AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್ ಖಾನ್ ಹಾಗೂ ಲಾರೆನ್ಸ್ ಮುಖಾಮುಖಿ ಆದ ಆ ಕ್ಷಣ ನೆನಪಿದೆಯೇ?

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನಿಂದ ಸಲ್ಮಾನ್ ಖಾನ್ ಅಭಿಮಾನಿಗಳು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ಈ ಮೊದಲು ಸಲ್ಮಾನ್ ಖಾನ್ ಅವರು ಲಾರೆನ್ಸ್ ಎಂಬ ಅಭಿಮಾನಿಯನ್ನು ಭೇಟಿಯಾಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಸಲ್ಮಾನ್ ಖಾನ್ ಹಾಗೂ ಲಾರೆನ್ಸ್ ಮುಖಾಮುಖಿ ಆದ ಆ ಕ್ಷಣ ನೆನಪಿದೆಯೇ?
ಸಲ್ಮಾನ್ ಖಾನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 19, 2024 | 7:51 AM

Share

ನಟ ಸಲ್ಮಾನ್ ಖಾನ್ ಅವರ ಜೀವಕ್ಕೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಇದೆ. ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ಧಿಕಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ನಂತರ ಸಲ್ಮಾನ್ ಖಾನ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಬೆಳವಣಿಗೆಯಿಂದ ಸಲ್ಮಾನ್ ಖಾನ್ ಅಭಿಮಾನಿಗಳು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ಈ ಮೊದಲು ಸಲ್ಮಾನ್ ಖಾನ್ ಅವರು ಲಾರೆನ್ಸ್ ಎಂಬ ಅಭಿಮಾನಿಯನ್ನು ಭೇಟಿಯಾಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಹಾಸ್ಯನಟ ಕಪಿಲ್ ಶರ್ಮಾ ಅವರ ‘ದಿ ಕಪಿಲ್ ಶರ್ಮಾ ಶೋ’ನಲ್ಲಿ ಸಲ್ಮಾನ್ ಖಾನ್ ತೆರಳಿದ್ದರು. ಈ ವೇಳೆ ಲಾರೆನ್ಸ್ ಅವರನ್ನು ಸಲ್ಲು ಭೇಟಿಯಾದರು. ಕಾರ್ಯಕ್ರಮದಲ್ಲಿ ಕಪಿಲ್ ಶರ್ಮಾ ಪ್ರೇಕ್ಷಕರನ್ನು ಕೇಳಿದರು, ‘ಸಲ್ಮಾನ್ ಖಾನ್‌ಗೆ ಕೆಟ್ಟದ್ದನ್ನು ಮಾಡಿದ ಅಭಿಮಾನಿ ಯಾರಾದರೂ ಇದ್ದಾರೆಯೇ’ ಎಂದು ಕೇಳಿದರು. ಆಗ ಭಾಯಿಜಾನ್ ಅಭಿಮಾನಿಯೊಬ್ಬ ಎದ್ದು ತನ್ನನ್ನು ಲಾರೆನ್ಸ್ ಎಂದು ಪರಿಚಯಿಸಿಕೊಳ್ಳುತ್ತಾನೆ.

ಸಲ್ಮಾನ್ ಖಾನ್ ಅವರ ದೊಡ್ಡ ಅಭಿಮಾನಿ ಎಂದು ಲಾರೆನ್ಸ್ ಹೇಳಿಕೊಂಡಿದ್ದಾರೆ. ‘ಸಲ್ಮಾನ್ ಖಾನ್ ಅಭಿನಯದ ಮೈನೇ ಪ್ಯಾರ್ ಕಿಯಾ ಸಿನಿಮಾ ನೋಡಿದ ದಿನದಿಂದ ಇಂದಿನವರೆಗೂ ನಾನು ನಿಮ್ಮ ಅಭಿಮಾನಿ. ನಿಮಗೆ ನನ್ನಲ್ಲಿ ವಿಶೇಷ ಸ್ಥಾನವಿದೆ’ ಎಂದು ಲಾರೆನ್ಸ್ ಹೇಳುತ್ತಾರೆ. ‘ಕೆಲಸ ಸಿಕ್ಕ ನಂತರ, ನನ್ನ ಮೊದಲ ಸಂಬಳದಿಂದ ಸಲ್ಮಾನ್ ಖಾನ್ ಅವರ ಕಡಗದ ರೀತಿಯ ಕಡಗವನ್ನು ಖರೀದಿ ಮಾಡಿದ್ದೆ’ ಎಂದೂ ಈ ಅಭಿಮಾನಿ ಹೇಳಿದ್ದಾರೆ.

ಸಲ್ಮಾನ್ ಖಾನ್ ಅವರ ‘ಕಪಿಲ್ ಶರ್ಮಾ ಶೋ’ ವೀಡಿಯೋಗಳು ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಾ ಇರುತ್ತವೆ.  ಅದರಲ್ಲಿ ಈ ವಿಡಿಯೋ ಕೂಡ ಒಂದು. ಈ ವಿಡಿಯೋಗೆ ಫ್ಯಾನ್ಸ್ ಹಲವು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ‘ಒಂದೆಡೆ ಸಲ್ಮಾನ್ ಅಭಿಮಾನಿಯ ಹೆಸರೂ ಲಾರೆನ್ಸ್. ಮತ್ತೊಂದೆಡೆ ಸಲ್ಮಾನ್ ಖಾನ್ ಶತ್ರುವಿನ ಹೆಸರೂ ಲಾರೆನ್ಸ್’ ಎಂದು ಕೆಲವರು ಹೇಳಿದ್ದಾರೆ. ಸಲ್ಮಾನ್ ಖಾನ್ಗೆ ಲಾರೆನ್ಸ್ ಹಲವು ಬಾರಿ ಕೊಲೆ ಬೆದರಿಕೆ ಹಾಕಿದ್ದ. ಸಲ್ಮಾನ್ ಖಾನ್ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಮತ್ತೆ ಬೆದರಿಕೆ ಹಾಕಿದೆ.

ಇದನ್ನೂ ಓದಿ: ಮತ್ತೊಂದು ಬುಲೆಟ್ ಪ್ರೂಫ್ ಕಾರು ಖರೀದಿಸಿದ ಸಲ್ಮಾನ್ ಖಾನ್: ಬೆಲೆ ಎಷ್ಟು ಕೋಟಿ?

ಬಿಷ್ಣೋಯ್ ಗ್ಯಾಂಗ್ ದ್ವೇಷವನ್ನು ಕೊನೆಗೊಳಿಸಲು ಸಲ್ಮಾನ್ ಖಾನ್‌ 5 ಕೋಟಿ ರೂಪಾಯಿ ಕೊಡಬೇಕು ಎಂದು ಹೇಳಿದೆ. ಈ ಬೆದರಿಕೆ ಹಾಕಿದವನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಎಂದು ಹೇಳಲಾಗಿದೆ. ‘ಹಣ ನೀಡದಿದ್ದರೆ ಸಲ್ಮಾನ್ ಖಾನ್ ಭವಿಷ್ಯ ಮಾಜಿ ಶಾಸಕ ಬಾಬಾ ಸಿದ್ದಿಕಿಗಿಂತ ಕೆಟ್ಟದಾಗಿರುತ್ತದೆ’ ಎಂದು ಹೇಳಲಾಗಿದೆ. ನಟನಿಗೆ ಇಂತಹ ಬೆದರಿಕೆ ಬಂದಿದೆ. ಸದ್ಯ ಸಲ್ಮಾನ್ ಖಾನ್ಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಗೆ ಎಚ್ಚರಿಕೆ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.