The Kerala Story: ಬಂಗಾಳದಲ್ಲಿ “ದಿ ಕೇರಳ ಸ್ಟೋರಿ” ಸಿನಿಮಾ ನಿಷೇಧಕ್ಕೆ ಸುಪ್ರೀಂ ತಡೆ
ದಿ ಕೇರಳ ಸ್ಟೋರಿ ಸಿನಿಮಾವನ್ನು ಪಶ್ಚಿಮ ಬಂಗಾಲದಲ್ಲಿ ನಿಷೇಧಿಸಿತ್ತು, ಆದರೆ ಈ ತೀರ್ಮಾನಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ದೆಹಲಿ: ದಿ ಕೇರಳ ಸ್ಟೋರಿ (The Kerala Story) ಸಿನಿಮಾವನ್ನು ಪಶ್ಚಿಮ ಬಂಗಾಲದಲ್ಲಿ ನಿಷೇಧಿಸಿತ್ತು, ಆದರೆ ಈ ತೀರ್ಮಾನಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಸಂಸ್ಕೃತಿ ಮತ್ತು ಭಾವನೆಗಳಿಗೆ ವಾಕ್ ಸ್ವಾತಂತ್ರ್ಯವನ್ನು ತರಲು ಸಾಧ್ಯವಿಲ್ಲ ಎಂದು ಹೇಳಿದರು. ಜತೆಗೆ ತಮಿಳುನಾಡಿನಲ್ಲಿ ಥಿಯೇಟರ್ ಭದ್ರತೆ ನೀಡಲು ಸೂಚನೆ ನೀಡಲಾಗಿದೆ. ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಪ್ರಮಾಣ ಪತ್ರ ನೀಡಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ. ಇನ್ನೂ ಬಂಗಾಳ ಸರ್ಕಾರ ನೀಡಿದ ಸಮರ್ಥನೆ ಸ್ಪಷ್ಟವಾಗಿಲ್ಲ ಎಂದು ಹೇಳಿದೆ. ಈ ಸಿನಿಮಾವು ಒಂದು ವೇಳೆ ಸಮಾಜದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ ಎಂದಿದ್ದರೆ, ಖಂಡಿತ ಅದು ಇಷ್ಟ ಮಟ್ಟಿಗೆ ಹಣ ಗಳಿಸುತ್ತಿರಲಿಲ್ಲ ಎಂದು ಹೇಳಿದೆ. ಇನ್ನೂ ಸಿಬಿಎಫ್‌ಸಿ ಪ್ರಮಾಣ ಪತ್ರದ ಬಗ್ಗೆ ಜೂನ್ನಲ್ಲಿ ವಿಚಾರಣೆ ಮಾಡಲಾಗುವುದು ಎಂದು ಹೇಳಿದೆ. ಭಾರೀ ವಿವಾದವನ್ನು ಸೃಷ್ಟಿಸಿರುವ ದಿ ಕೇರಳ ಸ್ಟೋರಿಯನ್ನು ಬಂಗಾಳದಲ್ಲಿ ನಿಷೇಧ ಮಾಡಲಾಗಿತ್ತು ಮತ್ತು ತಮಿಳುನಾಡಿನಲ್ಲಿ ಚಿತ್ರಮಂದಿರಗಳೇ ಪ್ರದರ್ಶನ ಮಾಡುವುದಿಲ್ಲ ಎಂದು ಹೇಳಿತ್ತು, ನಂತರ ದಿ ಕೇರಳ ಸ್ಟೋರಿ ಸಿನಿಮಾದ ನಿರ್ದೇಶಕರು ಸುಪ್ರೀಂ ಮೆಟ್ಟಿಲೇರಿದ್ದರು, ಈ ಅರ್ಜಿ ವಿಚಾರಣೆ ಮಾಡಿದ ಸುಪ್ರೀಂ ಈ ಬಗ್ಗೆ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದರು, ಯಾಕೆ ಈ ಸಿಮಾನವನ್ನು ನಿಷೇಧ ಯಾಕೆ ಮಾಡಬೇಕು ಎಂದು ನೋಟಿಸ್ ನೀಡಿತ್ತು.
ಆದರೆ ಇದಕ್ಕೆ ಪಶ್ಚಿಮ ಬಂಗಾಳ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ, ಆದರೆ ತಮಿಳುನಾಡು ಸರ್ಕಾರ, ಇದು ಚಿತ್ರಮಂದಿರದ ವ್ಯವಸ್ಥಾಪಕರೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಚಿತ್ರಮಂದಿರಕ್ಕೆ ಜನ ಬರದ ಕಾರಣ ಮತ್ತು ಈ ಸಿನಿಮಾದಲ್ಲಿ ಯಾವುದೇ ಜನಪ್ರಿಯ ನಾಯಕರು ಇಲ್ಲ ಎಂಬ ಕಾರಣಕ್ಕೆ ತಮಿಳುನಾಡಿನಲ್ಲಿ ಜನ ಬರುತ್ತಿಲ್ಲ ಎಂದು ಹೇಳಿದೆ. ಆದರೆ ಇದೀಗ ಸುಪ್ರೀಂ ಸಿನಿಮಾ ನಿಷೇಧ ಮಾಡುವಂತಿಲ್ಲ, ಇದು ಯಾವುದೇ ಸಂಸ್ಕೃತಿ ಮತ್ತು ಭಾವನೆಗೆ ಧಕ್ಕೆ ಮಾಡುವಂತಿಲ್ಲ ಎಂದು ಹೇಳಿದೆ. ಇನ್ನೂ ತಮಿಳುನಾಡಿನಲ್ಲಿ ಥಿಯೇಟರ್ ಭದ್ರತೆ ನೀಡಲು ಸೂಚನೆ ನೀಡಿದೆ.
ಪಶ್ಚಿಮ ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾ ಬ್ಯಾನ್ ಯಾಕೆ?
ರಾಜ್ಯದ ಯಾವುದೇ ಚಿತ್ರಮಂದಿರಲ್ಲೂ ‘ದಿ ಕೇರಳ ಸ್ಟೋರಿ’ ಸಿನಿಮಾ ಪ್ರದರ್ಶನ ಆಗಬಾರದು ಎಂದು ಆದೇಶಿಸಲಾಗಿದೆ. ‘ಶಾಂತಿ ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದ್ವೇಷ ಮತ್ತು ಹಿಂಸೆ ಹರಡುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ ಎಂದು ವರದಿ ಆಗಿದೆ. ಸುದೀಪ್ತೋ ಸೇನ್ ನಿರ್ದೇಶನದ ಈ ಸಿನಿಮಾದಲ್ಲಿ ಅದಾ ಶರ್ಮಾ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಕೇರಳದಲ್ಲಿ ನಡೆದಿದೆ ಎನ್ನಲಾದ ಮತಾಂತರ ಮತ್ತು ಲವ್ ಜಿಹಾದ್ ಕುರಿತು ಈ ಸಿನಿಮಾದಲ್ಲಿ ತೋರಿಸಲಾಗಿದೆ.
‘ದಿ ಕೇರಳ ಸ್ಟೋರಿ’ ಸಿನಿಮಾದ ಟೀಸರ್ ರಿಲೀಸ್ ಆದಾಗಲೇ ವಿವಾದ ಶುರುವಾಗಿತ್ತು. ಟ್ರೇಲರ್ ಕೂಡ ವಿವಾದಕ್ಕೆ ಕಾರಣ ಆಗಿತ್ತು. ಈ ಸಿನಿಮಾದ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಸುಪ್ರೀಂ ಕೋರ್ಟ್ಗೆ ಕೇರಳ ಸರ್ಕಾರ ಮನವಿ ಮಾಡಿತ್ತು. ಆದರೆ ಆ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಮೇ 5ರಂದು ಬಿಡುಗಡೆಯಾದ ‘ದಿ ಕೇರಳ ಸ್ಟೋರಿ’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸುಪ್ರೀಂ ಕೋರ್ಟ್ ನೋಟಿಸ್ಗೆ ಉತ್ತರ ನೀಡಿದ ತಮಿಳುನಾಡು ಸರ್ಕಾರ
ಸುಪ್ರೀಂ ನೋಟಿಸ್ಗೆ ಉತ್ತರಿಸಿದ ತಮಿಳುನಾಡು ಸರ್ಕಾರ, ದಿ ಕೇರಳ ಸ್ಟೋರಿ ಬಿಡುಗಡೆಗೊಂಡು 2 ದಿನವಾದರು ಸಿನಿಮಾ ನೋಡಲು ಯಾರು? ಬರುತ್ತಿಲ್ಲ ಎಂಬ ಕಾರಣಕ್ಕೆ ರಾಜ್ಯಾದ್ಯಂತ ಥಿಯೇಟರ್ ಮಾಲೀಕರು ಈ ಕ್ರಮಕ್ಕೆ ಬಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ನೋಟಿಸ್ಗೆ ತಮಿಳುನಾಡು ಸರ್ಕಾರ ಉತ್ತರಿಸಿದೆ. ಮಲ್ಟಿಪ್ಲೆಕ್ಸ್ ಮಾಲೀಕರು ಮೇ7 ರಿಂದ ಚಿತ್ರ ಪ್ರದರ್ಶನವನ್ನು ನಿಲ್ಲಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ, ಇದಕ್ಕೆ ಕಾರಣ ಪ್ರಸಿದ್ಧ ನಟರ ಕೊರತೆ, ಕಳಪೆ ಪ್ರದರ್ಶನ ಮತ್ತು ಹೆಚ್ಚಾಗಿ ಈ ಚಿತ್ರವನ್ನು ನೋಡು ಜನರೇ ಇರಲಿಲ್ಲ ಎಂದು ತಮಿಳುನಾಡು ಸರ್ಕಾರ ಪತ್ರದಲ್ಲಿ ಉತ್ತರಿಸಿದೆ. ಜತೆಗೆ ಇದು ಹಿಂದಿ ಭಾಷೆಯಲ್ಲಿ ಮೇ 5ರಂದು 19 ಮಲ್ಟಿಪ್ಲೆಕ್ಸ್ಗಳಲ್ಲಿ ಬಿಡುಗಡೆಯಾಗಿದೆ ಎಂದು ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:30 pm, Thu, 18 May 23