ಕಳೆದ ಬಾರಿ ಮಾಡಿದ ತಪ್ಪು ತಿದ್ದಿಕೊಂಡ ‘ಧುರಂಧರ್’ ತಂಡ

Dhurandhar 2 movie: 2025 ರಲ್ಲಿ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಹಲವು ಬಾಕ್ಸ್ ಆಫೀಸ್​​ ದಾಖಲೆಗಳನ್ನು ಮುರಿದು ಹೊಸ ದಾಖಲೆಗಳನ್ನು ನಿರ್ಮಿಸಿತ್ತು. ಇದೀಗ ಮಾರ್ಚ್ 19ರಂದು ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗುತ್ತಿದ್ದು, ಕಳೆದ ಬಾರಿ ಮಾಡಿದ್ದ ಒಂದು ತಪ್ಪನ್ನು ಈ ಬಾರಿ ತಿದ್ದುಕೊಂಡಿದೆ ಚಿತ್ರತಂಡ.

ಕಳೆದ ಬಾರಿ ಮಾಡಿದ ತಪ್ಪು ತಿದ್ದಿಕೊಂಡ ‘ಧುರಂಧರ್’ ತಂಡ
Dhurandhar 2

Updated on: Mar 06, 2026 | 1:15 PM

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್’ ಸಿನಿಮಾ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಬಾಕ್ಸ್ ಆಫೀಸ್​​ನಲ್ಲಿ ಹಲವು ಹಳೆಯ ದಾಖಲೆಗಳನ್ನು ಪುಡಿಗಟ್ಟಿದ ‘ಧುರಂಧರ್’ ಹಲವು ಹೊಸ ದಾಖಲೆಗಳನ್ನು ಬರೆಯಿತು. ಕೇವಲ ಹಿಂದಿ ಭಾಷೆಯಲ್ಲಿ ಮಾತ್ರವೇ ಬಿಡುಗಡೆ ಆಗಿದ್ದರೂ ಸಹ ಭಾಷೆಯ ಹಂಗಿಲ್ಲದೆ ದಕ್ಷಿಣದ ರಾಜ್ಯಗಳ ಜನರೂ ಸಹ ನೋಡಿ ಸಂಭ್ರಮಿಸಿದ್ದರು. ಆದರೆ ಸಿನಿಮಾವನ್ನು ತಮ್ಮ ಸ್ಥಳೀಯ ಭಾಷೆಯಲ್ಲಿ ಬಿಡುಗಡೆ ಮಾಡುವ ಬಗ್ಗೆ ಆಗಲೂ ಸಹ ಕೆಲ ಪ್ರೇಕ್ಷಕರು ಮನವಿ ಮಾಡಿದ್ದರು. ಸಿನಿಮಾವನ್ನು ಆಂಧ್ರ-ತೆಲಂಗಾಣದಲ್ಲಿ ಬಿಡುಗಡೆ ಮಾಡಿದ್ದ ಮೈತ್ರಿ ಮೂವಿ ಮೇಕರ್ಸ್ ಸಹ ಸಿನಿಮಾವನ್ನು ತೆಲುಗಿಗೆ ಡಬ್ ಮಾಡಿ ಬಿಡುಗಡೆ ಮಾಡುವಂತೆ ಒತ್ತಾಯಿಸಿತ್ತು. ಇದೀಗ ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗುತ್ತಿದ್ದು, ಈ ಬಾರಿ ಮುಂಚಿತವಾಗಿ ಸಜ್ಜಾಗಿರುವ ಚಿತ್ರತಂಡ, ಹಿಂದಿ ಸೇರಿದಂತೆ ಒಟ್ಟಿಗೆ ಐದು ಭಾಷೆಗಳಲ್ಲಿ ಸಿನಿಮಾವನ್ನು ತೆರೆಗೆ ತರುತ್ತಿದೆ.

‘ಧುರಂಧರ್’ ಸಿನಿಮಾಕ್ಕೆ ದಕ್ಷಿಣದ ರಾಜ್ಯಗಳಲ್ಲಿ ಅದರಲ್ಲೂ ಕರ್ನಾಟಕ ಮತ್ತು ತೆಲುಗು ರಾಜ್ಯಗಳಿಂದ ಒಳ್ಳೆಯ ಕಲೆಕ್ಷನ್ ಹರಿದು ಬಂದಿತ್ತು. ಹಾಗಾಗಿ ಸಿನಿಮಾವನ್ನು ಹಿಂದಿಯ ಜೊತೆಗೆ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆ ಮಾಡುತ್ತಿದೆ. ನಾಳೆ (ಮಾರ್ಚ್ 07) ಬಿಡುಗಡೆ ಆಗುತ್ತಿರುವ ಸಿನಿಮಾದ ಟ್ರೈಲರ್ ಸಹ ಹಿಂದಿ ಸೇರಿದಂತೆ ಇತರೆ ದಕ್ಷಿಣ ಭಾಷೆಗಳಲ್ಲಿ ಯೂಟ್ಯೂಬ್​​ನಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವನ್ನು ಕೇವಲ ಹಿಂದಿಯಲ್ಲಿ ಮಾತ್ರವೇ ಬಿಡುಗಡೆ ಮಾಡದೆ ಇತರೆ ಭಾಷಿಕ ಸಿನಿಮಾ ಪ್ರೇಮಿಗಳಿಗೂ ಗೌರವ ಕೊಡುವ ಕಾರ್ಯವನ್ನು ‘ಧುರಂಧರ್’ ಚಿತ್ರತಂಡ ಮಾಡಿದೆ.

ಇದನ್ನೂ ಓದಿ:‘ಧುರಂಧರ್’ ಬಳಿಕ ಹಾರರ್ ಸಿನಿಮಾಕ್ಕೆ ಕೈ ಹಾಕಿದ ರಣ್ವೀರ್ ಸಿಂಗ್

2025 ರಲ್ಲಿ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾ ದಕ್ಷಿಣದ ರಾಜ್ಯಗಳಲ್ಲಿ ಒಳ್ಳೆಯ ಗಳಿಕೆ ಮಾಡಿತ್ತು. ಭಾರತದಲ್ಲಿ ‘ಧುರಂಧರ್’ ಸಿನಿಮಾ ಸುಮಾರು 900 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದರಲ್ಲಿ ಸುಮಾರು 250 ರಿಂದ 300 ಕೋಟಿ ಹಣ ದಕ್ಷಿಣ ಭಾರತದ ರಾಜ್ಯಗಳಿಂದಲೇ ಬಂದಿತ್ತು ಎನ್ನಲಾಗಿದೆ. ಕರ್ನಾಟಕ ಒಂದರಲ್ಲೇ ಈ ಸಿನಿಮಾಕ್ಕೆ 70 ರಿಂದ 90 ಕೋಟಿ ಗಳಿಕೆ ಆಗಿತ್ತು. ಅದೂ ಕೇವಲ ಹಿಂದಿ ವರ್ಷನ್​​ಗೆ. ಈ ಬಾರಿ ‘ಧುರಂಧರ್ 2’ ಸಿನಿಮಾಕ್ಕೂ ಇನ್ನೂ ಹೆಚ್ಚಿನ ಗಳಿಕೆ ಆಗಬಹುದು ಎನ್ನಲಾಗುತ್ತಿದೆ.

‘ಧುರಂಧರ್ 2’ ಸಿನಿಮಾವು ‘ಧುರಂಧರ್’ ಸಿನಿಮಾದ ಮುಂದಿನ ಭಾಗವಾಗಿದ್ದು, ‘ಧುರಂಧರ್’ ಸಿನಿಮಾನಲ್ಲಿದ್ದ ರಣ್ವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್ ಜೊತೆಗೆ ಇನ್ನೂ ಕೆಲವು ಪಾತ್ರಗಳು ಈ ಸಿನಿಮಾಕ್ಕೆ ಸೇರಿಕೊಂಡಿವೆ. ಸಿನಿಮಾವನ್ನು ಆದಿತ್ಯ ಧರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ಮತ್ತು ಬಿ62 ನಿರ್ಮಾಣ ಸಂಸ್ಥೆಗಳು ಜಂಟಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಿವೆ. ಸಿನಿಮಾ ಮಾರ್ಚ್ 19ರಂದು ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us