ಪ್ರೆಗ್ನೆನ್ಸಿಯಲ್ಲಿರುವಾಗಲೇ ದೊಡ್ಡ ರಿಸ್ಕ್ ತೆಗೆದುಕೊಂಡ ದೀಪಿಕಾ ಪಡುಕೋಣೆ

ನಟಿ ದೀಪಿಕಾ ಪಡುಕೋಣೆ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗರ್ಭಾವಸ್ಥೆಯಲ್ಲಿದ್ದರೂ ಅವರು ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ 'ರಾಕಾ' ಮತ್ತು ಶಾರುಖ್ ಖಾನ್ ಅವರ 'ಕಿಂಗ್' ಚಿತ್ರಗಳ ಶೂಟಿಂಗ್ ಮುಂದುವರಿಸಿದ್ದಾರೆ. ತೀವ್ರವಾದ ಆಕ್ಷನ್ ಸನ್ನಿವೇಶಗಳನ್ನು ಸಹ ಚಿತ್ರೀಕರಿಸುತ್ತಿದ್ದಾರೆ. ತಂಡ ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದೆ, ವೈದ್ಯರು ಕೂಡ ಸೆಟ್‌ನಲ್ಲೇ ಇದ್ದಾರೆ.

ಪ್ರೆಗ್ನೆನ್ಸಿಯಲ್ಲಿರುವಾಗಲೇ ದೊಡ್ಡ ರಿಸ್ಕ್ ತೆಗೆದುಕೊಂಡ ದೀಪಿಕಾ ಪಡುಕೋಣೆ
ದೀಪಿಕಾ

Updated on: Apr 20, 2026 | 9:03 AM

ನಟಿ ದೀಪಿಕಾ ಪಡುಕೋಣೆ (Deepika) ಅವರು ಈ ಮೊದಲು ದುವಾ ಹೆಸರಿನ ಹೆಣ್ಣು ಮಗುವಿಗೆ ಜನ್ಮನೀಡಿದ್ದರು. ಈಗ ಎರಡನೇ ಮಗು ಆಗಮನದ ಬಗ್ಗೆ ಘೋಷಣೆ ಮಾಡಿದ್ದಾರೆ. ದೀಪಿಕಾ ಪ್ರೆಗ್ನೆಂಟ್ ವಿಷಯ ಘೋಷಣೆ ಮಾಡಿರೋ ವಿಷಯ ಕೇಳಿ ಅನೇಕರು ಖುಷಿ ಆಗಿದ್ದಾರೆ. ಆದರೆ, ಅಲ್ಲು ಅರ್ಜುನ್ ಹಾಗೂ ಅಟ್ಲೀ ಅಭಿಮಾನಿಗಳಿಗೆ ಈ ಬಗ್ಗೆ ಚಿಂತೆ ಶುರುವಾಗಿದೆ. ‘ರಾಕ’ ಸಿನಿಮಾದ ಶೂಟಿಂಗ್ ವಿಳಂಬ ಆಗುತ್ತದೆಯೇ ಎನ್ನುವ ಪ್ರಶ್ನೆಮೂಡಿದೆ. ಆದರೆ, ಹಾಗಾಗುತ್ತಿಲ್ಲ. ಪ್ರೆಗ್ನೆನ್ಸಿ ಮಧ್ಯೆಯೂ ದೀಪಿಕಾ ದೊಡ್ಡ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ.

‘ರಾಕಾ’ ಸಿನಿಮಾ ಬಹುನೀರಿಕ್ಷಿತ ಚಿತ್ರಗಳಲ್ಲಿ ಒಂದು. ಈ ಸಿನಿಮಾಗೆ ಅಟ್ಲಿ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಅವರು ಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ. ಈ ಚಿತ್ರಕ್ಕೆ ದೀಪಿಕಾ ನಾಯಕಿ. ಇತ್ತೀಚೆಗೆ ‘ರಾಕಾ’ ಸಿನಿಮಾ ಶೂಟಿಂಗ್ ಆರಂಭ ಆಗಿದೆ. ಈ ಸಮಯದಲ್ಲೇ ದೀಪಿಕಾ ಪ್ರೆಗ್ನೆಂಟ್ ಎನ್ನುವ ವಿಷಯ ರಿವೀಲ್ ಆಗಿದೆ.

ಇದನ್ನೂ ಓದಿ: ದೀಪಿಕಾ-ರಣವೀರ್ ಮಧ್ಯೆ ಯಾವುದೂ ಸರಿ ಇಲ್ಲ ಎಂದವರಿಗೆಲ್ಲ ಬಿತ್ತು ಬಲವಾದ ಏಟು

ಈ ತಿಂಗಳ ಆರಂಭದಲ್ಲಿ ಅರ್ಜುನ್ ಅವರ ಹುಟ್ಟುಹಬ್ಬದಂದು ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ರಿವೀಲ್ ಆಗಿದೆ. ದೀಪಿಕಾ ಲುಕ್ ಹೇಗಿರಲಿದೆ ಎಂಬ ಕುತೂಹಲವೂ ಇದೆ. ವಿಶೇಷ ಎಂದರೆ, ‘ತಮ್ಮ ಗರ್ಭಾವಸ್ಥೆಯಲ್ಲಿಯೇ ದೀಪಿಕಾ ಪಡುಕೋಣೆ ರಾಕಾ ಚಿತ್ರಕ್ಕಾಗಿ ತೀವ್ರವಾದ ಆ್ಯಕ್ಷನ್ ಸನ್ನಿವೇಶಗಳನ್ನು ಚಿತ್ರೀಕರಿಸುತ್ತಿದ್ದಾರೆ ಎಂಬುದು ವಿಶೇಷ.

ಶೂಟಿಂಗ್ ವೇಳೆ ತಂಡದವರು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದಾರಂತೆ. ವೈದ್ಯರನ್ನು ಕೂಡ ಸೆಟ್​​ನಲ್ಲೇ ಇರಿಸಲಾಗಿದ್ದು, ಅವರನ್ನು ಕನ್ಸಲ್ಟ್ ಮಾಡಿಯೇ ಮುಂದುವರಿಯಲಾಗುತ್ತಿದೆ. ಇನ್ನೂ ಕೆಲವು ತಿಂಗಳು ಶೂಟ್​​ನಲ್ಲಿ ಬ್ಯುಸಿ ಇರಲಿದ್ದಾರೆ. ಶಾರುಖ್ ನಟನೆಯ ‘ಕಿಂಗ್’ ಚಿತ್ರವನ್ನು ಕೂಡ ಅವರು ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us