Rashmika Mandanna: ಯಶ್​ ಬಗ್ಗೆ ಒಂದೇ ಪದದಲ್ಲಿ ವಿವರಿಸಿದ ರಶ್ಮಿಕಾ ಮಂದಣ್ಣ; ಅಭಿಮಾನಿಗಳು ಖುಷ್​

ಸೋಶಿಯಲ್​ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಅವರು ಸಕ್ರಿಯರಾಗಿದ್ದಾರೆ. ಆಗಾಗ ಅವರು ಅಭಿಮಾನಿಗಳ ಜೊತೆ ಪ್ರಶ್ನೋತ್ತರ ನಡೆಸುತ್ತಾರೆ.

Rashmika Mandanna: ಯಶ್​ ಬಗ್ಗೆ ಒಂದೇ ಪದದಲ್ಲಿ ವಿವರಿಸಿದ ರಶ್ಮಿಕಾ ಮಂದಣ್ಣ; ಅಭಿಮಾನಿಗಳು ಖುಷ್​
ರಶ್ಮಿಕಾ ಮಂದಣ್ಣ, ಯಶ್
Follow us
ಮದನ್​ ಕುಮಾರ್​
|

Updated on: May 17, 2023 | 2:07 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ವೃತ್ತಿಜೀವನ ಆರಂಭಿಸಿದ್ದು ಕನ್ನಡ ಚಿತ್ರರಂಗದಿಂದ. ಆದರೆ ಅವರು ಈಗ ಕನ್ನಡ ಚಿತ್ರರಂಗದಿಂದಲೇ (Sandalwood) ದೂರ ಉಳಿದುಕೊಂಡಿದ್ದಾರೆ. ಈ ನಡುವೆ ಅವರು ಅಭಿಮಾನಿಗಳ ಜೊತೆ ಟ್ವಿಟರ್​ನಲ್ಲಿ ಪ್ರಶ್ನೋತ್ತರ ನಡೆಸಿದ್ದಾರೆ. ಆಗ ಅವರಿಗೆ ಯಶ್ (Yash)​ ಬಗ್ಗೆ ಪ್ರಶ್ನೆ ಎದುರಾಗಿದೆ. ಒಂದೇ ಪದದಲ್ಲಿ ಯಶ್​ ಬಗ್ಗೆ ಹೇಳಿ ಎಂದು ನೆಟ್ಟಿಗರೊಬ್ಬರು ಮನವಿ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ರಶ್ಮಿಕಾ ಮಂದಣ್ಣ ಅವರು ‘ಸೂಪರ್​ ಸ್ಟಾರ್​’ ಎಂದು ಉತ್ತರ ನೀಡಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದ್ದು, ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಅವರು ಸಕ್ರಿಯರಾಗಿದ್ದಾರೆ. ಆಗಾಗ ಅವರು ಅಭಿಮಾನಿಗಳ ಜೊತೆ ಪ್ರಶ್ನೋತ್ತರ ನಡೆಸುತ್ತಾರೆ. ಆ ಮೂಲಕ ಅವರು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರುತ್ತಾರೆ.

ಕನ್ನಡದಲ್ಲಿ ಗಣೇಶ್​, ಪುನೀತ್ ರಾಜ್​ಕುಮಾರ್​, ರಕ್ಷಿತ್​ ಶೆಟ್ಟಿ, ಧ್ರುವ ಸರ್ಜಾ ಮುಂತಾದವರ ಜೊತೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಆದರೆ ಯಶ್​ ಜೊತೆ ನಟಿಸುವ ಅವಕಾಶ ಅವರಿಗೆ ಸಿಕ್ಕಿಲ್ಲ. ಸದ್ಯಕ್ಕಂತೂ ರಶ್ಮಿಕಾ ಅವರು ಪರಭಾಷೆ ಪ್ರಾಜೆಕ್ಟ್​ಗಳಲ್ಲೇ ಹೆಚ್ಚು ಬ್ಯುಸಿ ಆಗಿದ್ದಾರೆ. ಇತ್ತ, ಯಶ್​ ಅವರು ‘ಕೆಜಿಎಫ್​: ಚಾಪ್ಟರ್​ 2’ ಬಳಿಕ ಯಾವುದೇ ಹೊಸ ಪ್ರಾಜೆಕ್ಟ್​ ಅನೌನ್ಸ್​ ಮಾಡಿಲ್ಲ. ಆದಷ್ಟು ಬೇಗ ಅವರು ಹೊಸ ಸಿನಿಮಾ ಬಗ್ಗೆ ಮಾಹಿತಿ ನೀಡಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಇದನ್ನೂ ಓದಿ: Rashmika Mandanna: ನಾನ್​-ವೆಜ್​ ತಿನ್ನಲ್ಲ ಅಂತ ಸುಳ್ಳು ಹೇಳಿದ್ರಾ ರಶ್ಮಿಕಾ ಮಂದಣ್ಣ? ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ಇದನ್ನೂ ಓದಿ
Image
Radhika Pandit: ಯಶ್​​ಗಿಂತ ರಾಧಿಕಾ ಪಂಡಿತ್ ಎಷ್ಟು ವರ್ಷ ದೊಡ್ಡವರು? ಇಲ್ಲಿದೆ ಮಾಹಿತಿ
Image
Yash Birthday: ಬರ್ತ್​ಡೇಗೂ ಮೊದಲು ಅಭಿಮಾನಿಗಳ ಭೇಟಿ ಮಾಡಿದ ಯಶ್; ಇದಕ್ಕಿದೆ ಕಾರಣ
Image
Yash Birthday: ‘ಕ್ಷಮಿಸಿ, ಹುಟ್ಟುಹಬ್ಬಕ್ಕೆ ನಿಮ್ಮ ಜತೆ ಇರಲು ಆಗುತ್ತಿಲ್ಲ’: ಅಭಿಮಾನಿಗಳಿಗೆ ಯಶ್​ ಪತ್ರ
Image
Yash: ನಟ ಯಶ್​ ಅವರನ್ನು ಭೇಟಿ ಮಾಡಿದ ಭಾರತೀಯ ಕ್ರಿಕೆಟಿಗರಾದ ಹಾರ್ದಿಕ್​, ಕೃನಾಲ್ ಪಾಂಡ್ಯ

ರಶ್ಮಿಕಾ ಮಂದಣ್ಣ ಟಾಲಿವುಡ್​ನಲ್ಲಿ ಫೇಮಸ್ ಆದ ಬಳಿಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ಅವರು ಈಗಾಗಲೇ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಅಮಿತಾಭ್ ಬಚ್ಚನ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ರಣಬೀರ್ ಕಪೂರ್ ಜೊತೆ ಅವರು ‘ಅನಿಮಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಕ್ಕಿ ಕೌಶಲ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಛತ್ರಪತಿ ಶಿವಾಜಿ ಸೊಸೆಯ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದರ ಜೊತೆ ಮತ್ತೊಂದು ಸಿನಿಮಾ ಮಾತುಕತೆಯಲ್ಲಿ ರಶ್ಮಿಕಾ ಬ್ಯುಸಿ ಇದ್ದಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ: Rashmika Mandanna: ರಶ್ಮಿಕಾ ಬಳಿ ಸೆಲ್ಫಿ ಕೇಳಿದ ಅಭಿಮಾನಿಯನ್ನು ಎಳೆದೊಯ್ದ ಬಾಡಿಗಾರ್ಡ್​; ನಟಿಯ ರಿಯಾಕ್ಷನ್ ಹೇಗಿತ್ತು?

ರಶ್ಮಿಕಾ ಮಂದಣ್ಣ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅವರು ‘ರೇನ್​ ಬೋ’ ಸಿನಿಮಾದ ಮೊದಲ ಹಂತದ ಶೂಟಿಂಗ್​ ಮುಗಿಸಿದ್ದಾರೆ. ಸಿನಿಮಾ ಕೆಲಸಗಳನ್ನು ಮುಗಿಸುವಲ್ಲಿ ಕೊಡಗಿನ ಬೆಡಗಿ ರಶ್ಮಿಕಾ ಅವರು ಸಖತ್​ ಫಾಸ್ಟ್​ ಆಗಿದ್ದಾರೆ. ಒಂದೆಡೆ ‘ಪುಷ್ಪ 2’ ಸಿನಿಮಾದ ಶೂಟಿಂಗ್​ ಹಾಗೂ ಇನ್ನೊಂದೆಡೆ ‘ರೇನ್​ ಬೋ’ ಚಿತ್ರದ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ: ‘ಶ್ರೀವಲ್ಲಿ ಪಾತ್ರವನ್ನು ರಶ್ಮಿಕಾಗಿಂತ ನಾನೇ ಉತ್ತಮವಾಗಿ ಮಾಡುತ್ತಿದ್ದೆ’; ಕೊಂಕು ತೆಗೆದ ತಮಿಳು ನಟಿ

‘ರೇನ್​ ಬೋ’ ಚಿತ್ರದ ಮೊದಲ ಹಂತದ ಶೂಟಿಂಗ್​ ಮುಗಿಯಿತು ಎಂಬುದನ್ನು ತಿಳಿಸಲು ರಶ್ಮಿಕಾ ಮಂದಣ್ಣ ಅವರು ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದರು. ನಟ ದೇವ್​ ಮೋಹನ್​ ಜೊತೆಗಿನ ಸೆಲ್ಫಿಯನ್ನು ಅವರು ಶೇರ್​ ಮಾಡಿಕೊಂಡಿದ್ದರು. ರಶ್ಮಿಕಾ ಮಂದಣ್ಣ ಅವರ ವೃತ್ತಿಜೀವನಕ್ಕೆ ಇಡೀ ಕುಟುಂಬದ ಬೆಂಬಲ ಇದೆ. ‘ರೇನ್​ ಬೋ’ ಶೂಟಿಂಗ್​ ನೋಡಲು ರಶ್ಮಿಕಾ ಸಹೋದರಿ ಕೂಡ ಬಂದಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ