ಇತ್ತೀಚೆಗಷ್ಟೆ ತಾಯಿ ಆಗಿರುವ ದೀಪಿಕಾ ಪಡುಕೋಣೆ ಪ್ರಸ್ತುತ ಸಿನಿಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಬ್ರೇಕ್ನಲ್ಲಿರುವಾಗಲಿ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಅದರಲ್ಲೂ ಭಾರತ ಅತ್ಯಂತ ನಿರೀಕ್ಷಿತ, ಹಾಗೂ ಈವರೆಗಿನ ಅತಿ ಹೆಚ್ಚು ಬಜೆಟ್ನ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಆದರೆ ದೀಪಿಕಾ ಸಾಮಾನ್ಯವಾಗಿ ನಾಯಕಿ ಪಾತ್ರದಲ್ಲಿ ನಟಿಸುತ್ತಾರೆ ಆದರೆ ಈ ಸಿನಿಮಾದಲ್ಲಿ ಅವರು ನಾಯಕಿ ಪಾತ್ರದಲ್ಲಿ ನಟಿಸುತ್ತಿಲ್ಲ. ಮಾತ್ರವಲ್ಲದೆ ದೀಪಿಕಾ ಪಡುಕೋಣೆ ಚಿತ್ರೀಕರಣ ಪ್ರಾರಂಭಿಸುವುದು ಇನ್ನೂ ಒಂದು ವರ್ಷದ ಬಳಿಕವಂತೆ.
‘ಆರ್ಆರ್ಆರ್’ ಸಿನಿಮಾ ಬಿಡುಗಡೆಗೆ ಮುಂಚೆಯೇ ರಾಜಮೌಳಿ, ತಮ್ಮ ಮುಂದಿನ ಸಿನಿಮಾವನ್ನು ಮಹೇಶ್ ಬಾಬು ಜೊತೆಗೆ ಮಾಡುವುದಾಗಿ ಘೋಷಣೆ ಮಾಡಿದ್ದರು. ‘ಆರ್ಆರ್ಆರ್’ ಸಿನಿಮಾ ಬ್ಲಾಕ್ ಬಸ್ಟರ್ ಆದ ಬಳಿಕ ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾದ ಸ್ಕೇಲ ದೊಡ್ಡದಾಗಿದ್ದು, ಕತೆ, ಚಿತ್ರಕತೆ, ತಂತ್ರಜ್ಞಾನ, ಕಲಾವಿದರು ಎಲ್ಲವೂ ಬದಲಾಗಿದೆ. ಮಾತ್ರವಲ್ಲದೆ ಈ ಸಿನಿಮಾದ ಬಜೆಟ್ 1000 ಕೋಟಿಗೂ ಹೆಚ್ಚಾಗಿದೆ. ಸಿನಿಮಾದಲ್ಲಿ ಹಲವು ವಿದೇಶಿ ಕಲಾವಿದರು ನಟಿಸುತ್ತಿದ್ದು, ಸಿನಿಮಾದ ಸಣ್ಣ-ಪುಟ್ಟ ಪಾತ್ರಕ್ಕೂ ಸಹ ಸ್ಟಾರ್ ನಟ-ನಟಿಯರನ್ನು ತೆಗೆದುಕೊಳ್ಳಲಾಗುತ್ತಿದೆ.
ಇದೀಗ ರಾಜಮೌಳಿ ಹಾಗೂ ಮಹೇಶ್ ಬಾಬು ಅವರ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ. ಆದರೆ ದೀಪಿಕಾ ಪಡುಕೋಣೆ ಈ ಸಿನಿಮಾದ ನಾಯಕಿ ಅಲ್ಲ ಎನ್ನಲಾಗುತ್ತಿದೆ. ವಿದೇಶಿ ನಟಿಯೊಬ್ಬರು ಈ ಸಿನಿಮಾದ ನಾಯಕಿ ಆಗಿದ್ದು, ಸಿನಿಮಾದಲ್ಲಿ ದೀಪಿಕಾರದ್ದು ಪೋಷಕ ಪಾತ್ರ ಎನ್ನಲಾಗುತ್ತಿದೆ. ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲು ಇನ್ನೂ ಸಾಕಷ್ಟು ಸಮಯವಿದ್ದು, ದೀಪಿಕಾ ಪಡುಕೋಣೆ ಈ ಚಿತ್ರತಂಡವನ್ನು ಒಂದು ವರ್ಷದ ಬಳಿಕ ಸೇರಿಕೊಳ್ಳಲಿದ್ದಾರಂತೆ.
ಇದನ್ನೂ ಓದಿ:ದೀಪಿಕಾ ಪಡುಕೋಣೆ ಕನ್ನಡದಲ್ಲಿ ಮಾತನಾಡಿದ ಈ ವಿಡಿಯೋ ನೋಡಿದ್ರಾ?
ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಬಹುತೇಕ ಅಂತ್ಯವಾಗಿದ್ದು, ಪ್ರಸ್ತುತ ಸಿನಿಮಾದ ಚಿತ್ರೀಕರಣಕ್ಕೆ ಲೊಕೇಶನ್ ಹುಡುಕುವ ಕಾರ್ಯದಲ್ಲಿ ರಾಜಮೌಳಿ ನಿರತರಾಗಿದ್ದಾರೆ. ಆಫ್ರಿಕಾಗೆ ತೆರಳಿರುವ ರಾಜಮೌಳಿ ಲೊಕೇಶ್ ಅಂತಿಮಗೊಳಿಸುತ್ತಿದ್ದಾರೆ. ಇದರ ಜೊತೆಗೆ ಕಲಾವಿದರನ್ನು ಫೈನಲ್ ಗೊಳಿಸುವ ಕಾರ್ಯವೂ ಚಾಲ್ತಿಯಲ್ಲಿದೆ. ಹಾಲಿವುಡ್ನ ಕೆಲವು ನಟ-ನಟಿಯರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಭಾರತ ಭಾಷೆಗಳು ಸೇರಿದಂತೆ ಚೀನಾ, ಜಪಾನ್, ಇಂಡೊನೇಷಿಯನ್, ರಷ್ಯನ್ ಇನ್ನೂ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಈ ಸಿನಿಮಾ ಪ್ಯಾನ್ ವರ್ಲ್ಡ್ ಸಿನಿಮಾ ಆಗಿರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ