ಬಿಷ್ಣೋಯಿಯಿಂದ ಬೆದರಿಕೆ, ಕಮಿಡಿಯನ್ ಮುನ್ನಾವರ್ ಫಾರುಖಿಗೂ ಭದ್ರತೆ

|

Updated on: Oct 15, 2024 | 5:09 PM

ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಇತ್ತೀಚೆಗಷ್ಟೆ ಸಲ್ಮಾನ್ ಖಾನ್​ರ ಆಪ್ತ ಬಾಬಾ ಸಿದ್ಧಿಕಿಯನ್ನು ಕೊಂದಿದೆ. ಸಲ್ಮಾನ್ ಖಾನ್ ಅನ್ನೂ ಕೊಲ್ಲುವುದಾಗಿ ಹೇಳಿದೆ. ಇದರ ನಡುವೆ ಕಮಿಡಿಯನ್ ಮುನಾವರ್ ಫಾರೂಖಿ ಮೇಲೆ ಈ ಗ್ಯಾಂಗ್​ನ ಕಣ್ಣಿದ್ದು, ಮುಂಬೈ ಪೊಲೀಸರು ಮುನಾವರ್ ಭದ್ರತೆ ಹೆಚ್ಚಿಸಿದ್ದಾರೆ.

ಬಿಷ್ಣೋಯಿಯಿಂದ ಬೆದರಿಕೆ, ಕಮಿಡಿಯನ್ ಮುನ್ನಾವರ್ ಫಾರುಖಿಗೂ ಭದ್ರತೆ
Follow us on

ಇತ್ತೀಚೆಗಷ್ಟೆ ಎನ್​ಸಿಪಿ ಮುಖಂಡ, ಬಾಂದ್ರಾ ಮಾಜಿ ಶಾಸಕ ಬಾಬಾ ಸಿದ್ಧಿಕಿಯನ್ನು ಕೆಲವು ಅಗಂತುಕರು ಕೊಂದಿದ್ದಾರೆ. ಈ ಕೃತ್ಯವನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್​ನವರೇ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಲ್ಮಾನ್ ಖಾನ್​ ಅನ್ನು ಕೊಲ್ಲಲು ಟೊಂಕ ಕಟ್ಟಿ ನಿಂತಿರುವ ಬಿಷ್ಣೋಯಿ ಗ್ಯಾಂಗ್​ ನವರು, ಸಲ್ಮಾನ್ ಖಾನ್​ಗೆ ಆಪ್ತವಾಗಿರುವ ಬಾಬಾ ಸಿದ್ಧಿಕಿಯನ್ನು ಕೊಂದಿದ್ದು, ಇದರ ಜೊತೆಗೆ ತಾವು ಕೊಲ್ಲಲು ನಿರ್ಧರಿಸಿರುವ ಸೆಲೆಬ್ರಿಟಿಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದ್ದಾರೆ. ಪಟ್ಟಿಯಲ್ಲಿ ಕಮಿಡಿಯನ್, ಬಿಗ್​ಬಾಸ್ ವಿನ್ನರ್ ಮುನಾವರ್ ಫಾರೂಖಿ ಹೆಸರು ಸಹ ಇದೆ.

ಮುನಾವರ್ ಸಿದ್ಧಿಕಿಯನ್ನು ಕೊಲ್ಲಲು ಸಹ ಬಿಷ್ಣೋಯಿ ಗ್ಯಾಂಗ್ ಪ್ರಯತ್ನ ಪಟ್ಟಿತಂತೆ. ಈಗಾಗಲೇ ಜೈಲಿನಲ್ಲಿರುವ ಬಿಷ್ಣೋಯಿ ಈ ವಿಷಯ ಹೇಳಿಕೊಂಡಿದ್ದಾನೆ. ಮುನಾವರ್ ಫಾರೂಖಿ, ದೆಹಲಿಗೆ ಬಂದಾಗ ಆತನನ್ನು ನಮ್ಮ ತಂಡದವರು ಫಾಲೋ ಮಾಡಿದ್ದರು, ಫಾರೂಖಿ ಉಳಿದುಕೊಂಡಿದ್ದ ಹೋಟೆಲ್​ನಲ್ಲಿಯೇ ರೂಂ ಸಹ ಬುಕ್ ಮಾಡಿದ್ದರು. ಆದರೆ ಪೊಲೀಸರಿಗೆ ಹೇಗೋ ಮಾಹಿತಿ ಸಿಕ್ಕು ಮುನಾವರ್ ಅನ್ನು ಬೇರೆ ಸ್ಥಳಕ್ಕೆ ಕೊಂಡೊಯ್ದರು. ಇಲ್ಲವಾದರೆ ಮುನಾವರ್​ನನ್ನು ಅಂದೇ ಕೊಲ್ಲುತ್ತಿದ್ದರು ಎಂದು ಹೇಳಿದ್ದಾನೆ. ಈ ವಿಷಯ ಹೊರಬೀಳುತ್ತಿದ್ದಂತೆ ಮುನಾವರ್ ಫಾರೂಖಿಯ ಭದ್ರತೆಯನ್ನು ಹೆಚ್ಚು ಮಾಡಲಾಗಿದೆ.

ಇದನ್ನೂ ಓದಿ:ಸಲ್ಮಾನ್ ಖಾನ್ ಹತ್ಯೆಗೆಂದು 60 ಶೂಟರ್​ಗಳನ್ನು ನೇಮಿಸಿದ್ದ ಲಾರೆನ್ಸ್ ಬಿಷ್ಣೋಯ್​

ಮುನಾವರ್ ಫಾರೂಖಿ ಗುಜರಾತ್​ನವರಾಗಿದ್ದು ಸ್ಟಾಂಡಪ್​ ಕಾಮೆಡಿಯನ್ ಆಗಿದ್ದಾರೆ. ಆದರೆ 2021 ರಲ್ಲಿ ಹಿಂದೂ ಧರ್ಮದ ಅವಹೇಳನ ಪ್ರಕರಣದಲ್ಲಿ ಮುನಾವರ್ ಜೈಲು ಪಾಲಾಗಿದ್ದರು. ಆ ನಂತರ ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಮುನಾವರ್​ನ ಕಾಮಿಡಿ ಶೋಗಳನ್ನು ರದ್ದು ಮಾಡಲಾಯ್ತು. ಆ ನಂತರ ಮುನಾವರ್ ತಾವು ಕಾಮಿಡಿ ಬಿಡುತ್ತಿರುವುದಾಗಿ ಹೇಳಿದ್ದರು. ಅದಾದ ಬಳಿಕ ಕಂಗನಾ ರನೌತ್ ನಡೆಸಿಕೊಟ್ಟ ‘ಲಾಕ್​ ಅಪ್’ ಹೆಸರಿನ ಬಿಗ್​ಬಾಸ್ ಮಾದರಿಯ ರಿಯಾಲಿಟಿ ಶೋಗೆ ಹೋದ ಮುನಾವರ್ ಅಲ್ಲಿ ಬಹುಮಾನ ಗೆದ್ದರು. ಆ ನಂತರ ಬಿಗ್​ಬಾಸ್​ಗೆ ಸಹ ಹೋದ ಮುನಾವರ್ ಅಲ್ಲಿಯೂ ಸಹ ಗೆದ್ದು 50 ಲಕ್ಷ ಮತ್ತು ಒಂದು ಕಾರನ್ನು ಬಹುಮಾನವಾಗಿ ಪಡೆದರು. ಆ ಬಳಿಕ ಮತ್ತೆ ಕಾಮಿಡಿ ಮುಂದುವರೆಸಿದ್ದಾರೆ.

ಮುನಾವರ್, ಸಲ್ಮಾನ್ ಖಾನ್​ರ ಅಭಿಮಾನಿ ಆಗಿದ್ದು ಅದರ ಜೊತೆಗೆ ಹಿಂದೂ ಧರ್ಮದ ಅವಹೇಳನ ಪ್ರಕರಣದಲ್ಲಿ ಸಿಕ್ಕಿಕೊಂಡಿದ್ದ ಕಾರಣ ಮುನಾವರ್ ಅನ್ನು ಕೊಲ್ಲುವ ಪ್ರಯತ್ನವನ್ನು ಬಿಷ್ಣೋಯಿ ಗ್ಯಾಂಗ್ ಮಾಡಿತ್ತಂತೆ. ಬಿಷ್ಣೋಯಿ ಗ್ಯಾಂಗ್ ಬಿಡುಗಡೆ ಮಾಡಿರುವ ಹಿಟ್​ ಲಿಸ್ಟ್​ನಲ್ಲಿ, ಸಲ್ಮಾನ್ ಖಾನ್, ಬಾಬಾ ಸಿದ್ಧಿಕಿ ಪುತ್ರ ಜೀಶಾನ್ ಸಿದ್ಧಿಕಿ, ಈ ಹಿಂದೆ ಇದೇ ಗ್ಯಾಂಗ್​ನವರು ಕೊಂದಿರುವ ಸಿದ್ಧು ಮೂಸೆವಾಲಾ ಮ್ಯಾನೇಜರ್ ಶಂಗನ್​ಪ್ರೀತ್ ಸಿಂಗ್, ಕುಶಾಲ್ ಚೌಧರಿ ಅಲಿಯಾಸ್ ಗ್ಯಾಂಗ್​ಸ್ಟರಿ ಚೌಧರಿ, ಅಮಿತ್ ದಗಾರ್. ಇದಕ್ಕೆ ಈಗ ಮುನಾವರ್ ಫಾರೂಖಿ ಹೆಸರು ಸೇರಿಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ