AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mrunal Thakur: ‘ನ್ಯಾಷನಲ್​ ಕ್ರಶ್​’ ಬಿರುದು ಪಡೆದುಕೊಂಡ ಮೃಣಾಲ್​ ಠಾಕೂರ್​; ಈಗ ರಶ್ಮಿಕಾ ಮಂದಣ್ಣ ಪಾಡು ಏನು?

National Crush: ಇದೇ ಮೊದಲ ಬಾರಿಗೆ ಮೃಣಾಲ್​ ಠಾಕೂರ್​ ಅವರು ಕಾನ್​ ಚಿತ್ರೋತ್ಸವಕ್ಕೆ ಹಾಜರಿ ಹಾಕಿದ್ದಾರೆ. ಈ ವೇಳೆ ಅವರು ಧರಿಸಿದ್ದ ಕಾಸ್ಟ್ಯೂಮ್​ ಗಮನ ಸೆಳೆದಿದೆ.

Mrunal Thakur: ‘ನ್ಯಾಷನಲ್​ ಕ್ರಶ್​’ ಬಿರುದು ಪಡೆದುಕೊಂಡ ಮೃಣಾಲ್​ ಠಾಕೂರ್​; ಈಗ ರಶ್ಮಿಕಾ ಮಂದಣ್ಣ ಪಾಡು ಏನು?
ಮೃಣಾಲ್ ಠಾಕೂರ್
ಮದನ್​ ಕುಮಾರ್​
|

Updated on: May 18, 2023 | 10:55 AM

Share

ನಟಿ ಮೃಣಾಲ್​ ಠಾಕೂಲ್​ (Mrunal Thakur) ಅವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ‘ಸೀತಾ ರಾಮಂ’ ಸಿನಿಮಾ ಬಿಡುಗಡೆ ಆದ ಬಳಿಕ ಅವರ ಖ್ಯಾತಿ ಹೆಚ್ಚಾಯಿತು. ಈಗ ಅವರಿಗೆ ಅಭಿಮಾನಿಗಳು ಪ್ರೀತಿಯಿಂದ ನ್ಯಾಷನಲ್​ ಕ್ರಶ್​ ಎನ್ನಲು ಆರಂಭಿಸಿದ್ದಾರೆ. ಈ ಮೊದಲು ನೆಟ್ಟಿಗರು ರಶ್ಮಿಕಾ ಮಂದಣ್ಣಗೆ (Rashmika Mandanna) ನ್ಯಾಷನಲ್​ ಕ್ರಶ್​ ಎನ್ನುತ್ತಿದ್ದರು. ಅದನ್ನು ಕನ್ನಡದ ಬಹುತೇಕ ಸಿನಿಪ್ರಿಯರು ಒಪ್ಪಲೇ ಇಲ್ಲ. ಈಗ ಮೃಣಾಲ್​ ಠಾಕೂರ್​ ಅವರ ಕೆಲವು ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ನ್ಯಾಷನಲ್​ ಕ್ರಶ್​’ (National Crush) ಎಂದು ಕಮೆಂಟ್​ ಮಾಡುತ್ತಿದ್ದಾರೆ. ಅಷ್ಟರಮಟ್ಟಿಗೆ ಅವರಿಗೆ ಖ್ಯಾತಿ ಸಿಕ್ಕಿದೆ. ಮೃಣಾಲ್​ ಠಾಕೂರ್​ ಅವರನ್ನು ಹುಡುಕಿಕೊಂಡು ಅನೇಕ ಅಫರ್​ಗಳು ಬರುತ್ತಿವೆ.

ಇದೇ ಮೊದಲ ಬಾರಿಗೆ ಮೃಣಾಲ್​ ಠಾಕೂರ್​ ಅವರು ಕಾನ್​ ಚಿತ್ರೋತ್ಸವಕ್ಕೆ ಹಾಜರಿ ಹಾಕಿದ್ದಾರೆ. ಈ ವೇಳೆ ಅವರು ಧರಿಸಿದ್ದ ಕಾಸ್ಟ್ಯೂಮ್​ ಗಮನ ಸೆಳೆದಿದೆ. ಈ ಫೋಟೋಗಳು ಕೊಂಚ ಗ್ಲಾಮರಸ್​ ಆಗಿವೆ. ‘ಸೀತಾ ರಾಮಂ’ ಸಿನಿಮಾದಲ್ಲಿ ಸೀತಾ ಮಹಾಲಕ್ಷ್ಮಿ ಅಲಿಯಾಸ್​ ಪ್ರಿನ್ಸೆಸ್​ ನೂರ್​ ಜಹಾನ್​ ಪಾತ್ರವನ್ನು ಮೃಣಾಲ್​ ಠಾಕೂರ್​ ಮಾಡಿದ್ದರು. ಆ ಬಳಿಕ ಅವರನ್ನು ಗ್ಲಾಮರಸ್​ ಗೆಟಪ್​ನಲ್ಲಿ ನೋಡಲು ಅಭಿಮಾನಿಗಳು ಇಷ್ಟಪಡುತ್ತಿಲ್ಲ.

ಜನರು ಮೃಣಾಲ್​ ಠಾಕೂರ್​ಗೆ ‘ನ್ಯಾಷನಲ್​ ಕ್ರಶ್​’ ಎಂದು ಕರೆಯಲು ಆರಂಭಿಸಿದ್ದಾರೆ. ಹಾಗಂತ ರಶ್ಮಿಕಾ ಮಂದಣ್ಣ ಅವರ ಖ್ಯಾತಿಯೇನೂ ಕಡಿಮೆ ಆಗಿಲ್ಲ. ಅವರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಲೇ ಇವೆ. ಅನೇಕ ಸ್ಟಾರ್​ ನಟರ ಚಿತ್ರಗಳಿಗೆ ಅವರು ಹೀರೋಯಿನ್​ ಆಗಿ ಆಯ್ಕೆ ಆಗುತ್ತಿದ್ದಾರೆ. ದಕ್ಷಿಣ ಭಾರತ ಮಾತ್ರವಲ್ಲದೇ ಬಾಲಿವುಡ್​ನಲ್ಲೂ ಅವರಿಗೆ ಸಖತ್​ ಬೇಡಿಕೆ ಸೃಷ್ಟಿ ಆಗಿದೆ.

ಇದನ್ನೂ ಓದಿ: Rashmika Mandanna: ಯಶ್​ ಬಗ್ಗೆ ಒಂದೇ ಪದದಲ್ಲಿ ವಿವರಿಸಿದ ರಶ್ಮಿಕಾ ಮಂದಣ್ಣ; ಅಭಿಮಾನಿಗಳು ಖುಷ್​

ರಶ್ಮಿಕಾ ಮಂದಣ್ಣ ಟಾಲಿವುಡ್​ನಲ್ಲಿ ಫೇಮಸ್ ಆದ ಬಳಿಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ಅವರು ಈಗಾಗಲೇ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಅಮಿತಾಭ್ ಬಚ್ಚನ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ರಣಬೀರ್ ಕಪೂರ್ ಜೊತೆ ಅವರು ‘ಅನಿಮಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಕ್ಕಿ ಕೌಶಲ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಛತ್ರಪತಿ ಶಿವಾಜಿ ಸೊಸೆಯ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದರ ಜೊತೆ ಮತ್ತೊಂದು ಸಿನಿಮಾ ಮಾತುಕತೆಯಲ್ಲಿ ರಶ್ಮಿಕಾ ಬ್ಯುಸಿ ಇದ್ದಾರೆ ಎಂದು ವರದಿ ಆಗಿದೆ. ಶಾಹಿದ್ ಕಪೂರ್ ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರದ ತಾಂತ್ರಿಕ ವರ್ಗದ ಬಗ್ಗೆ ಇನ್ನಷ್ಟೇ ಮಾಹಿತಿ ಹೊರ ಬೀಳಬೇಕಿದೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ ಎನ್ನಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.