Aishwarya Rajesh: ‘ರಶ್ಮಿಕಾ ಮಂದಣ್ಣ ಬಗ್ಗೆ ನಾನು ಹಾಗೆಲ್ಲ ಹೇಳಿಲ್ಲ’: ವಿವಾದದ ಬಳಿಕ ಐಶ್ವರ್ಯಾ ರಾಜೇಶ್​ ಸ್ಪಷ್ಟನೆ

Rashmika Mandanna: ಐಶ್ವರ್ಯಾ ರಾಜೇಶ್ ಅವರ ಹೇಳಿಕೆಯನ್ನು ಇಟ್ಟುಕೊಂಡು ಸೋಶಿಯಲ್​ ಮೀಡಿಯಾದಲ್ಲಿ ಕೆಲವರು ಟ್ರೋಲ್​ ಮಾಡಿದ್ದರು. ಅದರ ಬೆನ್ನಲ್ಲೇ ನಟಿಯ​ ಕಡೆಯಿಂದ ಸ್ಪಷ್ಟನೆ ಬಂದಿದೆ.

Aishwarya Rajesh: ‘ರಶ್ಮಿಕಾ ಮಂದಣ್ಣ ಬಗ್ಗೆ ನಾನು ಹಾಗೆಲ್ಲ ಹೇಳಿಲ್ಲ’: ವಿವಾದದ ಬಳಿಕ ಐಶ್ವರ್ಯಾ ರಾಜೇಶ್​ ಸ್ಪಷ್ಟನೆ
ಐಶ್ವರ್ಯಾ ರಾಜೇಶ್
Follow us
ಮದನ್​ ಕುಮಾರ್​
|

Updated on: May 18, 2023 | 3:50 PM

ನಟಿ ಐಶ್ವರ್ಯಾ ರಾಜೇಶ್​ (Aishwarya Rajesh) ಅವರು ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಲವಾರು ಸಿನಿಮಾಗಳಲ್ಲಿ ನಟಿಸಿ ಅವರು ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ (Rashmika Mandanna) ಬಗ್ಗೆ ಅವರು ಆಡಿದ ಮಾತುಗಳು ಚರ್ಚೆಗೆ ಕಾರಣ ಆಗಿದ್ದವು. ಆದರೆ ಈಗ ತಮ್ಮ ಹೇಳಿಕೆ ಬಗ್ಗೆ ಐಶ್ವರ್ಯಾ ರಾಜೇಶ್​ ಅವರು ಸ್ಪಷ್ಟನೆ ನೀಡಿದ್ದಾರೆ. ‘ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದು ಅವರು ಹೇಳಿದ್ದಾರೆ. ‘ಪುಷ್ಪ (Pushpa) ಸಿನಿಮಾದಲ್ಲಿನ ಶ್ರೀವಲ್ಲಿ ಪಾತ್ರವನ್ನು ರಶ್ಮಿಕಾ ಮಂದಣ್ಣ ಅವರಿಗಿಂತ ನಾನೇ ಚೆನ್ನಾಗಿ ಮಾಡುತ್ತಿದ್ದೆ’ ಎಂದು ಐಶ್ವರ್ಯಾ ರಾಜೇಶ್​ ಹೇಳಿದ್ದರು ಎಂದು ಸುದ್ದಿ ಆಗಿತ್ತು. ಆ ವಿಚಾರ ಇಟ್ಟುಕೊಂಡು ಸೋಶಿಯಲ್​ ಮೀಡಿಯಾದಲ್ಲಿ ಕೆಲವರು ಟ್ರೋಲ್​ ಮಾಡಿದ್ದರು. ಅದರ ಬೆನ್ನಲ್ಲೇ ಐಶ್ವರ್ಯಾ ರಾಜೇಶ್​ ಕಡೆಯಿಂದ ಸ್ಪಷ್ಟನೆ ಬಂದಿದೆ.

ಐಶ್ವರ್ಯಾ ರಾಜೇಶ್​ ಪರವಾಗಿ ಅವರ ಪಿ.ಆರ್​. ತಂಡದವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ‘ಕೆಲಸದ ಬಗ್ಗೆ ಮಾತನಾಡುವಾಗ, ತೆಲುಗು ಚಿತ್ರರಂಗದಲ್ಲಿ ನಾನು ಯಾವ ರೀತಿಯ ಪಾತ್ರಗಳನ್ನು ಮಾಡಲು ಬಯಸುತ್ತೇನೆ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ನನ್ನನ್ನು ಕೇಳಲಾಯಿತು. ನಾನು ತೆಲುಗು ಚಿತ್ರರಂಗವನ್ನು ತುಂಬಾ ಇಷ್ಟಪಡುತ್ತೇನೆ ಮತ್ತು ನನಗೆ ಇಷ್ಟವಾಗುವ ಪಾತ್ರಗಳು ಸಿಕ್ಕರೆ ನಾನು ಖಂಡಿತವಾಗಿಯೂ ತೆಲುಗು ಚಿತ್ರಗಳನ್ನು ಮಾಡುತ್ತೇನೆ ಎಂದು ಉತ್ತರಿಸಿದೆ. ಒಂದು ಉದಾಹರಣೆಯನ್ನು ಹೇಳುವುದಾದರೆ, ಪುಷ್ಪದಲ್ಲಿನ ಶ್ರೀವಲ್ಲಿ ಪಾತ್ರವು ನನಗೆ ತುಂಬಾ ಇಷ್ಟವಾಯಿತು ಹಾಗೂ ಅಂತಹ ಪಾತ್ರಗಳು ನನಗೆ ಸರಿಹೊಂದುತ್ತವೆ ಅಂತ ನಾನು ತಿಳಿಸಿದೆ’ ಎಂದಿದ್ದಾರೆ ಐಶ್ವರ್ಯಾ ರಾಜೇಶ್​.

‘ಆದರೆ, ದುರದೃಷ್ಟವಶಾತ್, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ಅದ್ಭುತ ಕೆಲಸವನ್ನು ನಾನು ಅವಹೇಳನ ಮಾಡುತ್ತಿದ್ದೇನೆ ಎಂಬ ಭಾವನೆಯನ್ನು ಮೂಡಿಸುವ ರೀತಿಯಲ್ಲಿ ವರದಿ ಮಾಡಲಾಗುತ್ತಿದೆ’ ಎಂದು ಐಶ್ವರ್ಯಾ ರಾಜೇಶ್​ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Mrunal Thakur: ‘ನ್ಯಾಷನಲ್​ ಕ್ರಶ್​’ ಬಿರುದು ಪಡೆದುಕೊಂಡ ಮೃಣಾಲ್​ ಠಾಕೂರ್​; ಈಗ ರಶ್ಮಿಕಾ ಮಂದಣ್ಣ ಪಾಡು ಏನು?

‘ಆ ಹೇಳಿಕೆಯಿಂದ ಉಂಟಾದ ಗೊಂದಲವನ್ನು ನಿವಾರಿಸಲು ಈ ಸ್ಪಷ್ಟನೆ ನೀಡುತ್ತಿದ್ದೇನೆ. ‘ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ಅವರ ಕೆಲಸದ ಬಗ್ಗೆ ನನಗೆ ತುಂಬಾ ಅಭಿಮಾನವಿದೆ ಮತ್ತು ನನ್ನ ಎಲ್ಲಾ ಸಹ ನಟ-ನಟಿಯರ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ’ ಎಂದು ಐಶ್ವರ್ಯಾ ರಾಜೇಶ್​ ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ