Prabhas: ಹೇಗಿರಲಿದೆ ‘ಸಲಾರ್​’ ಸಿನಿಮಾ ಇಂಟರ್​ವಲ್​ ದೃಶ್ಯ? ಪ್ರಭಾಸ್​ ಅಭಿಮಾನಿಗಳಿಗೆ ಸಿಗಲಿದೆ ಭರ್ಜರಿ ಟ್ರೀಟ್​

Salaar Movie:: ‘ಕೆಜಿಎಫ್​ 2’ ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ‘ಸಲಾರ್​’ ಸಿನಿಮಾದ ತೆರೆ ಹಿಂದೆ ಶ್ರಮಿಸುತ್ತಿದ್ದಾರೆ. ಪ್ರತಿ ಹಂತದಲ್ಲೂ ಈ ಚಿತ್ರದ ಬಗ್ಗೆ ಇಂಟರೆಸ್ಟಿಂಗ್​ ವಿಚಾರಗಳು ಕೇಳಿಬರುತ್ತಿವೆ.

Prabhas: ಹೇಗಿರಲಿದೆ ‘ಸಲಾರ್​’ ಸಿನಿಮಾ ಇಂಟರ್​ವಲ್​ ದೃಶ್ಯ? ಪ್ರಭಾಸ್​ ಅಭಿಮಾನಿಗಳಿಗೆ ಸಿಗಲಿದೆ ಭರ್ಜರಿ ಟ್ರೀಟ್​
ಪ್ರಭಾಸ್
Follow us
ಮದನ್​ ಕುಮಾರ್​
|

Updated on: May 17, 2023 | 11:55 AM

ನಟ ಪ್ರಭಾಸ್​ (Prabhas) ಅವರು ಈಗ ‘ಆದಿಪುರುಷ್’ ಚಿತ್ರದ ಬಿಡುಗಡೆಗಾಗಿ ಕಾದಿದ್ದಾರೆ. ಅಲ್ಲದೇ, ‘ಪ್ರಾಜೆಕ್ಟ್​ ಕೆ’, ‘ಸಲಾರ್​’ ಮುಂತಾದ ಸಿನಿಮಾಗಳ ಕೆಲಸಗಳಲ್ಲೂ ಬ್ಯುಸಿ ಆಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪ್ರಭಾಸ್​ ಅವರಿಗೆ ದೊಡ್ಡ ಗೆಲುವು ಸಿಕ್ಕಿಲ್ಲ. ‘ಸಲಾರ್​’ ಮೂಲಕ ಅವರು ಭರ್ಜರಿ ಯಶಸ್ಸು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ನಿರ್ದೇಶಕ ಪ್ರಶಾಂತ್​ ನೀಲ್​ (Prashanth Neel) ಅವರಿಗೂ ಇದು ಸವಾಲಿನ ಸಿನಿಮಾ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದ ಅವರು ‘ಸಲಾರ್​’ (Salaar) ಮೂಲಕ ಯಾವ ರೀತಿ ಮೋಡಿ ಮಾಡಲಿದ್ದಾರೆ ಎಂಬ ನಿರೀಕ್ಷೆ ಅಭಿಮಾನಿಗಳಿಗೆ ಇದೆ. ಈ ಚಿತ್ರದ ಇಂಟರ್​ವಲ್​ ದೃಶ್ಯದ ಬಗ್ಗೆ ಒಂದು ಗಾಸಿಪ್​ ಕೇಳಿಬಂದಿದೆ. ಭರ್ಜರಿ ಸಾಹಸದೃಶ್ಯದ ನಂತರ ಇಂಟರ್​ವಲ್​ ನೀಡಲು ಪ್ರಶಾಂತ್​ ನೀಲ್​ ನಿರ್ಧರಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಟಾಪ್​ನಲ್ಲಿರುವುದು ಪ್ರಭಾಸ್​ ನಟನೆಯ ಸಲಾರ್ ಸಿನಿಮಾ. ಕಳೆದ ಎರಡು ವರ್ಷದಿಂದಲೂ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಪ್ರಶಾಂತ್ ನೀಲ್ ನೀಲ್​ ಅವರು ಈ ಚಿತ್ರಕ್ಕಾಗಿ ಹೊಸ ಲೋಕವನ್ನೇ ಸೃಷ್ಟಿಸಿದ್ದಾರೆ. ಸಿನಿಮಾದ ಬಗ್ಗೆ ಈಗಾಗಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕ್ರೇಜ್ ಶುರುವಾಗಿದೆ. ಸಿನಿಮಾದ ಚಿತ್ರೀಕರಣ ಮುಗಿಯುವ ಮುನ್ನವೇ ಭಾರಿ ಮೊತ್ತದ ಆಫರ್​ಗಳು ಸಿನಿಮಾಕ್ಕಾಗಿ ಬರುತ್ತಿದ್ದು, ಈಗಾಗಲೇ ಆರ್​​ಆರ್​ಆರ್ ಸಿನಿಮಾದ ಒಂದು ದಾಖಲೆಯನ್ನು ‘ಸಲಾರ್​’ ಚಿತ್ರ ಮುರಿದಿದೆ.

ಇದನ್ನೂ ಓದಿ: Adipurush Movie: ಪ್ರಭಾಸ್ ಅಭಿಮಾನಿಗಳಿಗೆ ಬೇಸರದ ಸುದ್ದಿ; ‘ಆದಿಪುರುಷ್’ ವಿಚಾರದಲ್ಲಿ ನಿರ್ಧಾರ ಬದಲಿಸಿದ ನಿರ್ದೇಶಕ

ಇದನ್ನೂ ಓದಿ
Image
Prabhas: ದೊಡ್ಡಪ್ಪನ ನಿಧನದ ನೋವಿಟ್ಟುಕೊಂಡು ಕೆಲಸಕ್ಕೆ ಬಂದ ಪ್ರಭಾಸ್​; ‘ಸಲಾರ್​’ ಶೂಟಿಂಗ್​ ಮತ್ತೆ ಶುರು
Image
Prabhas: ದೊಡ್ಡಪ್ಪನ ಅಂತ್ಯ ಸಂಸ್ಕಾರಕ್ಕೆ ಬಂದ ಫ್ಯಾನ್ಸ್​ಗೆ ಊಟದ ವ್ಯವಸ್ಥೆ ಮಾಡಿಸಿ ಕಾಳಜಿ ತೋರಿದ ಪ್ರಭಾಸ್​
Image
ಪ್ರಭಾಸ್​ ವರ್ಸಸ್​ ಪ್ರಭಾಸ್​: ‘ಸಲಾರ್​’ ಚಿತ್ರದಲ್ಲಿ ಡಬಲ್​ ರೋಲ್​ ಮಾಡಿಸುತ್ತಾರಾ ಪ್ರಶಾಂತ್​ ನೀಲ್​?
Image
‘ರಾಧೆ ಶ್ಯಾಮ್​’ ಸೋಲಿಗೆ 2 ಮುಖ್ಯ ಕಾರಣ ತಿಳಿಸಿದ ಪ್ರಭಾಸ್​; ಪ್ರೇಕ್ಷಕರು ಈ ನೆಪವನ್ನೆಲ್ಲ ಒಪ್ಪುತ್ತಾರಾ?

ಸಲಾರ್ ಸಿನಿಮಾದ ಓವರ್​ಸೀಸ್ ಬಿಡುಗಡೆ ಹಕ್ಕನ್ನು ಬರೋಬ್ಬರಿ 90 ಕೋಟಿಗೆ ಮಾರಾಟ ಮಾಡಲಾಗಿದೆಯಂತೆ. ದಕ್ಷಿಣ ಭಾರತದ ಇನ್ಯಾವುದೇ ಸಿನಿಮಾದ ವಿದೇಶಿ ಬಿಡುಗಡೆ ಹಕ್ಕು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿಲ್ಲ. ವಿದೇಶದಲ್ಲಿ ಮೋಡಿ ಮಾಡಿದ ಇತ್ತೀಚೆಗಿನ ತೆಲುಗು ಸಿನಿಮಾ ಆರ್​ಆರ್​ಆರ್​ನ ವಿದೇಶಿ ಬಿಡುಗಡೆ ಹಕ್ಕು ಸಹ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿಲ್ಲ. ಆರ್​ಆರ್​ಆರ್ ಸಿನಿಮಾದ ಓವರ್​ಸೀಸ್ ಹಕ್ಕು ಮಾರಾಟವಾಗಿದ್ದು 70 ಕೋಟಿ ರುಪಾಯಿಗೆ. ಇದು ಈವರೆಗಿನ ದೊಡ್ಡ ಮೊತ್ತವಾಗಿತ್ತು. ಆದರೆ ಸಲಾರ್ ಸಿನಿಮಾದ ಓವರ್​ಸೀಸ್ ಹಕ್ಕು 90 ಕೋಟಿಗೆ ಮಾರಾಟವಾಗಿದೆ ಎಂದು ಇತ್ತೀಚೆಗೆ ಮಾಹಿತಿ ಕೇಳಿಬಂದಿತ್ತು.

ಇದನ್ನೂ ಓದಿ: Prabhas: ‘ಸೀತಾ ರಾಮಂ’ ಡೈರೆಕ್ಟರ್​ ಜೊತೆ ಪ್ರಭಾಸ್​ ಹೊಸ ಚಿತ್ರ?  ವೃತ್ತಿಬದುಕಿನ ಸ್ಪೀಡ್​ ಹೆಚ್ಚಿಸಿದ ಸ್ಟಾರ್​ ನಟ

ಸಲಾರ್​ನಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದು ಕನ್ನಡದ ಕೆಲವು ನಟರು ಸಹ ಪ್ರಭಾಸ್ ಜೊತೆ ನಟಿಸಿದ್ದಾರೆ. ಸಿನಿಮಾವು ಇದೇ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ‘ಕೆಜಿಎಫ್​ 2’ ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ‘ಸಲಾರ್​’ ಸಿನಿಮಾದ ತೆರೆ ಹಿಂದೆ ಶ್ರಮಿಸುತ್ತಿದ್ದಾರೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.