AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರಿ ಮೊತ್ತಕ್ಕೆ ಮನೆ ಮಾರಾಟ ಮಾಡಿದ ಸಲ್ಮಾನ್ ಖಾನ್ ಸಹೋದರಿ

ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಮತ್ತು ಅವರ ಪತಿ ಆಯುಷ್ ಮುಂಬೈನಲ್ಲಿ ತಾವು ಹತ್ತು ವರ್ಷ ನೆಲೆಸಿದ್ದ ಮನೆಯನ್ನು ಭಾರಿ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ. ಸಲ್ಮಾನ್ ಖಾನ್​ ಹಾಗೂ ಅವರ ಕುಟುಂಬದವರಿಗೆ ಜೀವ ಬೆದರಿಕೆ ಬಂದ ಬೆನ್ನಲ್ಲೆ ಅರ್ಪಿತಾ ಮನೆ ಮಾರಿರುವುದು ಕುತೂಹಲ ಮೂಡಿಸಿದೆ.

ಭಾರಿ ಮೊತ್ತಕ್ಕೆ ಮನೆ ಮಾರಾಟ ಮಾಡಿದ ಸಲ್ಮಾನ್ ಖಾನ್ ಸಹೋದರಿ
ಮಂಜುನಾಥ ಸಿ.
|

Updated on: Oct 19, 2024 | 8:10 PM

Share

ಸಲ್ಮಾನ್ ಖಾನ್ ಖಾನ್ ಈಗ ಸಂಕಷ್ಟದಲ್ಲಿದ್ದಾರೆ. ಅವರ ಜೀವಕ್ಕೆ ಬೆದರಿಕೆ ಇದೆ. ಅವರ ಆತ್ಮೀಯ ಸ್ನೇಹಿತ ಅವರ ಕಾರಣಕ್ಕೆ ನಿಧನ ಹೊಂದಿದ್ದಾರೆ. ಆದರೆ ತಮ್ಮ ಹಾಗೂ ಕುಟುಂಬದ ಭದ್ರತೆಗಾಗಿ ಸಲ್ಮಾನ್ ಖಾನ್ ಕೆಲವು ಹೆಜ್ಜೆಗಳನ್ನು ಇಟ್ಟಿದ್ದಾರೆ. ಸುಮಾರು 4000 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಸಲ್ಮಾನ್ ಖಾನ್ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಭದ್ರತೆಗೆ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದಾರೆ. ಇದರ ನಡುವೆ ಸಲ್ಮಾನ್ ಖಾನ್​ರ ಸಹೋದರಿ ಅರ್ಪಿತಾ ಖಾನ್ ಮುಂಬೈನಲ್ಲಿದ್ದ ತಮ್ಮ ಮನೆಯನ್ನು ಭಾರಿ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ.

ಅರ್ಪಿತಾ ಖಾನ್ ಹಾಗೂ ಅವರ ಪತಿ ಆಯುಷ್ ಶರ್ಮಾ ತಮ್ಮ ಮುಂಬೈನ ಬಾಂದ್ರಾನಲ್ಲಿದ್ದ 22 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಆದರೆ ಹಣಕಾಸಿನ ಸಮಸ್ಯೆಯಿಂದ ಅವರ ಈ ನಿರ್ಣಯ ತೆಗೆದುಕೊಂಡಿಲ್ಲ. ಬದಲಿಗೆ ಬಾಂದ್ರಾನಲ್ಲಿದ್ದ ಅಪಾರ್ಟ್​ಮೆಂಟ್​ ಫ್ಲ್ಯಾಟ್ ಅನ್ನು ಮಾರಾಟ ಮಾಡಿ, ಮುಂಬೈನ ವರ್ಲಿಯಲ್ಲಿರುವ ಇನ್ನೂ ದೊಡ್ಡ ಮತ್ತು ಐಶಾರಾಮಿ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಈಗ ಈ ಜೋಡಿ ಸ್ಥಳಾಂತರಗೊಳ್ಳುತ್ತಿರುವ ಮನೆಯ ಬೆಲೆ ಸುಮಾರು 50 ಕೋಟಿ ರೂಪಾಯಿ ಎನ್ನಲಾಗುತ್ತಿದೆ.

ಇದನ್ನೂ ಓದಿ:Fact Check: ಲಾರೆನ್ಸ್ ಬಿಷ್ಣೋಯಿಗೆ ಸಲ್ಮಾನ್ ಖಾನ್ ಬೆದರಿಕೆ ಹಾಕಿರುವುದು ನಿಜವೇ?: ವಿಡಿಯೋದ ಅಸಲಿಯತ್ತು ಇಲ್ಲಿದೆ

ಅರ್ಪಿತಾ ಈಗ ಮಾರಾಟ ಮಾಡಿರುವ ಐಶಾರಾಮಿ ಮನೆಯನ್ನು ಸಲ್ಮಾನ್ ಖಾನ್ ಉಡುಗೊರೆ ನೀಡಿದ್ದರಂತೆ. ಅರ್ಪಿತಾ ಹಾಗೂ ಆಯುಷ್ ಮದುವೆಯಾಗುವುದಾಗಿ ನಿಶ್ಚಿತಾರ್ಥ ಮಾಡಿಕೊಂಡಾಗ ಸಲ್ಮಾನ್ ಖಾನ್ ಈ ಮನೆಯನ್ನು ಸಹೋದರಿಗೆ ಉಡುಗೊರೆಯಾಗಿ ನೀಡಿದ್ದರು. 2014 ರಲ್ಲಿ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಹಾಗೂ ನಟ ಆಯುಷ್ ವಿವಾಹವಾಗಿದ್ದರು. ಆಗಿನಿಂದಲೂ ಈ ಜೋಡಿ ಅದೇ ಮನೆಯಲ್ಲಿ ನೆಲೆಸಿತ್ತು. ಇಬ್ಬರಿಗೂ ಮುದ್ದಾದ ಮಗ ಹಾಗೂ ಮಗಳು ಇದ್ದಾರೆ.

ಅಂದಹಾಗೆ ಅರ್ಪಿತಾ ಸಲ್ಮಾನ್ ಖಾನ್​ರ ಸ್ವಂತ ಸಹೋದರಿ ಅಲ್ಲ. ಅರ್ಪಿತಾ ಅನಾಥ ಬಾಲಕಿ ಆಗಿದ್ದರು. ಅವರನ್ನು ಸಲ್ಮಾನ್ ಖಾನ್​ರ ತಂದೆ ಸಲೀಂ ಖಾನ್ ದತ್ತು ಪಡೆದಿದ್ದರು. ಸಲೀಂಖಾನ್​ಗೆ ಮೂವರು ಗಂಡು ಮಕ್ಕಳೇ ಇದ್ದ ಕಾರಣದಿಂದಾಗಿ ಅರ್ಪಿತಾರನ್ನು ದತ್ತು ಪಡೆಯಲಾಗಿತ್ತು. ಆಗಿನಿಂದಲೂ ಅರ್ಪಿತಾ ಸಲ್ಮಾನ್ ಖಾನ್ ಅವರ ಜೊತೆಗೆ ಬೆಳೆದಿದ್ದು, ಸಲ್ಮಾನ್ ಖಾನ್​ಗೆ ಅರ್ಪಿತಾ ಎಂದರೆ ವಿಪರೀತ ಪ್ರೀತಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ