Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಿಕಾ ಪಡುಕೋಣೆ ಕನ್ನಡದಲ್ಲಿ ಮಾತನಾಡಿದ ಈ ವಿಡಿಯೋ ನೋಡಿದ್ರಾ?

ಬಾಲಿವುಡ್​ನ ಸ್ಟಾರ್ ದೀಪಿಕಾ ಪಡುಕೋಣೆ ಬೆಂಗಳೂರಿನವರು, ಕನ್ನಡವನ್ನು ಸುಲಭವಾಗಿ ಮಾತನಾಡಬಲ್ಲರು. ಇದೀಗ ದೀಪಿಕಾರ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು, ಕೆಲವರು ಹಳ್ಳಿಗರೊಂದಿಗೆ ದೀಪಿಕಾ ಪಡುಕೋಣೆ ಕನ್ನಡದಲ್ಲಿ ಮಾತನಾಡಿದ್ದಾರೆ. ತಾವು ಅನುಭವಿಸಿದ್ದ ಮಾನಸಿಕ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ ಕನ್ನಡದಲ್ಲಿ ಮಾತನಾಡಿದ ಈ ವಿಡಿಯೋ ನೋಡಿದ್ರಾ?
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on:Oct 20, 2024 | 1:14 PM

ದೀಪಿಕಾ ಪಡುಕೋಣೆ ಅವರು ಕರ್ನಾಟಕದವರು. ಅವರು ಬೆಳೆದಿದ್ದು ಬೆಂಗಳೂರಿನಲ್ಲಿ. ಅವರು ಶಿಕ್ಷಣ ಪಡೆದಿದ್ದು ಕೂಡ ಬೆಂಗಳೂರಿನವರೇ. ಅವರಿಗೆ ಕನ್ನಡ ಬರುತ್ತದೆ. ಅವರು ಕನ್ನಡ ಸಿನಿಮಾದಲ್ಲಿ ಈ ಮೊದಲು ನಟಿಸಿದ್ದರು. ಈಗ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ಅವರು ಕನ್ನಡದಲ್ಲಿ ಮಾತನಾಡಿದ್ದರು.

ದೀಪಿಕಾ ಪಡುಕೋಣೆ ಅವರು ಈ ಮೊದಲು ಖಿನ್ನತೆಗೆ ಒಳಗಾಗಿದ್ದರು. ಅದನ್ನು ಓಪನ್ ಆಗಿ ಹೇಳಿಕೊಂಡಿದ್ದರು. ಈ ವಿಚಾರಕ್ಕೆ ಅವರು ಇಷ್ಟ ಆಗುತ್ತಾರೆ. ಅವರು ಅಭಿಮಾನಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೆ. ಖಿನ್ನತೆಗೆ ಒಳಗಾದಾಗ ಈ ಬಗ್ಗೆ ಅವರು ಹೇಳಿಕೊಂಡಿದ್ದರು. ಈಗ ಕನ್ನಡದಲ್ಲೇ ಮಾತನಾಡಿದ್ದರು.

‘ಖಿನ್ನತೆಗೆ ನನಗೆ ಔಷಧ ನೀಡಿದ್ದರು. ನಾನು ಅದನ್ನು ತೆಗೆದುಕೊಂಡಿದ್ದೀನಾ ಎಂದು ನನ್ನ ಅಮ್ಮ ಕೇಳುತ್ತಿದ್ದರು. ಕಾಳಜಿಯಿಂದ ಈ ಮಾತನ್ನು ಅಮ್ಮ ಕೇಳುತ್ತಿದ್ದರು. ನನಗೆ ಖಿನ್ನತೆ ಹೆಚ್ಚುತ್ತಿದೆ ಎನಿಸಿತು, ಹೀಗಾಗಿ ನಾನು ಔಷಧ ತೆಗೆದುಕೊಳ್ಳೋಕೆ ಆರಂಭಿಸಿದೆ. ನನ್ನ ಸ್ಟೋರಿನ ಎಲ್ಲರಿಗೂ ಹೇಳ್ತೀನಿ. ಇದರಿಂದ ಕೆಲವರಿಗೆ ಸಹಾಯ ಆಗಿದ್ದರೆ ಅದು ಒಳ್ಳೆಯ ವಿಚಾರ’ ಎಂದಿದ್ದಾರೆ ಅವರು.

‘ನಾನು ಔಷಧಿ ತೆಗೆದುಕೊಳ್ಳುವುದರ ಜೊತೆಗೆ ಒಳ್ಳೆಯ ಆಹಾರ, ವ್ಯಾಯಾಮ, ನಿದ್ದೆ ಹಾಗೂ ಒತ್ತಡದಿಂದ ದೂರ ಆಗಿದ್ದೇನೆ. ಈಗ ಯಾವುದೇ ತೊಂದರೆ ಇಲ್ಲ’ ಎಂದಿದ್ದಾರೆ ಅವರು. ಈ ವಿಡಿಯೋನ ಅನೇಕರು ಶೇರ್ ಮಾಡಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ ಅವರಿಗೆ ಹೆಣ್ಣು ಮಗು ಜನಿಸಿದೆ. ಮಗುವಿನ ಫೋಟೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಿ ಎಂದು ಫ್ಯಾನ್ಸ್ ಕಾಯುತ್ತಾ ಇದ್ದಾರೆ. ಸದ್ಯ ದೀಪಿಕಾ ಪಡುಕೋಣೆ ಅವರು ಹೊಸ ಸಿನಿಮಾ ಘೋಷಣೆ ಮಾಡಲಿ ಎಂದು ಕಾಯುತ್ತಿದ್ದಾರೆ. ಅವರು ಮಗು ಜನಿಸಿದ ಹಿನ್ನೆಲೆಯಲ್ಲಿ ಒಂದು ವರ್ಷ ಬ್ರೇಕ್ ಪಡೆದಿದ್ದಾರೆ. ಹೊಸ ಸಿನಿಮಾಗೆ ಇನ್ನೂ ಸಮಯ ಬೇಕಿದೆ.

ದೀಪಿಕಾ ಪಡುಕೋಣೆ ಅವರು ಇತ್ತೀಚೆಗೆ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸಿದ್ದರು. ಈಗ ಅವರು ‘ಸಿಂಗಂ ಅಗೇನ್’ ಚಿತ್ರದಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರ ಮಾಡುತ್ತಾ ಇದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:18 am, Sun, 20 October 24