ಪ್ರಭಾಸ್ ಮೇಲೆ ರೇಪ್ ಕೇಸ್ ಇದೆ, ಜೂ ಎನ್​ಟಿಆರ್ ಪೋರ್ನ್ ಸಿನಿಮಾದಲ್ಲಿ ನಟಿಸಿದ್ದಾನೆ: ಸ್ಯಾಕ್ರಿಫೈಸ್ ಸ್ಟಾರ್ ಸುನಿಶ್ಚಿತ್

Prabhas-Jr NTR: ನಟ ಪ್ರಭಾಸ್ ಹಾಗೂ ಜೂ ಎನ್​ಟಿಆರ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾನೆ ಸ್ಯಾಕ್ರಿಫೈಸ್ ಸ್ಟಾರ್ ಸುನಿಶ್ಚಿತ್.

ಪ್ರಭಾಸ್ ಮೇಲೆ ರೇಪ್ ಕೇಸ್ ಇದೆ, ಜೂ ಎನ್​ಟಿಆರ್ ಪೋರ್ನ್ ಸಿನಿಮಾದಲ್ಲಿ ನಟಿಸಿದ್ದಾನೆ: ಸ್ಯಾಕ್ರಿಫೈಸ್ ಸ್ಟಾರ್ ಸುನಿಶ್ಚಿತ್
ಪ್ರಭಾಸ್
Follow us
ಮಂಜುನಾಥ ಸಿ.
|

Updated on: May 18, 2023 | 4:04 PM

ತೆಲುಗು ಚಿತ್ರರಂಗಕ್ಕೆ (Tollywood) ನೇರವಾಗಿ ಸಂಬಂಧಪಟ್ಟಿಲ್ಲದಿದ್ದರೂ ಚಿತ್ರರಂಗವನ್ನು ಬೇರೆ-ಬೇರೆ ರೀತಿಯಲ್ಲಿ ಕಾಡುತ್ತಿರುವ ಸ್ಯಾಕ್ರಿಫೈಸ್ ಸ್ಟಾರ್, ಸೋದಿ ಸ್ಟಾರ್ ಎಂದು ಹೆಸರಾಗಿರುವ ಸುನಿಶ್ಚಿತ್ ಹೆಸರಿನ ಯುವಕನೊಬ್ಬನಿದ್ದಾನೆ. ಬಾಯಿಬಟ್ಟರೆ ಬರೀ ಸುಳ್ಳೇ ಉದುರಿಸುವ ಈತ ಪ್ರಚಾರಾಕ್ಕಾಗಿ ಬಳಸಿಕೊಳ್ಳುವುದು ತೆಲುಗು ಚಿತ್ರರಂಗದ ಟಾಪ್ ನಟ, ನಟಿಯರನ್ನೇ. ತನ್ನ ಈ ಸುಳ್ಳುಕೋರತನದಿಂದ ಈಗಾಗಲೆ ಕೆಲವು ಬಾರಿ ಏಟು ತಿಂದಿರುವ ಸುನಿಶ್ಚಿತ್ (sacrifice star sunisith), ಈಗ ಮತ್ತೊಮ್ಮೆ ನಾಲಗೆ ಹರಿಬಿಟ್ಟಿದ್ದಾನೆ. ಈ ಬಾರಿ ಪ್ರಭಾಸ್ (Prabhas) ಹಾಗೂ ಜೂ ಎನ್​ಟಿಆರ್ (Jr NTR) ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದ್ದಾನೆ.

ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸುನಿಶ್ಚಿತ್, ”ನನ್ನ ಮೇಲೆ ಸುಳ್ಳು ರೇಪ್ ಕೇಸ್ ದಾಖಲಾಗಿದೆ. ಇಂಡಸ್ಟ್ರಿಯಲ್ಲಿ ಸಾಕಷ್ಟು ಜನರ ಮೇಲೆ ಅತ್ಯಾಚಾರ ಪ್ರಕರಣಗಳು ಇವೆ. ಪ್ರಭಾಸ್ ಮೇಲೆ ಸಹ ಅತ್ಯಾಚಾರ ಪ್ರಕರಣ ಇದೆ. ಆದರೆ ಪ್ರಭಾಸ್, ಪೊಲೀಸರಿಗೆ ಇತರರಿಗೆ ಧಮ್ಕಿ ಹಾಕಿ ಬಂಧನದಿಂದ ತಪ್ಪಿಸಿಕೊಂಡಿದ್ದಾನೆ” ಎಂದಿದ್ದಾನೆ.

ಮುಂದುವರೆದು, ”ಜೂ ಎನ್​ಟಿಆರ್ ನನಗೆ ಬಹಳ ಆತ್ಮಿಯ ಅವನ ಬಗ್ಗೆ ಹಲವು ವಿಷಯಗಳು ನನಗೆ ಗೊತ್ತು. ಜೂ ಎನ್​ಟಿಆರ್ ಪಾರ್ನ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ವಿಷಯ ಯಾರಿಗೂ ಗೊತ್ತಿಲ್ಲ ಆದರೆ ನನಗೆ ಗೊತ್ತು” ಎಂದಿದ್ದಾನೆ ಈ ಪುಣ್ಯಾತ್ಮ! ಈತನ ಸುಳ್ಳುಗಳ ವರಾತ ಇಷ್ಟಕ್ಕೆ ನಿಂತಿಲ್ಲ, ತೆಲುಗಿನ ಖ್ಯಾತ ಹಾಸ್ಯನಟ, ಬ್ರಹ್ಮಾನಂದಂ ಕೊಲೆ ಮಾಡಿದ್ದಾರೆ ಅವರ ಮೇಲೆ ಕೊಲೆ ಪ್ರಕರಣ ಇದೆಯಂತೆ ಆದರೆ ಅವರು ಹಣ ಕೊಟ್ಟು ಜೈಲಿಗೆ ಹೋಗುವುದರಿಂದ ವಿನಾಯಿತಿ ಪಡೆದಿದ್ದಾರಂತೆ!

ಈತ ಹೀಗೆ ಬಾಯಿಗೆ ಬಂದಂತೆ ಮಾತನಾಡಿರುವುದು ಇದು ಮೊದಲೇನೂ ಅಲ್ಲ. ಈ ಮೊದಲು ತನಗೂ ನಟಿ ಲಾವಣ್ಯಾ ತ್ರಿಪಾಠಿಗೂ ಮದುವೆ ಆಗಿದೆ ಎಂದು ಹೇಳಿಕೊಂಡಿದ್ದ. ಯಾವ ಮಟ್ಟಿಗೆ ಸುಳ್ಳುಗಳನ್ನು ಕ್ಯಾಮೆರಾ ಮುಂದೆ ಹರಿಬಿಟ್ಟಿದ್ದನೆಂದರೆ, ಲಾವಣ್ಯಾ ಜೊತೆ ಸಂಸಾರದಿಂದಾಗಿ ಆಕೆ ಗರ್ಭಿಣಿ ಆಗಿ ಕನಿಷ್ಟ ಮೂರು ಬಾರಿ ಗರ್ಭಪಾತ ಮಾಡಿಸಿದ್ದಾಗಿಯೂ ಹೇಳಿದ್ದ. ಇವರ ಮಾತುಗಳು ಯೂಟ್ಯೂಬ್​ನಲ್ಲಿ ವೈರಲ್ ಆಗುತ್ತಿದ್ದಂತೆ ನಟಿ ಲಾವಣ್ಯಾ ತ್ರಿಪಾಠಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಈತನನ್ನು ಬಂಧಿಸಿದ್ದರು. ಲಾವಣ್ಯಾ ಮಾತ್ರವೇ ಅಲ್ಲದೆ ತಾನು ತಮನ್ನಾ ಹಾಗೂ ಸಮಂತಾರನ್ನೂ ಮದುವೆ ಆಗಿದ್ದಾಗಿಯೂ ಕೆಲವು ಸಂದರ್ಶನಗಳಲ್ಲಿ ಈತ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ:Prabhas: ಹೇಗಿರಲಿದೆ ‘ಸಲಾರ್​’ ಸಿನಿಮಾ ಇಂಟರ್​ವಲ್​ ದೃಶ್ಯ? ಪ್ರಭಾಸ್​ ಅಭಿಮಾನಿಗಳಿಗೆ ಸಿಗಲಿದೆ ಭರ್ಜರಿ ಟ್ರೀಟ್​

ಅದಕ್ಕೂ ಮುನ್ನ ಮಹೇಶ್ ಬಾಬು ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದ, ತಾನು ಒನ್ ಸಿನಿಮಾದ ಮೊದಲ ಹೀರೋ ಎಂದು ಹೇಳಿಕೊಂಡಿದ್ದ ಈತ. ಸುಕುಮಾರ್ ನನ್ನನ್ನು ಆಡಿಷನ್ ಮಾಡಿ ನನ್ನನ್ನೇ ಸೆಲೆಕ್ಟ್ ಮಾಡಿದ್ದರು. ನಾವು ಕೆಲ ದಿನಗಳ ಕಾಲ ಚಿತ್ರೀಕರಣ ಸಹ ಮಾಡಿದ್ದೆವು ಆದರೆ ಮಹೇಶ್ ಬಾಬು, ಸುಕುಮಾರ್​ಗೆ ಕರೆ ಮಾಡಿ ಆ ಸಿನಿಮಾದಲ್ಲಿ ನಾನು ನಟಿಸಬೇಕು ಎಂದ ಹಾಗಾಗಿ ನನ್ನನ್ನು ಹೊರಗೆ ಹಾಕಿದರು. ಮಹೇಶ್ ಬಾಬು ಬಹಳ ಕೆಟ್ಟ ವ್ಯಕ್ತಿ ಮಹಾನ್ ಮೋಸಗಾರ ನನಗೆ ಮೋಸ ಮಾಡಿದ ಎಂದೆಲ್ಲ ಈ ಸುನಿಶ್ಚಿತ್ ಹೇಳಿದ್ದ. ಇದು ಮಹೇಶ್ ಬಾಬು ಅಭಿಮಾನಿಗಳ ಕಣ್ಣು ಕೆಂಪಗೆ ಮಾಡಿತ್ತು. ಮಹೇಶ್ ಬಾಬು ಅಭಿಮಾನಿಗಳು ಸುನಿಶ್ಚಿತ್​ ಮೇಲೆ ದಾಳಿ ಮಾಡಿ ಹಲ್ಲೆ ಸಹ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ