುವಂತಿರುತ್ತದೆ. ಐಶ್ವರ್ಯಾ ರೈ ಅವರು ಈಗ ಕಾನ್ ಚಿತ್ರೋತ್ಸವದಲ್ಲಿ ಭಾಗಿ ಆಗಿದ್ದಾರೆ. ಫ್ರಾನ್ಸ್​ನಲ್ಲಿ ನಡೆಯುತ್ತಿರುವ ಈ ಚಿತ್ರೋತ್ಸವದಲ್ಲಿ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಅವರ ಅಂದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

2023ನೇ ಸಾಲಿನ ಕಾನ್ ಚಿತ್ರೋತ್ಸವ ಮೇ 16ರಂದು ಆರಂಭ ಆಗಿದೆ. ದೇಶ-ವಿದೇಶದ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ. ಸೆಲೆಬ್ರಿಟಿಗಳು ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕುವುದು ಕಾನ್​ ಚಿತ್ರೋತ್ಸವದ ಒಂದು ವಿಶೇಷ ಆಕರ್ಷಣೆ. ಮನಮೋಹಕವಾದ ಉಡುಗೆಗಳನ್ನು ತೊಟ್ಟು ಅವರೆಲ್ಲ ಪೋಸ್​ ನೀಡುತ್ತಾರೆ. ಸೆಲೆಬ್ರಿಟಿಗಳ ಫೋಟೋ, ವಿಡಿಯೋಗಾಗಿ ಸಾವಿರಾರು ಕ್ಯಾಮೆರಾಗಳು ಮುಗಿ ಬೀಳುತ್ತವೆ. ಇಂತಹ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ ಭಾಗಿ ಆಗಿದ್ದಾರೆ.

ಐಶ್ವರ್ಯಾ ರೈ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ‘ಐಶ್ವರ್ಯಾ ರೈ ನಿಜಕ್ಕೂ ಕ್ವೀನ್’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಐಶ್ವರ್ಯಾ ಅವರನ್ನು ಕೊಂಡಾಡಿದ್ದಾರೆ. ಅವರು ಇನ್ನೂ ಕೆಲವು ದಿನ ಫ್ರಾನ್ಸ್​ನಲ್ಲೇ ಇರಲಿದ್ದಾರೆ.

ಇದನ್ನೂ ಓದಿ:  ‘ರಶ್ಮಿಕಾ ಮಂದಣ್ಣ ಬಗ್ಗೆ ನಾನು ಹಾಗೆಲ್ಲ ಹೇಳಿಲ್ಲ’: ವಿವಾದದ ಬಳಿಕ ಐಶ್ವರ್ಯಾ ರಾಜೇಶ್​ ಸ್ಪಷ್ಟನೆ

ಐಶ್ವರ್ಯಾ ರೈ ಅವರು ಕಾನ್ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು 2002ರಲ್ಲಿ. ನಂತರ ಅವರು ಈ ಚಿತ್ರೋತ್ಸವಕ್ಕೆ ಜ್ಯೂರಿ ಕೂಡ ಆದರು. ನಂತರ ಹಲವು ಬಾರಿ ಐಶ್ವರ್ಯಾ ರೈ ಅವರು ಕೆಂಪು ಹಾಸಿನ ಮೇಲೆ ನಡೆದಿದ್ದಾರೆ. ಈ ವರ್ಷ ಮೃಣಾಲ್ ಠಾಕೂರ್, ಇಶಾ ಗುಪ್ತಾ, ಸಾರಾ ಅಲಿ ಖಾನ್ ಮೊದಲಾದ ಭಾರತದ ನಟಿಮಣಿಯರು ಈ ಕೆಂಪು ಹಾಸಿನ ಮೇಲೆ ನಡೆದಿದ್ದಾರೆ. ಶೀಘ್ರದಲ್ಲೇ ಅನುಷ್ಕಾ ಶರ್ಮಾ ಕೂಡ ಈ ಸಿನಿಮೋತ್ಸವದಲ್ಲಿ ಭಾಗಿ ಆಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:58 am, Fri, 19 May 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us