AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದುತ್ವದ ಪರ ಮಾತನಾಡಿದ್ದಕ್ಕೆ ಕಂಗನಾಗೆ 40 ಕೋಟಿ ರೂಪಾಯಿ ನಷ್ಟ; ಆದರೂ ಇಲ್ಲ ಬೇಸರ

ಎಲಾನ್ ಮಸ್ಕ್​ ಅವರು ಸಂದರ್ಶನ ಒಂದರಲ್ಲಿ ಹಣ ಕಳೆದುಕೊಂಡ ವಿಚಾರದ ಬಗ್ಗೆ ಹೇಳಿದ್ದರು. ಈ ಮಾತು ಕಂಗನಾಗೆ ಇಷ್ಟವಾಗಿದೆ. ಇದು ಅವರ ಜೀವನದಲ್ಲೂ ನಡೆದಿದೆ ಎನ್ನಲಾಗುತ್ತಿದೆ.

ಹಿಂದುತ್ವದ ಪರ ಮಾತನಾಡಿದ್ದಕ್ಕೆ ಕಂಗನಾಗೆ 40 ಕೋಟಿ ರೂಪಾಯಿ ನಷ್ಟ; ಆದರೂ ಇಲ್ಲ ಬೇಸರ
ಕಂಗನಾ ರಣಾವತ್
ರಾಜೇಶ್ ದುಗ್ಗುಮನೆ
|

Updated on: May 18, 2023 | 7:32 AM

Share

ನಟಿ ಕಂಗನಾ ರಣಾವತ್ (Kangana Ranaut) ಅವರು ಎಲ್ಲಾ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಸಮಾಜದ ಆಗು-ಹೋಗುಗಳ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಇದರಿಂದ ಅವರು ಸಾಕಷ್ಟು ವಿವಾದ ಮಾಡಿಕೊಂಡಿದ್ದೂ ಇದೆ. ಆದರೆ, ಇದಕ್ಕೆಲ್ಲ ಅವರು ಹೆಚ್ಚು ತಲೆಕೆಡಿಸಿಕೊಂಡವರಲ್ಲ. ಈಗ ಕಂಗನಾ ರಣಾವತ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಹಿಂದುತ್ವದ ಬಗ್ಗೆ ಮಾತನಾಡಿದ್ದಕ್ಕೆ ಅವರಿಗೆ ಆದ ನಷ್ಟ ಬರೋಬ್ಬರಿ 30-40 ಕೋಟಿ ರೂಪಾಯಿ. ಹೀಗೇಕೆ ಎನ್ನುವ ವಿಚಾರದ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಅವರು ಮಾತನಾಡಿದ ವಿಡಿಯೋ ಒಂದನ್ನು ಅವರು ಹಂಚಿಕೊಂಡಿದ್ದಾರೆ. ‘ನನಗೆ ಇಷ್ಟ ಬಂದಿದ್ದನ್ನು ನಾನು ಹೇಳುತ್ತೇನೆ. ಅದರಿಂದ ಹಣ ಕಳೆದುಕೊಂಡರೂ ತೊಂದರೆ ಇಲ್ಲ’ ಎಂದು ಎಲಾನ್ ಮಸ್ಕ್​ ಅವರು ಈ ವಿಡಿಯೋದಲ್ಲಿ ಹೇಳಿದ್ದರು. ಈ ಮಾತು ಕಂಗನಾಗೆ ಇಷ್ಟವಾಗಿದೆ. ಇದು ಅವರ ಜೀವನದಲ್ಲೂ ನಡೆದಿದೆ ಎನ್ನಲಾಗುತ್ತಿದೆ.

‘ನಾನು ಹಿಂದುತ್ವದ ಬಗ್ಗೆ, ರಾಜಕಾರಣಿಗಳು ಹಾಗೂ ದೇಶ ವಿರೋಧಿಗಳ ಬಗ್ಗೆ ಮಾತನಾಡಿದ್ದಕ್ಕೆ ನನಗೆ 30-40 ಕೋಟಿ ರೂಪಾಯಿ ನಷ್ಟ ಆಗಿದೆ. 20-25 ಬ್ರ್ಯಾಂಡ್​ಗಳು ತಮ್ಮ ಒಪ್ಪಂದವನ್ನು ರಾತ್ರೋರಾತ್ರಿ ರದ್ದು ಮಾಡಿಕೊಂಡವು’ ಎಂದಿದ್ದಾರೆ ಕಂಗನಾ.

‘ನಾನು ಸ್ವತಂತ್ರಳು. ನನಗೆ ಅನಿಸಿದ್ದನ್ನು ಹೇಳಲು ಯಾವುದೂ ಅಡ್ಡಿಯಾಗದು. ನಾನು ಎಲಾನ್ ಮಸ್ಕ್​ ಅವರನ್ನು ಈ ವಿಚಾರದಲ್ಲಿ ಪ್ರಶಂಸಿಸುತ್ತೇನೆ. ಏಕೆಂದರೆ ಎಲ್ಲರೂ ದೌರ್ಬಲ್ಯಗಳನ್ನು ಮಾತ್ರ ಪ್ರದರ್ಶಿಸುತ್ತಾರೆ. ಆದರೆ, ಎಲಾನ್ ಮಸ್ಕ್ ಆ ರೀತಿ ಅಲ್ಲ. ಶ್ರೀಮಂತನಾದವನು ಹಣಕ್ಕಾಗಿ ಕಾಳಜಿ ವಹಿಸಬಾರದು’ ಎಂದಿದ್ದಾರೆ.

ಟ್ವಿಟರ್ ನಿಯಮ ಉಲ್ಲಂಘನೆ ಆರೋಪದ ಮೇಲೆ ಕಂಗನಾ ರಣಾವತ್ ಅವರ ಟ್ವಿಟರ್ ಖಾತೆಯ ಮೇಲೆ ನಿರ್ಬಂಧ ಹೇರಲಾಗಿತ್ತು. ಆದರೆ, ಎಲಾನ್ ಮಸ್ಕ್ ಅವರು ಟ್ವಿಟರ್​​ನ ಪಡೆದುಕೊಂಡಮೇಲೆ ಈ ಖಾತೆಯನ್ನು ಹಿಂದಿರುಗಿ ನೀಡಲಾಗಿದೆ. ಈ ಕಾರಣಕ್ಕೂ ಅವರಿಗೆ ಎಲಾನ್ ಮಸ್ಕ್​ ಮೇಲೆ ವಿಶೇಷ ಗೌರವ ಇದೆ.

ಇದನ್ನೂ ಓದಿ: ಹೊಸ ಫೋಟೊಶೂಟ್ ಅಲ್ಲ, ಟಿವಿ ಸಂದರ್ಶನಕ್ಕೆ ಕಂಗನಾ ತಯಾರಾಗಿರುವ ರೀತಿಯಿದು

ಸದ್ಯ ಕಂಗನಾ ರಣಾವತ್ ಅವರು ‘ಚಂದ್ರಮುಖಿ 2’ ಹಾಗೂ ‘ಎಮರ್ಜೆನ್ಸಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಎಮರ್ಜೆನ್ಸಿ’ ಚಿತ್ರಕ್ಕೆ ಕಂಗನಾ ರಣಾವತ್ ಅವರು ನಿರ್ದೇಶನ ಮಾಡುತ್ತಿದ್ದಾರೆ ಕೂಡ. ನಿರ್ಮಾಣದಲ್ಲೂ ಅವರ ಪಾಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ