AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಗ್ಸ್ ತೆಗೆದುಕೊಳ್ಳುತ್ತಿರುವ ಹೀರೋಗಳು ಶೀಘ್ರವೇ ಅರೆಸ್ಟ್; ಪೊಲೀಸರ ಎಚ್ಚರಿಕೆ

‘ಪೊಲೀಸರು ಸೆಲೆಬ್ರಿಟಿಗಳನ್ನು ಹಿಂಬಾಲಿಸುತ್ತಿದ್ದಾರೆ. ಶೀಘ್ರದಲ್ಲೇ ಡ್ರಗ್ಸ್ ಸೇವಿಸುವ ಸೆಲೆಬ್ರಿಟಿಗಳನ್ನು ಬಂಧಿಸಲಾಗುವುದು’ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ, ಯಾರೆಲ್ಲ ಅರೆಸ್ಟ್ ಆಗಬಹುದು ಎನ್ನುವ ಕುತೂಹಲ ಮೂಡಿದೆ.

ಡ್ರಗ್ಸ್ ತೆಗೆದುಕೊಳ್ಳುತ್ತಿರುವ ಹೀರೋಗಳು ಶೀಘ್ರವೇ ಅರೆಸ್ಟ್; ಪೊಲೀಸರ ಎಚ್ಚರಿಕೆ
ಸೇತು ರಮಣ್
ರಾಜೇಶ್ ದುಗ್ಗುಮನೆ
|

Updated on:May 17, 2023 | 9:41 AM

Share

ಚಿತ್ರರಂಗದಲ್ಲಿ ಆಗಾಗ ಡ್ರಗ್ (Drugs) ವಿಚಾರ ಸದ್ದು ಮಾಡುತ್ತಿರುತ್ತದೆ. ಮಾದಕ ದ್ರವ್ಯ ಕೇಸ್​ನಲ್ಲಿ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಅರೆಸ್ಟ್ ಆಗಿದ್ದಾರೆ. ಈಗ ಮಲಯಾಳಂ (Mollywood) ಚಿತ್ರರಂಗದಲ್ಲಿ ಮತ್ತೆ ಡ್ರಗ್ ವಿಚಾರ ಸದ್ದು ಮಾಡುತ್ತಿದೆ. ಯುವ ಹೀರೋಗಳು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎನ್ನುವ ಆರೋಪ ಇತ್ತೀಚೆಗೆ ಕೇಳಿ ಬಂದಿತ್ತು. ಹೀಗಾಗಿ ಪೊಲೀಸರು ಶೂಟಿಂಗ್ ಸೆಟ್ ಮೇಲೆ ಕಣ್ಣು ಇಟ್ಟಿದ್ದಾರೆ. ಹಿಗಿರುವಾಗಲೇ ಈ ರೀತಿ ಡ್ರಗ್ಸ್ ತೆಗೆದುಕೊಳ್ಳುವ ನಟರನ್ನು ಅರೆಸ್ಟ್ ಮಾಡುವುದಾಗಿ ಕೊಚ್ಚಿ ಸಿಟಿ ಪೊಲೀಸ್ ಆಯುಕ್ತ ಎಚ್ಚರಿಕೆ ನೀಡಿದ್ದಾರೆ.

‘ಮಾದಕ ದ್ರವ್ಯಗಳನ್ನು ಹೊಂದಿದ್ದರೆ ಅಥವಾ ಅದನ್ನು ಬಳಸುತ್ತಿದ್ದಾಗ ಮಾತ್ರ ಅವರನ್ನು ಬಂಧಿಸಬಹುದು ಎಂಬ ನಿಯಮ ಇದೆ. ಹೆಚ್ಚಿನ ಸಂದರ್ಭಗಳಲ್ಲಿ ಅವರ ಸಹಾಯಕರು ಡ್ರಗ್ಸ್ ತಲುಪಿಸುತ್ತಾರೆ. ಪೊಲೀಸರು ಈ ಸೆಲೆಬ್ರಿಟಿಗಳನ್ನು ಹಿಂಬಾಲಿಸುತ್ತಿದ್ದಾರೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು’ ಎಂದು ಕೊಚ್ಚಿ ಸಿಟಿ ಪೊಲೀಸ್ ಆಯುಕ್ತ ಸೇತು ರಮಣ್ ಮಾಹಿತಿ ನೀಡಿದ್ದಾರೆ.

‘ಡ್ರಗ್ಸ ಸೇವನೆ ಕಾನೂನು ಬಾಹಿರ. ಹೀಗಾಗಿ ಸಿನಿಮಾ ಸೆಟ್‌ಗಳಲ್ಲಿ ತಪಾಸಣೆ ನಡೆಸಲು ಯಾವುದೇ ಅಡೆತಡೆ ಇಲ್ಲ. ಹೆಸರಾಂತ ಕಲಾವಿದರು ಡ್ರಗ್ಸ್ ಬಳಸಿ ಯಶಸ್ಸನ್ನು ಸಾಧಿಸಿಲ್ಲ. ಕೊಚ್ಚಿಯ ಸಿನಿಮಾ ಸೆಟ್‌ಗಳಲ್ಲಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪರಿಣಾಮವಾಗಿ ಮಾದಕ ದ್ರವ್ಯ ಸೇವನೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Drug Abuse: ಇಬ್ಬರು ಯುವ ಹೀರೋಗಳ ಮೇಲೆ ಡ್ರಗ್ಸ್​ ಸೇವನೆ ಆರೋಪ; ಶೂಟಿಂಗ್​ ಸ್ಥಳದ ಮೇಲೆ ಪೊಲೀಸರ ಕಣ್ಣು

ಅತ್ಯುತ್ತಮ ಕಥಾಹಂದರ ಹೊಂದಿರುವ ಸಿನಿಮಾಗಳನ್ನು ನೀಡುವಲ್ಲಿ ಮಲಯಾಳಂ ಸಿನಿಮಾರಂಗ ಮುಂಚೂಣಿಯಲ್ಲಿದೆ​ ಎಂಬುದರಲ್ಲಿ ಎರಡು ಮಾತಿಲ್ಲ. ಮಾಲಿವುಡ್​ ಸಿನಿಮಾಗಳ ಬಗ್ಗೆ ಇಡೀ ದೇಶವೇ ಮಾತನಾಡುತ್ತದೆ. ಆದರೆ ಕೆಲವೇ ಕೆಲವರು ಮಾಡುವ ಕಾನೂನು ಬಾಹಿರ ಕೆಲಸಗಳಿಂದಾಗಿ ಇಡೀ ಚಿತ್ರರಂಗಕ್ಕೆ ಕಪ್ಪು ಚುಕ್ಕಿ ಅಂಟಿಕೊಳ್ಳುತ್ತದೆ. ಇತ್ತೀಚೆಗೆ ‘ಕೇರಳ ಸಿನಿಮಾ ನಿರ್ಮಾಪಕರ ಸಂಘ’ ಒಂದು ಆರೋಪ ಮಾಡಿದೆ. ಇಬ್ಬರು ಯುವ ನಟರು ಡ್ರಗ್ಸ್​ ಸೇವನೆ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಇನ್ನುಳಿದ ಕಲಾವಿದರು ಕೂಡ ಇದರಲ್ಲಿ ಭಾಗಿ ಆಗಿರಬರಹುದು ಎಂದು ಸಂಘ ಹೇಳಿತ್ತು. ಈ ಬೆನ್ನಲ್ಲೇ ಕಾರ್ಯಾಚರಣೆ ಆರಂಭ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:27 am, Wed, 17 May 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್