ನಟಿ ಪೂನಂ ಪಾಂಡೆ (Poonam Pandey) ಅವರು ಸಿನಿಮಾಗಳಿಗಿಂತಲೂ ವಿವಾದಗಳಿಂದಲೇ ಹೆಚ್ಚು ಫೇಮಸ್. ವೃತ್ತಿ ಬದುಕಿನಲ್ಲಿ ಮಾತ್ರವಲ್ಲದೇ ವೈಯಕ್ತಿಕ ಜೀವನದಲ್ಲೂ ಅವರು ಹತ್ತಾರು ಕಿರಿಕ್ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಲವು ಬೋಲ್ಡ್ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅವರು ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಾರೆ. ಆದರೆ ಅದೇ ಈಗ ಪೂನಂ ಪಾಂಡೆಗೆ ಮುಳುವಾಗಿದೆ. ಎರಡು ವರ್ಷಗಳ ಹಿಂದೆ ಸಾರ್ವಜನಿಕವಾಗಿ ಬೆತ್ತಲೆ ಫೋಟೋಶೂಟ್ ಮಾಡಿದ್ದ ಅವರ ವಿರುದ್ಧ ಗೋವಾ ಪೊಲೀಸರು ಚಾರ್ಜ್ಶೀಟ್ (Chargesheet) ಸಲ್ಲಿಕೆ ಮಾಡಿದ್ದಾರೆ. ಈ ಫೋಟೋಶೂಟ್ ನಡೆದಾಗ ಅವರ ಜೊತೆ ಪತಿ ಸ್ಯಾಮ್ ಬಾಂಬೆ (Sam Bombay) ಕೂಡ ಇದ್ದರು. ಹಾಗಾಗಿ ಅವರ ಹೆಸರು ಕೂಡ ಚಾರ್ಜ್ಶೀಟ್ನಲ್ಲಿ ಉಲ್ಲೇಖ ಆಗಿದೆ. ಮದುವೆ ಆದ ಕೆಲವೇ ದಿನಗಳಲ್ಲಿ ಈ ಜೋಡಿಯ ನಡುವೆ ವೈಮನಸ್ಸು ಮೂಡಿದ್ದರಿಂದ ಇಬ್ಬರೂ ಬೇರೆ ಬೇರೆ ಆದರು. ಈಗ ಇಬ್ಬರಿಗೂ ಕಾನೂನಿಕ ಸಂಕಷ್ಟ ಎದುರಾಗಿದೆ.
2022ರಲ್ಲಿ ಪೂನಂ ಪಾಂಡೆ ಮತ್ತು ಸ್ಯಾಮ್ ಬಾಂಬೆ ಅವರು ಚಾಪೋಲಿ ಡ್ಯಾಮ್ಗೆ ತೆರಳಿದ್ದರು. ಅಲ್ಲಿ ಎಲ್ಲರ ಎದುರು ಬೆತ್ತಲೆ ಫೋಟೋಶೂಟ್ ಮಾಡಿದ್ದರು. ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲವಾಗಿ ನಡೆದುಕೊಂಡಿದ್ದರಿಂದ ಅವರ ವಿರುದ್ಧ ಕೇಸ್ ದಾಖಲಾಗಿತ್ತು. ಆ ಸಂದರ್ಭದ ಕೆಲವು ವಿಡಿಯೋ ಮತ್ತು ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇಬ್ಬರನ್ನೂ ಬಂಧಿಸಿ, ನಂತರ ಬಿಡುಗಡೆ ಮಾಡಲಾಗಿತ್ತು.
ಈ ಕೇಸ್ನಲ್ಲಿ ಅನೇಕ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. 39 ಜನರು ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ ಹಲವೆಡೆ ವರದಿ ಆಗಿದೆ. ಕನ್ನಡದ ‘ಲವ್ ಈಸ್ ಪಾಯಿಸನ್’ ಸಿನಿಮಾದಲ್ಲಿ ಪೂನಂ ಪಾಂಡೆ ನಟಿಸಿದ್ದಾರೆ. ಹಿಂದಿ, ತೆಲುಗು, ಭೋಜ್ಪುರಿ ಭಾಷೆಯ ಚಿತ್ರಗಳಲ್ಲೂ ಅವರು ಅಭಿನಯಿಸಿದ್ದಾರೆ. ಸಿನಿಮಾಗಳಿಗಿಂತಲೂ ವಿವಾದದಿಂದಲೇ ಅವರು ಹೆಚ್ಚು ಸುದ್ದಿ ಆಗುತ್ತಾರೆ.
ರಿಯಾಲಿಟಿ ಶೋಗಳಲ್ಲೂ ಭಾಗವಹಿಸುವ ಮೂಲಕ ಪೂನಂ ಪಾಂಡೆ ಅವರು ಖ್ಯಾತಿ ಗಳಿಸಿದ್ದಾರೆ. ‘ಫಿಯರ್ ಫ್ಯಾಕ್ಟರ್: ಖತ್ರೋಂಕೆ ಕಿಲಾಡಿ 4’ ಶೋನಲ್ಲಿ ಅವರು ಸ್ಪರ್ಧಿಸಿದ್ದರು. ಕಂಗನಾ ರಣಾವತ್ ನಡೆಸಿಕೊಟ್ಟ ‘ಲಾಕ್ ಅಪ್’ ಶೋನಲ್ಲಿ ಭಾಗವಹಿಸುವ ಮೂಲಕವೂ ಪೂನಂ ಪಾಂಡೆ ಫೇಮಸ್ ಆಗಿದ್ದಾರೆ. ಇತ್ತೀಚೆಗಷ್ಟೇ ಈ ಕಾರ್ಯಕ್ರಮ ಮುಕ್ತಾಯ ಆಗಿದೆ. ಪೂನಂ ಪಾಂಡೆ ತಮ್ಮದೇ ಮೊಬೈಲ್ ಆಪ್ ಹೊಂದಿದ್ದರು. ಬಳಿಕ ಅದನ್ನು ಗೂಗಲ್ ಬ್ಯಾನ್ ಮಾಡಿತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.