Fact Check: ಲಾರೆನ್ಸ್ ಬಿಷ್ಣೋಯಿಗೆ ಸಲ್ಮಾನ್ ಖಾನ್ ಬೆದರಿಕೆ ಹಾಕಿರುವುದು ನಿಜವೇ?: ವಿಡಿಯೋದ ಅಸಲಿಯತ್ತು ಇಲ್ಲಿದೆ
ಹೀಗಾಗಿ ಸಲ್ಮಾನ್ ಖಾನ್ ಅವರ ಈ ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ಟಿವಿ9 ಕನ್ನಡ ತನಿಖೆಯಿಂದ ತಿಳಿದುಬಂದಿದೆ. ಮೂಲ ವಿಡಿಯೋದ ಆಡಿಯೋವನ್ನು ಬದಲಾಯಿಸಲಾಗಿದೆ. ಮೂಲ ವೀಡಿಯೊ 2021 ರದ್ದು. ಸಲ್ಮಾನ್ ಖಾನ್ ತನ್ನ ಸಹೋದರ ಅರ್ಬಾಜ್ ಖಾನ್ ಅವರೊಂದಿಗೆ ಸಂದರ್ಶನವನ್ನು ಮಾಡಿದ ವಿಡಿಯೋ ಇದಾಗಿದೆ.
ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಕಳೆದ ವಾರ ಅಕ್ಟೋಬರ್ 12 ರಂದು ಮುಂಬೈನಲ್ಲಿರುವ ಅವರ ಮಗನ ಕಚೇರಿಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದು, ಬಾಬಾ ಸಿದ್ದಿಕಿ ಮತ್ತು ಸಲ್ಮಾನ್ ಖಾನ್ ನಡುವಿನ ಸ್ನೇಹವೇ ಕೊಲೆಗೆ ಕಾರಣ ಎಂದು ಹೇಳಲಾಗಿದೆ. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗುತ್ತಿದೆ, ಇದರಲ್ಲಿ ಸಲ್ಮಾನ್ ಖಾನ್ ಅವರು ಲಾರೆನ್ಸ್ ಬಿಷ್ಣೋಯ್‌ಗೆ ಬೆದರಿಕೆ ಹಾಕುತ್ತಿರುವುದನ್ನು ಕಾಣಬಹುದು.
ವೈರಲ್ ಪೋಸ್ಟ್ನಲ್ಲಿ ಏನಿದೆ?:
ಫೇಸ್‌ಬುಕ್ ಬಳಕೆದಾರ ಸೈಯದ್ ಕದಿರ್ ಎಂಬವರು ಈ ವಿಡಿಯೋವನ್ನು ಅಕ್ಟೋಬರ್ 17 ರಂದು ಹಂಚಿಕೊಂಡಿದ್ದಾರೆ. “ಲಾರೆನ್ಸ್ ಬಿಷ್ಣೋಯ್ ಅವರನ್ನು ನಾಯಿಯಾಗಿ ಮಾಡದಿದ್ದರೆ, ನನ್ನ ಹೆಸರು ಸಲ್ಮಾನ್ ಖಾನ್ ಅಲ್ಲ” ಎಂದು ಬರೆಯಲಾಗಿದೆ, “ವಿಷ್ಣೋಯ್‌ಗೆ ಸಲ್ಮಾನ್ ಖಾನ್ ಓಪನ್ ಚಾಲೆಂಜ್ ನೀಡಿದರು…” ಎಂದು ಬರೆದುಕೊಂಡಿದ್ದಾರೆ.
ವೀಡಿಯೊದಲ್ಲಿ, ಸಲ್ಮಾನ್ ಖಾನ್, “ಲಾರೆನ್ಸ್ ಬಿಷ್ಣೋಯ್, ನೀವು ಮಗನನ್ನು ಅವರ ತಂದೆಯಿಂದ ಬೇರ್ಪಡಿಸುವ ಮೂಲಕ ದೊಡ್ಡ ತಪ್ಪು ಮಾಡಿದ್ದೀರಿ. ಬಿಷ್ಣೋಯ್ ಮಗನೇ, ಇದು ಶೀಘ್ರದಲ್ಲೇ ಇತ್ಯರ್ಥವಾಗಲಿದೆ. ನಾನು ದೇವರ ಮೇಲೆ ಪ್ರಮಾಣ ಮಾಡುತ್ತೇನೆ, ನಾನು ನಿನ್ನನ್ನು ನಾಯಿಯನ್ನಾಗಿ ಮಾಡದಿದ್ದರೆ ನನ್ನ ಹೆಸರು ಸಲ್ಮಾನ್ ಖಾನ್ ಅಲ್ಲ.’’ ಎಂದು ವಿಡಿಯೋದಲ್ಲಿ ಹೇಳಿರುವುದು ಇದೆ.
Fact Check:
ಈ ವೈರಲ್ ವೀಡಿಯೊವನ್ನು ನಾವು ಎಚ್ಚರಿಕೆಯಿಂದ ವೀಕ್ಷಿಸಿದ್ದೇವೆ. ವಿಡಿಯೋ ಮತ್ತು ಆಡಿಯೋಗಳು ಲಿಪ್ಸಿಂಕ್ ಹೊಂದಿಲ್ಲ. ಅಲ್ಲದೆ, ಆಡಿಯೋದಲ್ಲಿ ಲಿಂಗ ಉಚ್ಚಾರಣೆ ತಪ್ಪಾಗಿದೆ ಮತ್ತು ಕೃತಕವಾಗಿ ಕಾಣುತ್ತದೆ. ಈ ವಿಡಿಯೋದ ಆಡಿಯೋವನ್ನು ಎಡಿಟ್ ಮಾಡಲಾಗಿದೆ ಎಂಬ ಅನುಮಾನ ಮೂಡಿಬಂತು.
ಪರಿಶೀಲನೆಗಾಗಿ ನಾವು ಈ ವೀಡಿಯೊವನ್ನು AI ಧ್ವನಿ ಪತ್ತೆ ಸಾಫ್ಟ್ಫೇರ್ ಬಳಸಿಕೊಂಡು ಆಡಿಯೋ ಪರೀಕ್ಷಿಸಿದ್ದೇವೆ. ಆಗ ಇದು AI ರಚಿತದ ಆಡಿಯೋ ಎಂಬುದು ತಿಳಿದಿದೆ. ನಾವು ಒರಿಜಿನಲ್ ವಿಡಿಯೋವನ್ನು ಕೂಡ ಕಂಡುಕೊಂಡಿದ್ದೇವೆ. ಗೂಗಲ್ ಲೆನ್ಸ್‌ನಲ್ಲಿ ಈ ವಿಡಿಯೋದ ಪ್ರಮುಖ ಫ್ರೇಮ್‌ಗಳನ್ನು ಹುಡುಕಿದ್ದೇವೆ. ಆಗ ಜುಲೈ 21, 2021 ರಂದು ಯೂಟ್ಯೂಬ್ ಚಾನೆಲ್ Qu Play ನಲ್ಲಿ ಈ ಪೂರ್ಣ ವಿಡಿಯೋವನ್ನು ಪ್ರಕಟಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.
“ಅರ್ಬಾಜ್ ಖಾನ್ ಅವರಿಂದ ಕ್ವಿಕ್ ಹೀಲ್ ಪಿಂಚ್” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಅಪ್ಲೋಡ್ ಆಗಿದೆ. ನಾವು ಈ ಸಂಪೂರ್ಣ 23 ನಿಮಿಷಗಳ ವೀಡಿಯೊವನ್ನು ಎಚ್ಚರಿಕೆಯಿಂದ ವೀಕ್ಷಿಸಿದ್ದೇವೆ. ವಿಡಿಯೋದಲ್ಲಿ ಎಲ್ಲಿಯೂ ಸಲ್ಮಾನ್ ಖಾನ್ ಅವರು ಲಾರೆನ್ಸ್ ಬಿಷ್ಣೋಯ್ ಅವರ ಉಲ್ಲೇಖಿಸಿಲ್ಲ.
ಹೀಗಾಗಿ ಸಲ್ಮಾನ್ ಖಾನ್ ಅವರ ಈ ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ಟಿವಿ9 ಕನ್ನಡ ತನಿಖೆಯಿಂದ ತಿಳಿದುಬಂದಿದೆ. ಮೂಲ ವಿಡಿಯೋದ ಆಡಿಯೋವನ್ನು ಬದಲಾಯಿಸಲಾಗಿದೆ. ಮೂಲ ವೀಡಿಯೊ 2021 ರದ್ದು. ಸಲ್ಮಾನ್ ಖಾನ್ ತನ್ನ ಸಹೋದರ ಅರ್ಬಾಜ್ ಖಾನ್ ಅವರೊಂದಿಗೆ ಸಂದರ್ಶನವನ್ನು ಮಾಡಿದ ವಿಡಿಯೋ ಇದಾಗಿದೆ. ಈ ಸಂಪೂರ್ಣ ಸಂಭಾಷಣೆಯಲ್ಲಿ ಲಾರೆನ್ಸ್ ಬಿಷ್ಣೋಯ್ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ