ನಟಿಮಣಿಯರು ತೊಡುವ ಡ್ರೆಸ್ ಎಲ್ಲರ ಗಮನ ಸೆಳೆಯುತ್ತದೆ. ಇದಕ್ಕಾಗಿ ಅವರು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ, ಕೆಲವೊಮ್ಮೆ ಅವರು ಹಾಕಿಕೊಳ್ಳುವ ಡ್ರೆಸ್ಗಳಿಂದ ಟ್ರೋಲ್ ಆದ ಉದಾಹರಣೆ ಸಾಕಷ್ಟಿದೆ. ಈಗ ದೀಪಿಕಾ ಪಡುಕೋಣೆ (Deepika Padukone) ಕೂಡ ಇದೇ ವಿಚಾರಕ್ಕೆ ಟ್ರೋಲ್ ಆಗಿದ್ದಾರೆ. ಅವರು ‘ಗೆಹರಾಯಿಯಾ’ (Gehraiyaan) ಸಿನಿಮಾ ಪ್ರಮೋಷನ್ ವೇಳೆ ತೊಟ್ಟ ಡ್ರೆಸ್ ಸಾಕಷ್ಟು ಟ್ರೋಲ್ಗೆ ಒಳಗಾಗಿದೆ. ಕೆಲವರು ಇದು ರಣವೀರ್ ಸಿಂಗ್ ಡ್ರೆಸ್ ಎಂದು ಟೀಕೆ ಮಾಡಿದ್ದಾರೆ. ‘ಗೆಹರಾಯಿಯಾ’ ಸಿನಿಮಾದಲ್ಲಿ ದೀಪಿಕಾ ಮಸ್ತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಕಿಸ್ಸಿಂಗ್ ದೃಶ್ಯಗಳು ಈ ಟ್ರೇಲರ್ನಲ್ಲಿ ಎಲ್ಲರ ಕಣ್ಣು ಕುಕ್ಕಿದೆ. ಈ ಸಿನಿಮಾದಲ್ಲಿ ದೀಪಿಕಾ ಹಾಗೂ ಸಿದ್ಧಾಂತ್ ಚತುರ್ವೇದಿ ನಡುವೆ ಸಾಕಷ್ಟು ಕಿಸ್ಸಿಂಗ್ ದೃಶ್ಯಗಳಿವೆ. ಸಿನಿಮಾದಲ್ಲಿ ಮಾತ್ರವಲ್ಲದೆ, ಸಿನಿಮಾ ಪ್ರಚಾರದಲ್ಲೂ ದೀಪಿಕಾ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ದೀಪಿಕಾ ಬ್ಲೇಜರ್ ಡ್ರೆಸ್ ಹಾಕಿ ಕಾಣಿಸಿಕೊಂಡಿದ್ದರು. ಇದರ ವಿಡಿಯೋಗಳನ್ನು ಪಾಪರಾಜಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ನಾನಾ ರೀತಿಯ ಕಮೆಂಟ್ಗಳು ಬಂದಿವೆ. ಕೆಲವರು ಇದನ್ನು ರಣವೀರ್ ಸಿಂಗ್ ಅವರ ಡ್ರೆಸ್ ಎಂದು ಟೀಕೆ ಮಾಡಿದ್ದಾರೆ. ಆದರೆ, ನಟಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ರಣವೀರ್ ಸಿಂಗ್ ಚಿತ್ರ-ವಿಚಿತ್ರ ಬಟ್ಟೆ ತೊಡಲು ಎತ್ತಿದ ಕೈ. ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ತುಂಬಾನೇ ವಿಚಿತ್ರ ಬಟ್ಟೆ ತೊಟ್ಟು ಕಾಣಿಸಿಕೊಂಡ ಉದಾಹರಣೆ ಸಾಕಷ್ಟಿದೆ. ಈ ಕಾರಣಕ್ಕೆ ದೀಪಿಕಾ ಅವರನ್ನು ರಣವೀರ್ ಸಿಂಗ್ಗೆ ಹೋಲಿಕೆ ಮಾಡಿ ಟ್ರೋಲ್ ಮಾಡಲಾಗುತ್ತಿದೆ.
‘ಗೆಹರಾಯಿಯಾ’ ಚಿತ್ರವನ್ನು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ನೇರವಾಗಿ ‘ಅಮೇಜಾನ್ ಪ್ರೈಂ ವಿಡಿಯೋ’ ಮೂಲಕ ಈ ಚಿತ್ರ ರಿಲೀಸ್ ಆಗಲಿದೆ. ಈ ಸಿನಿಮಾ ತುಂಬ ರೊಮ್ಯಾಂಟಿಕ್ ಆದಂತಹ ಕಥೆಯನ್ನು ಒಳಗೊಂಡಿದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸಾಕ್ಷಿ ಸಿಕ್ಕಿದೆ. ‘ಗೆಹರಾಯಿಯಾ’ ಬಗ್ಗೆ ದೀಪಿಕಾ ಪಡುಕೋಣೆ ಅವರಿಗೆ ವಿಶೇಷ ಪ್ರೀತಿ ಇದೆ. ನಟಿ ಅನನ್ಯಾ ಪಾಂಡೆ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಈ ಚಿತ್ರ ಫೆಬ್ರವರಿ 11ರಂದು ರಿಲೀಸ್ ಆಗುತ್ತಿದೆ.
ಇದನ್ನೂ ಓದಿ:
Deepika Padukone: ‘ಗೆಹರಾಯಿಯಾ’ ಚಿತ್ರದ ಪ್ರಚಾರದಲ್ಲಿ ಮಿಂಚಿದ ದೀಪಿಕಾ; ಫೋಟೋಗಳು ಇಲ್ಲಿವೆ
ಇನ್ನೂ ಐದು ಬಯೋಪಿಕ್ನಲ್ಲಿ ನಟಿಸಲಿದ್ದಾರೆ ರಣವೀರ್ ಸಿಂಗ್? ‘83’ ಚಿತ್ರದಿಂದ ಬದಲಾಯ್ತು ಅದೃಷ್ಟ