AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಿಕಾ, ಆಲಿಯಾರನ್ನು ಹಿಂದಿಕ್ಕಿ ಭಾರತದ ನಂಬರ್ 1 ನಟಿಯಾದ ಶ್ರದ್ಧಾ ಕಪೂರ್

Shradha Kapoor: ಬಾಲಿವುಡ್​ನ ಈಗಿನ ಟಾಪ್ ನಟಿಯರು ಯಾರೆಂದರೆ ಎಲ್ಲರೂ ಹೇಳುವುದು ದೀಪಿಕಾ ಪಡುಕೋಣೆ, ಆಲಿಯಾ ಭಟ್ ಹೆಸರು. ಆದರೆ ಶ್ರದ್ಧಾ ಕಪೂರ್ ಇವರನ್ನು ಹಿಂದಿಕ್ಕಿ ಬಹಳ ಮುಂದೆ ಹೋಗಿದ್ದಾರೆ. ಭಾರತದ ನಂಬರ್ 1 ನಟಿ ಎನಿಸಿಕೊಂಡಿದ್ದಾರೆ ಶ್ರದ್ಧಾ ಕಪೂರ್.

ದೀಪಿಕಾ, ಆಲಿಯಾರನ್ನು ಹಿಂದಿಕ್ಕಿ ಭಾರತದ ನಂಬರ್ 1 ನಟಿಯಾದ ಶ್ರದ್ಧಾ ಕಪೂರ್
ಮಂಜುನಾಥ ಸಿ.
|

Updated on: Oct 19, 2024 | 3:10 PM

Share

ಬಾಲಿವುಡ್​ನ ಟಾಪ್ ನಟಿ ಯಾರು ಎಂಬ ಪ್ರಶ್ನೆಗೆ ದೀಪಿಕಾ-ಆಲಿಯಾ ಎಂಬ ಸಾಮಾನ್ಯ ಉತ್ತರ ಬರುತ್ತದೆ. ಆದರೆ ಅವರಿಗಿಂತಲೂ ಜನಪ್ರಿಯ ನಟಿಯಾಗಿ ಹೊರಹೊಮ್ಮಿದ್ದಾರೆ ನಟಿ ಶ್ರದ್ಧಾ ಕಪೂರ್. ಯಾವುದೇ ದೊಡ್ಡ ಹಿನ್ನೆಲೆ ಇಲ್ಲದೆ, ದೊಡ್ಡ ನಿರ್ಮಾಣ ಸಂಸ್ಥೆಗಳ ಬೆಂಬಲ ಇಲ್ಲದೆಯೂ ಕೇವಲ ತಮ್ಮ ಪ್ರತಿಭೆ ಹಾಗೂ ಸೌಂದರ್ಯದಿಂದ ಹಿಂದಿ ಸಿನಿಮಾ ಪ್ರೇಮಿಯ ಮನಸ್ಸು ಗೆಲ್ಲುತ್ತಾ ಬಂದಿರುವ ಶ್ರದ್ಧಾ ಕಪೂರ್ ಈಗ ಭಾರತದ ಅತ್ಯಂತ ಜನಪ್ರಿಯ ನಟಿ ಎನಿಸಿಕೊಂಡಿದ್ದಾರೆ. ಭಾರತದ ಯಾವುದೇ ನಟ ಅಥವಾ ನಟಿಯರಿಗೆ ಇಲ್ಲದಷ್ಟು ಫಾಲೋವರ್​ಗಳನ್ನು ಶ್ರದ್ಧಾ ಸಂಪಾದಿಸಿದ್ದಾರೆ.

ಸಾಮಾಜಿಕ ಜಾಲತಾಣದ ಈ ಕಾಲದಲ್ಲಿ ಯಾವುದೇ ವ್ಯಕ್ತಿಯ ಜನಪ್ರಿಯತೆಯನ್ನು ಫಾಲೋವರ್​ಗಳ ಮೂಲಕ ಅಳೆಯಲಾಗುತ್ತದೆ. ಭಾರತದಲ್ಲಿ ಅತಿ ಹೆಚ್ಚು ಫಾಲೋವರ್​ಗಳನ್ನು ಹೊಂದಿರುವ ನಟರಲ್ಲಿ ಶ್ರದ್ಧಾ ಕಪೂರ್ ಈಗ ಮೊದಲ ಸ್ಥಾನಕ್ಕೆ ಏರಿದ್ದಾರೆ. ಭಾರತದ ಯಾವುದೇ ನಟ ಅಥವಾ ನಟಿಯರಿಗೆ ಇಲ್ಲದಷ್ಟು ಇನ್​ಸ್ಟಾಗ್ರಾಂ ಫಾಲೋವರ್​ಗಳನ್ನು ಶ್ರದ್ಧಾ ಕಪೂರ್ ಪಡೆದುಕೊಂಡಿದ್ದಾರೆ. ಶ್ರದ್ಧಾ ಕಪೂರ್ ಅವರನ್ನು ಇನ್​ಸ್ಟಾಗ್ರಾಂನಲ್ಲಿ 9.36 ಕೋಟಿ ಜನ ಫಾಲೋ ಮಾಡುತ್ತಾರೆ. ಭಾರತದ ಇನ್ಯಾವುದೇ ನಟ ಅಥವಾ ನಟಿಯನ್ನು ಇಷ್ಟು ದೊಡ್ಡ ಸಂಖ್ಯೆಯ ಜನ ಫಾಲೋ ಮಾಡುವುದಿಲ್ಲ.

ಇದನ್ನೂ ಓದಿ:‘ಸ್ತ್ರೀ 2’ ಗೆಲುವಿನ ಬೆನ್ನಲ್ಲೆ ಸಂಭಾವನೆ ಹೆಚ್ಚಿಸಿಕೊಂಡ ಶ್ರದ್ಧಾ ಕಪೂರ್

ಅಂದಹಾಗೆ ನಟಿ ಶ್ರದ್ಧಾ ಕಪೂರ್ ಪ್ರಧಾನಿ ನರೇಂದ್ರ ಮೋದಿಯವರನ್ನು ಸಹ ಹಿಂದಿಕ್ಕಿದ್ದಾರೆ. ಶ್ರದ್ಧಾ ಬಿಟ್ಟರೆ ಎರಡನೇ ಸ್ಥಾನದಲ್ಲಿರುವ ನಟಿ ಪ್ರಿಯಾಂಕಾ ಚೋಪ್ರಾ, ಈಗ ಹಾಲಿವುಡ್​ನಲ್ಲಿ ನೆಲೆಸಿದ್ದರೂ ಸಹ ಭಾರತೀಯ ನಟಿಯೇ ಆಗಿರುವ ಕಾರಣ ಪ್ರಿಯಾಂಕಾರನ್ನು ಗಣನೆಗೆ ತೆಗೆದುಕೊಳ್ಳಬಹುದು. ಪ್ರಿಯಾಂಕಾರನ್ನು 9.20 ಕೋಟಿ ಜನ ಇನ್​ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಾರೆ. ಪ್ರಿಯಾಂಕಾರ ನಂತರದ ಸ್ಥಾನದಲ್ಲಿ ಆಲಿಯಾ ಭಟ್ ಇದ್ದಾರೆ. ಆಲಿಯಾರನ್ನು 8.52 ಕೋಟಿ ಜನ ಫಾಲೋ ಮಾಡುತ್ತಾರೆ. ನಾಲ್ಕನೇ ಸ್ಥಾನದಲ್ಲಿ ಕತ್ರಿನಾ ಕೈಫ್ ಮತ್ತು ಐದನೇ ಸ್ಥಾನದಲ್ಲಿ ದೀಪಿಕಾ ಪಡುಕೋಣೆ ಇದ್ದಾರೆ. ಇದು ಕೇವಲ ಮನೊರಂಜನಾ ಕ್ಷೇತ್ರದವರ ಪಟ್ಟಿ.

ಭಾರತದಲ್ಲಿ ಅತಿ ಹೆಚ್ಚು ಫಾಲೋವರ್​ಗಳನ್ನು ಹೊಂದಿರುವುದು ವಿರಾಟ್ ಕೊಹ್ಲಿ. ಅವರನ್ನು 27 ಕೋಟಿಗೂ ಹೆಚ್ಚು ಜನ ಫಾಲೋ ಮಾಡುತ್ತಾರೆ. ಎರಡನೇ ಸ್ಥಾನದಲ್ಲಿ ಶ್ರದ್ಧಾ ಕಪೂರ್ ಇದ್ದಾರೆ. ನಾಲ್ಕನೇ ಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಇದ್ದು, ಮೋದಿಯವನ್ನು 9.17 ಕೋಟಿ ಮಂದಿ ಇನ್​ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಾರೆ. ವಿರಾಟ್ ಕೊಹ್ಲಿ ಮತ್ತು ನರೇಂದ್ರ ಮೋದಿಯವರ ಹೊರತಾಗಿ ಟಾಪ್ 10 ರ ಪಟ್ಟಿಯಲ್ಲಿ ಇರುವುದೆಲ್ಲರೂ ಸಿನಿಮಾ ಕ್ಷೇತ್ರದವರೇ ಅದರಲ್ಲೂ ಕೇವಲ ನಟಿಯರು ಮಾತ್ರ. ಭಾರತದ ಯಾವೊಬ್ಬ ನಟರ ಹೆಸರು ಸಹ ಟಾಪ್ 10 ರಲ್ಲಿ ಇಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ