AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಲಸಮಗೊಂಡ ನಾಗಾರ್ಜುನ ಕನ್ವೆನ್ಷನ್ ಹಾಲ್​ನ ಒಂದು ದಿನದ ಬಾಡಿಗೆ ಎಷ್ಟಿತ್ತು ಗೊತ್ತಾ?

ಅಕ್ಕಿನೇನಿ ನಾಗಾರ್ಜುನ ಅವರಿಗೆ ಇಂದು (ಆಗಸ್ಟ್​ 29) ಬರ್ತ್​ಡೇ. ಅವರಿಗೆ ಈಗ 65 ವರ್ಷ. ಈ ವಯಸ್ಸಿನಲ್ಲೂ ಸಖತ್ ಫಿಟ್ ಆಗಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಅವರ ನೆಟ್​ವರ್ತ್​ 3,100 ಕೋಟಿ ರೂಪಾಯಿ ಇದೆ. ಅವರು ಹೈದರಾಬಾದ್​ನಲ್ಲಿ ಎನ್.ಕನ್ವೆನ್ಷನ್ ​ಹಾಲ್ ಇದೆ.

ನೆಲಸಮಗೊಂಡ ನಾಗಾರ್ಜುನ ಕನ್ವೆನ್ಷನ್ ಹಾಲ್​ನ ಒಂದು ದಿನದ ಬಾಡಿಗೆ ಎಷ್ಟಿತ್ತು ಗೊತ್ತಾ?
ನಾಗಾರ್ಜುನ
 ಶ್ರೀಲಕ್ಷ್ಮೀ ಎಚ್
| Edited By: |

Updated on: Aug 29, 2024 | 8:37 AM

Share

ಟಾಲಿವುಡ್ ಹೀರೋ ನಾಗಾರ್ಜುನ ಒಡೆತನದ ಎನ್. ಕನ್ವೆನ್ಷನ್ ಹಾಲ್​ನ ನೆಲಸಮ ಮಾಡಿದ್ದಾರೆ. ದಾಖಲೆಗಳನ್ನು ನೀಡಿ ಅವರು ಕೋರ್ಟ್​ನಿಂದ ಮಧ್ಯಂತರ ಆದೇಶ ತೆಗೆದುಕೊಂಡು ಬಂದಿದ್ದರು. ಆದಾಗ್ಯೂ ಈ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಈ ಬಗ್ಗೆ ಅವರು ಸಿಟ್ಟಾಗಿದ್ದಾರೆ. ತಮ್ಮ ತಪ್ಪಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಕಟ್ಟಡ ನೆಲಕಚ್ಚುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರ ಬಾಡಿಗೆ ಬಗ್ಗೆ ಇಲ್ಲಿದೆ ಮಾಹಿತಿ.

ಎನ್.ಕನ್ವೆನ್ಷನ್ ​ಹಾಲ್ ಇರೋದು ಹೈದರಾಬಾದ್​ನ ಮಾದಾಪುರದ ತಿಮ್ಮಿಡಕುಂಟ ಕೆರೆ ಸಮೀಪ. ಇದು ನಗರದ ಅತ್ಯಂತ ದುಬಾರಿ ಪ್ರದೇಶಗಳಲ್ಲಿ ಒಂದು. ಮದುವೆ, ಹುಟ್ಟುಹಬ್ಬದ ಪಾರ್ಟಿ, ಗೆಟ್ ಟುಗೆದರ್ ಕಾರ್ಯಕ್ರಮಗಳಿಗೆ ಇದನ್ನು ಬುಕ್ ಮಾಡಲಾಗುತ್ತಿತ್ತು. ಈಗ ಕೆರೆ ಒತ್ತುವರಿ ಆರೋಪದ ಅಡಿಯಲ್ಲಿ ಇದನ್ನು ಒಡೆದು ಹಾಕಲಾಗಿದೆ. ಇದು ನಾಗಾರ್ಜುನ ಅವರಿಗೆ ಶಾಕಿಂಗ್ ಎನಿಸಿದೆ.

ಎನ್. ಕನ್ವೆನ್ಷನ್​ನಲ್ಲಿ ಸಮಾರಂಭ ಮಾಡಿದರೆ ಬಾಡಿಗೆ ಎಷ್ಟು ಎಂದು ಅನೇಕರು ಕೇಳಿದ್ದಾರೆ. ನಗರದ ಅನೇಕ ಉದ್ಯಮಿಗಳು, ಚಿತ್ರರಂಗದ ಗಣ್ಯರು ಮತ್ತು ರಾಜಕಾರಣಿಗಳು ಇಲ್ಲಿ ಸಮಾರಂಭ ಮಾಡಲು ಇಚ್ಛೆ ತೋರಿಸುತ್ತಿದ್ದರು. ಹಾಲ್​ನ ಪಕ್ಕದಲ್ಲಿ ಇರುವ ಸುಂದರ ಕೆರೆ ಎಲ್ಲರನ್ನು ಆಕರ್ಷಿಸುತ್ತಿತ್ತು. ಇದು ನಗರದ ಹೃದಯದ ಭಾಗದಲ್ಲಿ ಇರುವುದರಿಂದ ಆಗಮಿಸೋ ಅತಿಥಿಗಳಿಗೆ ಸುಲಭ ಆಗುತ್ತಿತ್ತು. ನಗರದ ಯಾವುದೇ ಫಂಕ್ಷನ್ ಹಾಲ್​ನಲ್ಲಿ ಕಾಣದ ನಿಸರ್ಗ ಸೊಬಗು ಇಲ್ಲಿ ಕಾಣುತ್ತಿತ್ತು ಅನ್ನೋದು ವಿಶೇಷ.

ಮೂರು ಸಾವಿರಕ್ಕೂ ಹೆಚ್ಚು ಮಂದಿ ಇಲ್ಲಿ ಕುಳಿತು ಸಮಾರಂಭ ನೋಡಬಹುದಿತ್ತು ಬರೋಬ್ಬರಿ 27 ಸಾವಿರ ಚದರ ಅಡಿ ವಿಸ್ತೀರ್ಣದದಲ್ಲಿ ಈ ಹಾಲ್​ನ ಆವರಣ ಇದೆ. ಕೆಲವೊಮ್ಮೆ ಇಲ್ಲಿ ಸಿನಿಮಾದ ಕಾರ್ಯಕ್ರಮಗಳೂ ನಡೆದಿದ್ದು ಇದೆ. ಬೃಹತ್ ಫಂಕ್ಷನ್ ಹಾಲ್ ಜೊತೆಗೆ ಬರ್ತ್ ಡೇ ಆಚರಣೆಗೆ ಮಿನಿ ಫಂಕ್ಷನ್ ಹಾಲ್​ಗಳೂ ಇಲ್ಲಿ ಇವೆ. ಇದರ ಕನಿಷ್ಠ ಬಾಡಿಗೆ ರೂ.5 ಲಕ್ಷದಿಂದ ಆರಂಭವಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಭಾರತದ ಮೂರನೇ ಶ್ರೀಮಂತ ನಟ ನಾಗಾರ್ಜುನ; ನಟನ ಆಸ್ತಿ ವಿವರ

ಇಲ್ಲಿನ ಹಾಲ್​ಗೆ ಗಂಟೆಗೆ ದರ ವಿಧಿಸುತ್ತಾರೆ ಎಂಬ ಮಾತೂ ಇದೆ. ಹೈದರಾಬಾದ್​ನಲ್ಲಿ ಅನೇಕ ಫಂಕ್ಷನ್ ಹಾಲ್ ಇದ್ದರೂ ಎನ್. ಕನ್ವೆನ್ಷನ್ ಹಾಲ್ ಹೆಚ್ಚು ಗಮನ ಸೆಳೆಯುತ್ತದೆ. ಇಲ್ಲಿನ ದರ ತುಸು ಹೆಚ್ಚಾದರೂ ಹಿತಕರ ವಾತಾವರಣದಲ್ಲಿ ನಿಸರ್ಗದ ಸೊಬಗನ್ನು ಸವಿದು ಅತಿಥಿಗಳು ವಿಶೇಷ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಈಗ ಈ ಕಟ್ಟಡವೇ ಇಲ್ಲದಂತೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.