The Kerala Story: 2ನೇ ವಾರವೂ ‘ದಿ ಕೇರಳ ಸ್ಟೋರಿ’ ಯಶಸ್ವಿ ಪ್ರದರ್ಶನ; 164 ಕೋಟಿ ರೂ. ಗಳಿಸಿದ ಕಾಂಟ್ರವರ್ಸಿ ಸಿನಿಮಾ
The Kerala Story Box Office Collection: ಪ್ರತಿದಿನವೂ ‘ದಿ ಕೇರಳ ಸ್ಟೋರಿ’ ಸಿನಿಮಾ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿರುವುದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. ಮೂರನೇ ವೀಕೆಂಡ್ ಕೂಡ ಈ ಸಿನಿಮಾ ಮೋಡಿ ಮಾಡುವ ಸಾಧ್ಯತೆ ದಟ್ಟವಾಗಿದೆ.
ವಿವಾದ ಎಬ್ಬಿಸಿದ ಸಿನಿಮಾಗಳ ಬಗ್ಗೆ ಜನರು ಸಹಜವಾಗಿಯೇ ಕುತೂಹಲ ಹೆಚ್ಚಿಸಿಕೊಳ್ಳುತ್ತಾರೆ. ಆ ಮಾತಿಗೆ ಲೇಟೆಸ್ಟ್ ಉದಾಹರಣೆ ಎಂದರೆ ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರ. ಕೇರಳದಲ್ಲಿ ನಡೆದಿದೆ ಎನ್ನಲಾದ ಮತಾಂತರ ಮತ್ತು ಲವ್ ಜಿಹಾದ್ ಘಟನೆಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ದೇಶಾದ್ಯಂತ ಚರ್ಚೆ ಹುಟ್ಟುಹಾಕಿದ ಈ ಚಿತ್ರವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ. ಪರಿಣಾಮವಾಗಿ ಇದರ ಕಲೆಕ್ಷನ್ (The Kerala Story Collection) ಏರುತ್ತಲೇ ಇದೆ. 2ನೇ ವಾರವೂ ಸಿನಿಮಾ ಅಸಾಧಾರಣ ಕಲೆಕ್ಷನ್ ಮಾಡುತ್ತಿದೆ ಎಂಬುದು ವಿಶೇಷ. ಈವರೆಗೆ 14 ದಿನಗಳ ಕಾಲ ‘ದಿ ಕೇರಳ ಸ್ಟೋರಿ’ ಚಿತ್ರ ಭರ್ಜರಿ ಪ್ರದರ್ಶನ ಕಂಡಿದೆ. 13 ದಿನಗಳವರೆಗಿನ ಕಲೆಕ್ಷನ್ 164 ಕೋಟಿ ರೂಪಾಯಿ ತಲುಪಿದೆ.
‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಸುದೀಪ್ತೋ ಸೇನ್ ಅವರು ನಿರ್ದೇಶನ ಮಾಡಿದ್ದಾರೆ. ನಟಿ ಅದಾ ಶರ್ಮಾ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಇತ್ತೀಚೆಗೆ ಅವರು ಚಲಿಸುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿತ್ತು. ಆದರೆ ಹೆಚ್ಚೇನೂ ಪೆಟ್ಟಾಗಿಲ್ಲ ಎಂಬುದು ಸಮಾಧಾನಕರ ಸಂಗತಿ. ಈಗ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾದ ಗೆಲುವನ್ನು ಎಂಜಾಯ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Adah Sharma: ‘ದಿ ಕೇರಳ ಸ್ಟೋರಿ ಕೇವಲ ಸಿನಿಮಾ ಅಲ್ಲ, ಇದೊಂದು ಆಂದೋಲನ’: ನಟಿ ಅದಾ ಶರ್ಮಾ
‘ದಿ ಕೇರಳ ಸ್ಟೋರಿ’ ಚಿತ್ರದ ಕಲೆಕ್ಷನ್ ರಿಪೋರ್ಟ್:
1ನೇ ದಿನ: 8.03 ಕೋಟಿ ರೂ.
2ನೇ ದಿನ: 11.22 ಕೋಟಿ ರೂ.
3ನೇ ದಿನ: 16.40 ಕೋಟಿ ರೂ.
4ನೇ ದಿನ: 10.07 ಕೋಟಿ ರೂ.
5ನೇ ದಿನ: 11.14 ಕೋಟಿ ರೂ.
6ನೇ ದಿನ: 12 ಕೋಟಿ ರೂ.
7ನೇ ದಿನ: 12.50 ಕೋಟಿ ರೂ.
8ನೇ ದಿನ: 12.23 ಕೋಟಿ ರೂ.
9ನೇ ದಿನ: 19.50 ಕೋಟಿ ರೂ.
10ನೇ ದಿನ: 23.75 ಕೋಟಿ ರೂ.
11ನೇ ದಿನ: 10.30 ಕೋಟಿ ರೂ.
12ನೇ ದಿನ: 9.65 ಕೋಟಿ ರೂ.
13ನೇ ದಿನ: 7.90 ಕೋಟಿ ರೂ.
#TheKeralaStory maintains a STRONG GRIP… Crosses *Week 1* biz [₹ 81.14 cr] in *6 days* of *Week 2*… Should hit ₹ 200 cr in Weekend 3… [Week 2] Fri 12.35 cr, Sat 19.50 cr, Sun 23.75 cr, Mon 10.30 cr, Tue 9.65 cr, Wed 7.90 cr. Total: ₹ 164.59 cr. #India biz. #Boxoffice pic.twitter.com/lrCZN4xZkx
— taran adarsh (@taran_adarsh) May 18, 2023
ಪ್ರತಿದಿನವೂ ‘ದಿ ಕೇರಳ ಸ್ಟೋರಿ’ ಸಿನಿಮಾ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿರುವುದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. ಮೂರನೇ ವೀಕೆಂಡ್ ಕೂಡ ಈ ಸಿನಿಮಾ ಮೋಡಿ ಮಾಡುವ ಸಾಧ್ಯತೆ ದಟ್ಟವಾಗಿದೆ. ಹೊಸದಾಗಿ ರಿಲೀಸ್ ಆದ ಚಿತ್ರಗಳಿಗೂ ಕೂಡ ‘ದಿ ಕೇರಳ ಸ್ಟೋರಿ’ ಪೈಪೋಟಿ ನೀಡುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.