ಅಕ್ಕಿನೇನಿ ನಾಗೇಶ್ವರ್ ರಾವ್ ಸ್ಮರಣಾರ್ಥ ಅಕ್ಕಿನೇನಿ ಇಂಟರ್ನ್ಯಾಷನಲ್ ಫೌಂಡೇಷನ್ ಎಎನ್ಆರ್ ನ್ಯಾಷನಲ್ ಅವಾರ್ಡ್ ನೀಡುತ್ತಾ ಬಂದಿದೆ. ಈ ಬಾರಿ ಈ ಪ್ರಶಸ್ತಿಯನ್ನು ಚಿರಂಜೀವಿ ಅವರಿಗೆ ನೀಡಲಾಗಿದೆ. ಅಮಿತಾಭ್ ಬಚ್ಚನ್ ಅವರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಈ ಅವಾರ್ಡ್ನ ಚಿರಂಜೀವಿಗೆ ನೀಡಿದ್ದಾರೆ.
ಚಿರಂಜೀವಿ ಹಾಗೂ ಅಮಿತಾಭ್ ಬಚ್ಚನ್ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಈ ಬಾಂಧವ್ಯದ ಬಗ್ಗೆ ಅಮಿತಾಭ್ ಬಚ್ಚನ್ ಮಾತನಾಡಿದ್ದಾರೆ. ‘ಕಲ್ಕಿ 2898 ಎಡಿ’, ‘ಮನಮ್’, ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ನಟಿಸಿ ತೆಲುಗು ಚಿತ್ರರಂಗದಲ್ಲಿ ಅವರು ಹೆಸರು ಮಾಡಿದ್ದಾರೆ. ತೆಲುಗು ಚಿತ್ರರಂಗದ ಒಂದು ಭಾಗ ಎನ್ನುವ ಭಾವನೆ ಅಮಿತಾಭ್ ಅವರಿಗೆ ಬಂದಿದೆ.
‘ಚಿರಂಜೀವಿ ನನ್ನ ಆಪ್ತ ಗೆಳೆಯ. ನಾನು ಏನನ್ನಾದರೂ ಕೇಳಿದರೆ ಅಥವಾ ಏನಾದರೂ ಬೇಕಿದ್ದರೆ ಅವರು ಸದಾ ನನ್ನ ಜೊತೆ ಇರುತ್ತಾರೆ. ಅದಕ್ಕೆ ಧನ್ಯವಾದಗಳು. ನಿಮ್ಮ ಸಿನಿಮಾದಲ್ಲಿ ನನಗೆ ಅವಕಾಶ ನೀಡಿದ್ದಕ್ಕೆ ಧನ್ಯವಾದ. ವೈಜಯಂತಿ ನಿರ್ಮಾಣದಲ್ಲಿ ಸಿನಿಮಾದಲ್ಲಿ ಕೆಲಸ ಮಾಡಲು ಅವಕಾಶ ನೀಡಿದ ನಾಗ್ ಅಶ್ವಿನ್ಗೆ (ಕಲ್ಕಿ 2898 ಎಡಿ) ಧನ್ಯವಾದ. ನಾನು ತೆಲುಗು ಚಿತ್ರರಂಗದ ಸದಸ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ’ ಎಂದಿದ್ದಾರೆ ಅವರು.
‘ನಾನು ಮತ್ತೊಮ್ಮೆ ನನ್ನ ಕೃತಜ್ಞತೆ ಹೇಳಲು ಬಯಸುತ್ತೇನೆ. ದಯವಿಟ್ಟು ಇನ್ನು ಮುಂದೆ ನನ್ನನ್ನು ತೆಲುಗು ಚಿತ್ರರಂಗದ ಸದಸ್ಯನಾಗಿ ಪರಿಗಣಿಸಿ. ನಾಗಾರ್ಜುನ, ನಾಗ್ ಅಶ್ವಿನ್, ಚಿರಂಜೀವಿ ಅವರಂತವರು ಅವಕಾಶ ನೀಡಿದ್ದಕ್ಕೆ ಧನ್ಯವಾದ. ಮುಂದಿನ ಬಾರಿ ನಿಮ್ಮ ಸಿನಿಮಾಗಳಲ್ಲಿ ನನಗೆ ಅವಕಾಶ ನೀಡಲು ಮರೆಯಬೇಡಿ’ ಅವರು ಹೇಳಿದ್ದಾರೆ.
ಇದನ್ನೂ ಓದಿ: ಈ ಫೋಟೋದಲ್ಲಿ ಇದ್ದಾರೆ ಅಮಿತಾಭ್ ಬಚ್ಚನ್; ಯಾರೆಂದು ಪತ್ತೆ ಹಚ್ಚುವಿರಾ?
ಅಮಿತಾಭ್ ಬಚ್ಚನ್ ಅವರು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಅಶ್ವತ್ಥಾಮನಾಗಿ ಕಾಣಿಸಿಕೊಂಡರು. ಅವರ ಪಾತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಅವರು ಎರಡನೇ ಪಾರ್ಟ್ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಶೂಟಿಂಗ್ ಶೀಘ್ರವೇ ಆರಂಭ ಆಗುವ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.