ಭಾರತದ ಮೂರನೇ ಶ್ರೀಮಂತ ನಟ ನಾಗಾರ್ಜುನ; ನಟನ ಆಸ್ತಿ ವಿವರ
Akkineni Nagarjuna Birthday: ನಾಗಾರ್ಜುನ ಅವರು ಹೈದರಾಬಾದ್ನಲ್ಲಿ ವಿವಿಧ ಪ್ರಾಪರ್ಟಿ ಹೊಂದಿದ್ದಾರೆ. ಜುಬ್ಲಿ ಹಿಲ್ಸ್ನಲ್ಲಿರುವ ಅವರ ಮನೆ ಇದ್ದು, ಅದರ ಬೆಲೆ 50 ಕೋಟಿ ರೂಪಾಯಿ ಎನ್ನಲಾಗಿದೆ. ಅವರ ಫಿಲ್ಮ್ ಸ್ಟುಡಿಯೋ 200 ಕೋಟಿ ರೂಪಾಯಿ ಮೌಲ್ಯ ಹೊಂದಿದೆ. ಅವರು ಹೈದರಾಬಾದ್ನಲ್ಲಿ ಕಲ್ಯಾಣಮಂಟಪವನ್ನುಹೊಂದಿದ್ದರು.
ಅಕ್ಕಿನೇನಿ ನಾಗಾರ್ಜುನ ಅವರಿಗೆ ಇಂದು (ಆಗಸ್ಟ್ 29) ಬರ್ತ್ಡೇ. ಅವರಿಗೆ ಈಗ 65 ವರ್ಷ. ಈ ವಯಸ್ಸಿನಲ್ಲೂ ಸಖತ್ ಫಿಟ್ ಆಗಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಅವರ ನೆಟ್ವರ್ತ್ 3,100 ಕೋಟಿ ರೂಪಾಯಿ ಎಂಬ ವಿಚಾರ ನಿಮಗೆ ಗೊತ್ತೇ? ಅವರು ಭಾರತದ ಶ್ರೀಮಂತ ನಟರಲ್ಲಿ ಮೂರನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರು ಹಲವು ರಿಯಲ್ ಎಸ್ಟೇಟ್ ಜಮೀನುಗಳನ್ನು ಹೊಂದಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
1986ರಲ್ಲಿ ರಿಲೀಸ್ ಆದ ‘ವಿಕ್ರಮ್’ ಚಿತ್ರದ ಮೂಲಕ ನಾಗಾರ್ಜುನ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಅವರು ಹಿಂದಿರುಗಿ ನೋಡಲೇ ಇಲ್ಲ. ಸಿನಿಮಾಗೆ ಕೋಟಿ ಕೋಟಿ ರೂಪಾಯಿ ಸಂಪಾದಿಸೋ ಅವರು 3,100 ಕೋಟಿ ರೂಪಾಯಿ ಆಸ್ತಿ ಮಾಡಿದ್ದಾರೆ. ಅವರು ಹಲವು ಆದಾಯ ಮೂಲಗಳನ್ನು ಕೂಡ ಹೊಂದಿದ್ದಾರೆ. ಅವರು ನಿರ್ಮಾಪಕ ಕೂಡ ಹೌದು. ಅವರು ಬಿಗ್ ಬಾಸ್ ಕೂಡ ನಡೆಸಿಕೊಟ್ಟಿದ್ದಾರೆ.
‘ಅನ್ನಪೂರ್ಣ ಸ್ಟುಡಿಯೋ’ನ ಅಕ್ಕಿನೇನಿ ಹೊಂದಿದ್ದಾರೆ. ಹೈದರಾಬಾದ್ನ ಹೈ ಟೆಕ್ ಸಿಟಿಯಲ್ಲಿ ಕನ್ವೆಂಷನ್ ಸೆಂಟರ್ ಹೊಂದಿದ್ದರು. ಅನ್ನಪೂರ್ಣ ಇಂಟರ್ನ್ಯಾಷನಲ್ ಸ್ಕೂಲ್ ಹೊಂದಿದ್ದಾರೆ. ಇದು ಎನ್ಜಿಒ. ಇದರಲ್ಲಿ ಸಿನಿಮಾ ಬಗ್ಗೆ ಶಿಕ್ಷಣ ನೀಡಲಾಗುತ್ತದೆ. ಇದರಿಂದ ಅವರು ಲಾಭ ನಿರೀಕ್ಷಿಸಿಲ್ಲ.
ನಾಗಾರ್ಜುನ ಅವರು ಹೈದರಾಬಾದ್ನಲ್ಲಿ ವಿವಿಧ ಪ್ರಾಪರ್ಟಿ ಹೊಂದಿದ್ದಾರೆ. ಜುಬ್ಲಿ ಹಿಲ್ಸ್ನಲ್ಲಿರುವ ಅವರ ಮನೆ ಇದ್ದು, ಅದರ ಬೆಲೆ 50 ಕೋಟಿ ರೂಪಾಯಿ ಎನ್ನಲಾಗಿದೆ. ಅವರ ಫಿಲ್ಮ್ ಸ್ಟುಡಿಯೋ 200 ಕೋಟಿ ರೂಪಾಯಿ ಮೌಲ್ಯ ಹೊಂದಿದೆ. ನಾಗಾರ್ಜುನ ಅವರು ಲಕ್ಷುರಿ ಕಾರುಗಳ ಕಲೆಕ್ಷನ್ ಹೊಂದಿದೆ. ಅವರ ಬಳಿ ಬಿಎಂಡಬ್ಲ್ಯೂ 7 ಸೀರಿಸ್ (1.5 ಕೋಟಿ ರೂಪಾಯಿ), ಆಡಿ ಎ7 (90.5 ಲಕ್ಷ ರೂಪಾಯಿ), ‘ಬಿಎಂಡಬ್ಲ್ಯೂ ಎಂ6 (1.76) ಮೊದಲಾದ ಕಾರುಗಳನ್ನು ಹೊಂದಿದ್ದಾರೆ.
ಅಕ್ಕಿನೇನಿ ನಾಗಾರ್ಜುನ ಅವರು ಶ್ರೀಮಂತ ನಟರಲ್ಲಿ ಮೂರನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಮೊದಲ ಸ್ಥಾನದಲ್ಲಿ ಶಾರುಖ್ ಖಾನ್ (6000 ಕೋಟಿ ರೂಪಾಯಿ) ಇದ್ದಾರೆ. ಮೂರನೇ ಸ್ಥಾನದಲ್ಲಿ ಅಕ್ಕಿನೇನಿ ನಾಗಾರ್ಜುನ ಇದ್ದಾರೆ. ಅವರು ಪ್ರತಿ ಚಿತ್ರಕ್ಕೆ 20-30 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ನಾಗಾರ್ಜುನ ಅವರು ಬಿಗ್ ಬಾಸ್ನ ನಡೆಸಿಕೊಡುತ್ತಿದ್ದಾರೆ. ಇದರಿಂದಲೂ ಅವರಿಗೆ ಹಣ ಬರುತ್ತಿದೆ.
ಇದನ್ನೂ ಓದಿ: ನಾಗಾರ್ಜುನಗೆ ಸೇರಿದ ಕನ್ವೆಂಷನ್ ಹಾಲ್ ಧ್ವಂಸ; ನಟ ಹೇಳೋದೇನು?
ನಾಗಾರ್ಜುನ್ ಅವರಿಗೆ ಕ್ರೀಡೆ ಬಗ್ಗೆಯೂ ಆಸಕ್ತಿ ಇದೆ. ಅವರು ಇಂಡಿಯನ್ ಬ್ಯಾಡ್ಮಿಮಟನ್ ಲೀಗ್ನಲ್ಲಿ ‘ಮುಂಬೈ ಮಾಸ್ಟರ್ಸ್’ ತಂಡ ಹೊಂದಿದ್ದಾರೆ. ಎಐಎಂ ಸೂಪರ್ಸ್ಪೋರ್ಟ್ ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ಮಾಹಿ ರೇಸ್ ಟೀಂ ಹೊಂದಿದ್ದಾರೆ. ಇಂಡಿಯನ್ ಸೂಪರ್ ಲೀಗ್ನಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ಹೊಂದಿದ್ದಾರೆ.
ಅಕ್ಕಿನೇನಿ ನಾಗಾರ್ಜುನ ಕೊನೆಯದಾಗಿ ಕಾಣಿಸಿಕೊಂಡಿದ್ದು ಈ ವರ್ಷ ರಿಲೀಸ್ ಆದ ‘ನಾ ಸಾಮಿ ರಂಗ’ ಸಿನಿಮಾದಲ್ಲಿ. ‘ಕುಬೇರ’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:44 am, Thu, 29 August 24