AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಶ್ವರ್ಯಾ, ದೀಪಿಕಾ ಯಾರೂ ಅಲ್ಲ; ಭಾರತದ ಶ್ರೀಮಂತ ನಟಿ ಇವರೇ ನೋಡಿ

Richest actress: ಬಾಲಿವುಡ್​ನ ಶ್ರೀಮಂತ ನಟಿ ಯಾರು ಗೊತ್ತೆ? ಈಗಿನ ನಟಿಯರಾದ ದೀಪಿಕಾ ಪಡುಕೋಣೆ, ಆಲಿಯಾ ಭಟ್, ಐಶ್ವರ್ಯಾ ರೈ ಹೆಸರುಗಳು ನಿಮ್ಮ ಮನದಲ್ಲಿ ಮೂಡಬಹುದು ಆದರೆ ಇವರ್ಯಾರೂ ಅಲ್ಲ. ಅಂದಹಾಗೆ ಈ ನಟಿ ಕನ್ನಡದ ಆರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಐಶ್ವರ್ಯಾ, ದೀಪಿಕಾ ಯಾರೂ ಅಲ್ಲ; ಭಾರತದ ಶ್ರೀಮಂತ ನಟಿ ಇವರೇ ನೋಡಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 18, 2024 | 6:46 PM

Share

ಭಾರತದ ಟಾಪ್ 10 ಶ್ರೀಮಂತ ನಟಿಯರ ಪಟ್ಟಿ ಹೊರಬಿದ್ದಿದೆ. ನಟಿ ಆಲಿಯಾ ಭಟ್‌ನಿಂದ ಹಿಡಿದು ನಟಿ ದೀಪಿಕಾ ಪಡುಕೋಣೆವರೆಗೆ ಈ ಪಟ್ಟಿಯಲ್ಲಿ ಹೆಸರುಗಳಿವೆ. 90ರ ದಶಕದ ನಟಿಯೊಬ್ಬರು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ನಂಬರ್ ಒನ್ ಆಗಿರುವ ನಟಿ ಈಗ ಬಾಲಿವುಡ್ನಲ್ಲಿ ಸಕ್ರಿಯವಾಗಿಲ್ಲದಿದ್ದರೂ, ಶ್ರೀಮಂತ ನಟಿ ಎನಿಸಿಕೊಂಡಿದ್ದಾರೆ. ಹಾಗಾಗಿ ಎರಡನೇ ಸ್ಥಾನದಲ್ಲಿ ನಟಿ ಐಶ್ವರ್ಯ ರೈ ಇದ್ದಾರೆ. ಮೊದಲ ಸ್ಥಾನದಲ್ಲಿ ಇರೋದು ಬೇರೆ ಯಾರೂ ಅಲ್ಲ ನಟಿ ಜೂಹಿ ಚಾವ್ಲಾ.

ನಟಿ ಜೂಹಿ ಚಾವ್ಲಾ ಈ ಮೊದಲು ಚಿತ್ರರಂಗದಲ್ಲಿ ನಾಯಕಿ ಆಗಿ ಮಿಂಚಿದವರು. ಜೂಹಿ ಚಾವ್ಲಾ ಭಾರತದ ಅತ್ಯಂತ ಶ್ರೀಮಂತ ನಟಿ. ಸಂಸ್ಥೆಯೊಂದು ಭಾರತದ 10 ಶ್ರೀಮಂತ ನಟಿಯರ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಜೂಹಿ ಚಾವ್ಲಾ ಮೊದಲ ಸ್ಥಾನದಲ್ಲಿದ್ದಾರೆ.

ಕಳೆದ ಹಲವು ವರ್ಷಗಳಿಂದ ಜೂಹಿ ಬಾಲಿವುಡ್‌ಗೆ ಯಾವುದೇ ಹಿಟ್ ಚಿತ್ರವನ್ನು ನೀಡದಿದ್ದರೂ, ನಟಿ ಹಣ ಗಳಿಸುತ್ತಾ ಇದ್ದಾರೆ. ಇದಕ್ಕೆ ಕಾರಣ ಆಗಿರೋದು ಅವರು ನಾನಾ ಕಡೆಗಳಲ್ಲಿ ಹೂಡಿಕೆ ಮಾಡಿರೋದು. ಜೂಹಿ ಚಾವ್ಲಾ ಅವರ ಅವರ ನಿವ್ವಳ ಆಸ್ತಿ ಮೌಲ್ಯ 4,600 ಕೋಟಿ ರೂಪಾಯಿ. ಜೂಹಿ ಕಳೆದ 10 ವರ್ಷಗಳಿಂದ ನಟನೆಯಿಂದ ದೂರ ಉಳಿದಿದ್ದರು. ಜೂಹಿ ಚಾವ್ಲಾ ಶಾರುಖ್ ಖಾನ್ ಅವರ ರೆಡ್ ಚಿಲ್ಲಿಸ್ ಮತ್ತು ಐಪಿಎಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್‌ನಿಂದ ಭಾರಿ ಹಣವನ್ನು ಗಳಿಸಿದ್ದಾರೆ. ಇದಲ್ಲದೆ, ನಟಿ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಹೂಡಿಕೆ ಮಾಡುತ್ತಾರೆ.

ಇದನ್ನೂ ಓದಿ:ಭಾರತದ ಮೂರನೇ ಶ್ರೀಮಂತ ನಟ ನಾಗಾರ್ಜುನ; ನಟನ ಆಸ್ತಿ ವಿವರ

ಈ ಸಂಸ್ಥೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಐಶ್ವರ್ಯಾ ಎರಡನೇ ಸ್ಥಾನದಲ್ಲಿದ್ದಾರೆ. ಜೂಹಿ ಚಾವ್ಲಾ ಅವರಂತೆ ಐಶ್ವರ್ಯಾ ಕೂಡ ಬಾಲಿವುಡ್‌ನಲ್ಲಿ ಸಕ್ರಿಯವಾಗಿಲ್ಲ. ವರದಿಯ ಪ್ರಕಾರ ಐಶ್ವರ್ಯಾ ರೈ ಅವರ ಆಸ್ತಿ 850 ಕೋಟಿ ರೂಪಾಯಿ. ನಟನಾ ಕ್ಷೇತ್ರದಲ್ಲಿ ಸಕ್ರಿಯವಾಗಿಲ್ಲದಿದ್ದರೂ, ಐಶ್ವರ್ಯಾ ಹಣ ಸಂಪಾದಿಸುತ್ತಾರೆ.

ನಟಿ ಪ್ರಿಯಾಂಕಾ ಚೋಪ್ರಾ ಮೂರನೇ ಸ್ಥಾನದಲ್ಲಿದ್ದಾರೆ. ಪ್ರಿಯಾಂಕಾ ಚೋಪ್ರಾ ತಮ್ಮ ಬ್ರ್ಯಾಂಡ್, ನಿರ್ಮಾಣ ಸಂಸ್ಥೆ ಮತ್ತು ಹಾಲಿವುಡ್ ಚಲನಚಿತ್ರಗಳಿಂದ ಗಳಿಸುತ್ತಾರೆ. ನಟಿಯ ಒಟ್ಟು ಸಂಪತ್ತು 650 ಕೋಟಿ ರೂಪಾಯಿ. ಆಲಿಯಾ ಭಟ್ ಹಾಗೂ ದೀಪಿಕಾ ಪಡುಕೋಣೆ ಕೂಡ ಟಾಪ್ 5ರಲ್ಲಿ ಸ್ಥಾನ ಪಡೆದಿದ್ದಾರೆ. ಆಲಿಯಾ ಮತ್ತು ದೀಪಿಕಾ ಬಾಲಿವುಡ್‌ನ ಟಾಪ್ ನಟಿಯರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ