Adipurush Movie: ಪ್ರಭಾಸ್ ಅಭಿಮಾನಿಗಳಿಗೆ ಬೇಸರದ ಸುದ್ದಿ; ‘ಆದಿಪುರುಷ್’ ವಿಚಾರದಲ್ಲಿ ನಿರ್ಧಾರ ಬದಲಿಸಿದ ನಿರ್ದೇಶಕ

ಆದಿಪುರುಷ್ ಸಿನಿಮಾ ಭರ್ಜರಿ ಟ್ರೋಲ್ ಆಗುತ್ತಿದೆ. ಇದನ್ನು ಸಿನಿಮಾ ತಂಡ ಕಡೆಗಣಿಸಿದೆ. ಹೀಗಿರುವಾಗಲೇ ನಿರ್ದೇಶಕ ಓಂ ರಾವತ್ ಅವರು ಈ ಸಿನಿಮಾ ರಿಲೀಸ್ ವಿಚಾರದಲ್ಲಿ ನಿರ್ಧಾರ ಬದಲಿಸಿದ್ದಾರೆ.

Adipurush Movie: ಪ್ರಭಾಸ್ ಅಭಿಮಾನಿಗಳಿಗೆ ಬೇಸರದ ಸುದ್ದಿ; ‘ಆದಿಪುರುಷ್’ ವಿಚಾರದಲ್ಲಿ ನಿರ್ಧಾರ ಬದಲಿಸಿದ ನಿರ್ದೇಶಕ
ಆದಿಪುರುಷ್ ಪೋಸ್ಟರ್​
Follow us
ರಾಜೇಶ್ ದುಗ್ಗುಮನೆ
|

Updated on:May 17, 2023 | 7:40 AM

ಪ್ರಭಾಸ್ ಹಾಗೂ ಕೃತಿ ಸನೋನ್ ನಟನೆಯ, ಓಂ ರಾವತ್ ನಿರ್ದೇಶನದ ‘ಆದಿಪುರುಷ್’ ಸಿನಿಮಾ (Adipurush Movie) ರಿಲೀಸ್​ಗೆ ಇನ್ನು ಬಾಕಿ ಇರೋದು ಕೇವಲ ಒಂದು ತಿಂಗಳು ಮಾತ್ರ. ಸಿನಿಮಾ ತಂಡ ಸದ್ಯ ಭರ್ಜರಿ ಪ್ರಚಾರದಲ್ಲಿ ತೊಡಗಿದೆ. ನಾನಾ ಕಡೆಗಳಲ್ಲಿ ತೆರಳಿ ಸಿನಿಮಾಗೆ ಪ್ರಚಾರ ನೀಡಲಾಗುತ್ತಿದೆ. ಮತ್ತೊಂದು ಕಡೆ ಸಿನಿಮಾ ಭರ್ಜರಿ ಟ್ರೋಲ್ ಆಗುತ್ತಿದೆ. ಆದರೆ, ಇದನ್ನು ಸಿನಿಮಾ ತಂಡ ಕಡೆಗಣಿಸಿದೆ. ಬೇಸರ ಮಾಡಿಕೊಳ್ಳದೆ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿ ಆಗಿದೆ. ಹೀಗಿರುವಾಗಲೇ ನಿರ್ದೇಶಕ ಓಂ ರಾವತ್ (Om Raut) ಅವರು ಈ ಸಿನಿಮಾ ರಿಲೀಸ್ ವಿಚಾರದಲ್ಲಿ ನಿರ್ಧಾರ ಬದಲಿಸಿದ್ದಾರೆ.

ನ್ಯೂಯಾರ್ಕ್​ನಲ್ಲಿ ಜೂನ್​ 7ರಿಂದ ಜೂನ್​ 18ರವರೆಗೆ ‘ಟ್ರೈಬ್ಯಾಕಾ ಫಿಲ್ಮ್ ಫೆಸ್ಟಿವಲ್​’ ನಡೆಯಲಿದೆ. ಈ ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣಲು ‘ಆದಿಪುರುಷ್​’ ಸಿನಿಮಾ ಆಯ್ಕೆ ಆಗಿತ್ತು. ಸಿನಿಮೋತ್ಸವದ ವೆಬ್​ಸೈಟ್​ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿತ್ತು. ಆದರೆ, ಈ ಸಿನಿಮೋತ್ಸವದಲ್ಲಿ ‘ಆದಿಪುರುಷ್​’ ಪ್ರದರ್ಶನ ಮಾಡದಿರಲು ಚಿತ್ರತಂಡ ನಿರ್ಧರಿಸಿದೆಯಂತೆ.

ಇದನ್ನೂ ಓದಿ: ಶ್ರೀರಾಮ ದೇವಸ್ಥಾನಕ್ಕೆ 10 ಲಕ್ಷ ದೇಣಿಗೆ ನೀಡಿದ ‘ಆದಿಪುರುಷ್’ ಪ್ರಭಾಸ್

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜೂನ್ 13ರಂದು ‘ಆದಿಪುರುಷ್’ ಸಿನಿಮಾ ‘ಟ್ರೈಬ್ಯಾಕಾ ಫಿಲ್ಮ್ ಫೆಸ್ಟಿವಲ್​’ನಲ್ಲಿ ಪ್ರೀಮಿಯರ್ ಆಗಬೇಕಿತ್ತು. ಆದರೆ, ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ವಿಮರ್ಶೆ ಹಂಚಿಕೊಂಡರೆ ಎನ್ನುವ ಭಯ ಕಾಡಿದೆ. ಒಂದೊಮ್ಮೆ ನೆಗೆಟಿವ್ ವಿಮರ್ಶೆ ಸಿಕ್ಕರೆ ಅದು ಮೊದಲ ದಿನದ ಕಲೆಕ್ಷನ್ ಮೇಲೆ ಪ್ರಭಾವ ಬೀರಲಿದೆ. ಈ ಕಾರಣಕ್ಕೆ ‘ಟ್ರೈಬ್ಯಾಕಾ ಫಿಲ್ಮ್ ಫೆಸ್ಟಿವಲ್​’ನಲ್ಲಿ  ‘ಆದಿಪುರುಷ್’​ ಪ್ರದರ್ಶನ ಕ್ಯಾನ್ಸಲ್ ಮಾಡಲಾಗಿದೆ.

ಇದನ್ನೂ ಓದಿ: ಟ್ರೋಲ್ ಮಧ್ಯೆಯೂ ಓಂ​ ರಾವತ್​ಗೆ 4 ಕೋಟಿ ರೂ. ಕಾರು ಕೊಟ್ಟ ‘ಆದಿಪುರುಷ್’ ನಿರ್ಮಾಪಕ ಭೂಷಣ್​ ಕುಮಾರ್​?

‘ಟಿ ಸೀರೀಸ್‌’ನ ಭೂಷಣ್‌ ಕುಮಾರ್ ಅವರು ‘ಆದಿಪುರುಷ್​’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಈ ಚಿತ್ರ ಮೂಡಿಬಂದಿದೆ. ವಿಶ್ವಾದ್ಯಂತ ಜೂನ್​ 16ರಂದು ಸಿನಿಮಾ ಬಿಡುಗಡೆ ಆಗಲಿದೆ.  ಈ ಸಿನಿಮಾದಲ್ಲಿ ಪ್ರಭಾಸ್​ ಜೊತೆ ಕೃತಿ ಸನೋನ್​, ಸನ್ನಿ ಸಿಂಗ್​, ದೇವದತ್ತ ನಾಗೆ, ವತ್ಸಲ್​ ಸೇಠ್​, ಸೋನಾಲ್​ ಚೌಹಾಣ್​ ಮುಂತಾದವರು ನಟಿಸಿದ್ದಾರೆ. ಅಜಯ್​-ಅತುಲ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಓಂ ರಾವತ್ ಅವರು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಕನ್ನಡದಲ್ಲೂ ಈ ಚಿತ್ರ ಡಬ್​ ಆಗಿ ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:32 am, Wed, 17 May 23