ಸಿದ್ಧವಾಯ್ತು ‘ಕಾಂತಾರ 2’ ಸ್ಕ್ರಿಪ್ಟ್​ನ ಮೊದಲ ಡ್ರಾಫ್ಟ್​? ಶೀಘ್ರವೇ ಶೂಟಿಂಗ್ ಆರಂಭಿಸಲಿದ್ದಾರೆ ರಿಷಬ್ ಶೆಟ್ಟಿ

Kantara Prequel: ಮೊದಲ ಪಾರ್ಟ್​ ಯಶಸ್ಸು ಕಂಡ ಬಳಿಕ ಅವರು ಎರಡನೇ ಪಾರ್ಟ್​​ನ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಪ್ರೀಕ್ವೆಲ್​ಗೆ ಸ್ಕ್ರಿಪ್ಟ್ ಬಹುತೇಕ ಫೈನಲ್ ಆಗಿದೆ ಎಂದು ಮೂಲಗಳು ಹೇಳಿವೆ.  

ಸಿದ್ಧವಾಯ್ತು ‘ಕಾಂತಾರ 2’ ಸ್ಕ್ರಿಪ್ಟ್​ನ ಮೊದಲ ಡ್ರಾಫ್ಟ್​? ಶೀಘ್ರವೇ ಶೂಟಿಂಗ್ ಆರಂಭಿಸಲಿದ್ದಾರೆ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ
Follow us
ರಾಜೇಶ್ ದುಗ್ಗುಮನೆ
|

Updated on:May 08, 2023 | 12:34 PM

‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತು. ಈ ಚಿತ್ರದಿಂದ ರಿಷಬ್ ಶೆಟ್ಟಿ ಅವರು ನಟನಾಗಿ, ನಿರ್ದೇಶಕನಾಗಿ ಯಶಸ್ಸು ಕಂಡಿದ್ದಾರೆ. ಈಗ ಅವರು ‘ಕಾಂತಾರ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಕೆಲ ತಿಂಗಳ ಹಿಂದೆ ಅವರು ‘ಕಾಂತಾರ’ ಪ್ರೀಕ್ವೆಲ್​ಗೆ (Kantara Prequel) ಸ್ಕ್ರಿಪ್ಟ್ ಆರಂಭಿಸಿದ್ದರು. ಈಗ ಅವರ ಅಭಿಮಾನಿಗಳಿಗೆ ಹೊಸ ಸುದ್ದಿ ಒಂದು ಸಿಕ್ಕಿದೆ. ಮೂಲಗಳ ಪ್ರಕಾರ ‘ಕಾಂತಾರ 2’ ಚಿತ್ರದ ಸ್ಕ್ರಿಪ್ಟ್​ನ ಮೊದಲ ಡ್ರಾಫ್ಟ್ ಫೈನಲ್ ಆಗಿದೆಯಂತೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಹೊಂಬಾಳೆ ಫಿಲ್ಮ್ಸ್​ ನಿರ್ಮಾಣದ ‘ಕಾಂತಾರ’ ಚಿತ್ರಕ್ಕೆ ರಿಷಬ್ ಶೆಟ್ಟಿ ನಿರ್ದೇಶನ ಇತ್ತು. ಈ ಚಿತ್ರದಲ್ಲಿ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದರು. ನಟಿ ಸಪ್ತಮಿ ಗೌಡ ಅವರು ಈ ಚಿತ್ರಕ್ಕೆ ನಾಯಕಿ ಆಗಿದ್ದರು. ಮೊದಲ ಪಾರ್ಟ್​ ಯಶಸ್ಸು ಕಂಡ ಬಳಿಕ ಅವರು ಎರಡನೇ ಪಾರ್ಟ್​​ನ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಪ್ರೀಕ್ವೆಲ್​ಗೆ ಸ್ಕ್ರಿಪ್ಟ್ ಬಹುತೇಕ ಫೈನಲ್ ಆಗಿದೆ ಎಂದು ಮೂಲಗಳು ಹೇಳಿವೆ.

ರಿಷಬ್ ಶೆಟ್ಟಿ ಹಾಗೂ ಅವರ ಟೀಂಗೆ ಮೊದಲ ಡ್ರಾಫ್ಟ್​ ಬಗ್ಗೆ ತೃಪ್ತಿ ಇದೆ ಎನ್ನಲಾಗಿದೆ. ಅವರು ಹೆಚ್ಚಿನ ಸಮಯ ತೆಗೆದುಕೊಂಡು ಮತ್ತೊಮ್ಮೆ ಸ್ಕ್ರಿಪ್ಟ್ ಕಡೆ ಕಣ್ಣು ಹಾಯಿಸಲಿದ್ದಾರೆ. ಎಲ್ಲಾದರೂ ಬದಲಾವಣೆಯ ಅಗತ್ಯವಿತ್ತು ಎಂದರೆ ಅದನ್ನು ಮಾಡಿ ಬಳಿಕ ಸ್ಕ್ರಿಪ್ಟ್ ಫೈನಲ್ ಮಾಡಲಿದ್ದಾರೆ. ಇದರ ಜೊತೆಗೆ ಸಿನಿಮಾ ಶೂಟಿಂಗ್ ಸ್ಥಳ ಹುಡುಕುವ ಕೆಲಸ ಕೂಡ ಆಗಲಿದೆ. ಮಳೆಗಾಲದಲ್ಲಿ ‘ಕಾಂತಾರ 2’ ಚಿತ್ರಕ್ಕೆ ಶೂಟಿಂಗ್ ಆರಂಭ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಕಾಂತಾರ ಸಿನಿಮಾದಲ್ಲಿ ಉಟ್ಟಿದ್ದ 32ವರ್ಷ ಹಳೆಯ ಸೀರೆಯ ಸೀಕ್ರೆಟ್​​​​ ಬಿಚ್ಚಿಟ್ಟ ರಿಷಬ್​​ ಪತ್ನಿ

‘ಕಾಂತಾರ’ ಕ್ಲೈಮ್ಯಾಕ್ಸ್ ನೋಡಿದ ಅನೇಕರಿಗೆ ಈ ಚಿತ್ರಕ್ಕೆ ಸೀಕ್ವೆಲ್ ಬರಲಿದೆ ಎನ್ನುವ ಊಹೆ ಇತ್ತು. ಬಳಿಕ ಇದನ್ನು ಚಿತ್ರತಂಡದವರೇ ಘೋಷಣೆ ಮಾಡಿದರು. ಈ ಮೊದಲು ಸ್ಕ್ರಿಪ್ಟ್ ಕೆಲಸ ಆರಂಭಿಸಿರುವದಾಗಿ ರಿಷಬ್ ಶೆಟ್ಟಿ ಹೇಳಿದ್ದರು. ಈಗ ಕೆಲವೇ ತಿಂಗಳಲ್ಲಿ ಅವರು ಮೊದಲ ಹಂತದ ಸ್ಕ್ರಿಪ್ಟ್ ಕೆಲಸ ಪೂರ್ಣಗೊಳಿಸಿದ್ದಾರೆ.

ಇದು ಪ್ರೀಕ್ವೆಲ್

ಸಿನಿಮಾಗೆ ಸೀಕ್ವೆಲ್ ಸಿದ್ಧಗೊಳ್ಳೋದು ಸಾಮಾನ್ಯ. ಆದರೆ, ರಿಷಬ್ ಶೆಟ್ಟಿ ಅವರು ‘ಕಾಂತಾರ’ ಚಿತ್ರಕ್ಕೆ ಮಾಡುತ್ತಿರೋದು ಪ್ರೀಕ್ವೆಲ್​. ಅಂದರೆ, ಈಗ ನೋಡಿದ ಕಥೆಯ ಹಿಂದೆ ಏನಾಗಿತ್ತು ಎಂಬುದು ತೆರೆಮೇಲೆ ಬರಲಿದೆ. ಈ ವಿಚಾರದಲ್ಲಿ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಇದೆ. ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:33 pm, Mon, 8 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ