AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬಂತು ಬೆದರಿಕೆ: ರಣ್ವೀರ್ ಸಿಂಗ್-ದೀಪಿಕಾಗೆ ಭದ್ರತೆ ಹೆಚ್ಚಳ

Ranveer Singh movie: ಕೆಲ ದಿನಗಳ ಹಿಂದಷ್ಟೆ ನಿರ್ದೇಶಕ, ನಿರ್ಮಾಪಕ ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಅದಾದ ಬಳಿಕ ನಟ ರಣ್ವೀರ್ ಸಿಂಗ್​​ಗೆ ಕೊಲೆ ಬೆದರಿಕೆ ಹಾಕಲಾಗಿತ್ತು. ಅದಾಗಿ ಕೆಲವೇ ದಿನಗಳ ಬಳಿಕ ಮತ್ತೆ ರಣ್ವೀರ್ ಸಿಂಗ್​​ಗೆ ವಾಟ್ಸ್ಪ್​ ಮೂಲಕ ಬೆದರಿಕೆ ಹಾಕಲಾಗಿದ್ದು, ‘ನಿಮ್ಮ ಮ್ಯಾನೇಜರ್, ನಿಮ್ಮ ಎಲ್ಲ ಸಿಬ್ಬಂದಿಯನ್ನೂ ಕೊಲ್ಲುತ್ತೇವೆ’ ಎಂದು ಮಾಫಿಯಾಕ್ಕೆ ಸೇರಿದ ದುರುಳರು ಎಚ್ಚರಿಕೆ ನೀಡಿದ್ದಾರೆ.

ಮತ್ತೆ ಬಂತು ಬೆದರಿಕೆ: ರಣ್ವೀರ್ ಸಿಂಗ್-ದೀಪಿಕಾಗೆ ಭದ್ರತೆ ಹೆಚ್ಚಳ
Ranveer Singh
ಮಂಜುನಾಥ ಸಿ.
|

Updated on: Feb 14, 2026 | 9:50 PM

Share

ಬಾಲಿವುಡ್ (Bollywood)​​ ಮೇಲೆ ಭೂಗತ ಜಗತ್ತಿನ ಕಣ್ಣು ಬಿದ್ದಿದೆ. ಕೆಲ ದಶಕಗಳ ಹಿಂದೆ ದಾವೂದ್, ಚೋಟಾ ಶಕೀಲ್ ಇನ್ನೂ ಕೆಲ ಪಾತಕಿಗಳ ಸಮಯದಲ್ಲಿ ಬಾಲಿವುಡ್​​ ಅಕ್ಷರಷಃ ನಡುಗಿತ್ತು. ಅದಾದ ಬಳಿಕ ಕಳೆದ ಒಂದೆರಡು ದಶಕದಿಂದ ಭೂಗತ ಜಗತ್ತಿನ ಉಪಟಳ ಇಲ್ಲದೆ ಆರಾಮವಾಗಿತ್ತು ಆದರೆ ಇದೀಗ ಮತ್ತೆ ಬಾಲಿವುಡ್ ಮೇಲೆ ಭೂಗತ ಜಗತ್ತಿನ ಕಣ್ಣು ಬಿದ್ದಿದೆ. ಸಲ್ಮಾನ್ ಖಾನ್, ಕಪಿಲ್ ಶರ್ಮಾ ಇನ್ನೂ ಹಲವಾರು ಸೆಲೆಬ್ರಿಟಿಗಳಿಗೆ ಈಗಾಗಲೇ ಬೆದರಿಕೆ ಹಾಕಲಾಗಿದೆ. ಇದೀಗ ರೋಹಿತ್ ಶೆಟ್ಟಿ ಮತ್ತು ರಣ್ವೀರ್ ಸಿಂಗ್ ಅವರಿಗೂ ಬೆದರಿಕೆ ಹಾಕಲಾಗಿದೆ.

ಕೆಲ ದಿನಗಳ ಹಿಂದಷ್ಟೆ ನಿರ್ದೇಶಕ, ನಿರ್ಮಾಪಕ ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಅದಾದ ಬಳಿಕ ನಟ ರಣ್ವೀರ್ ಸಿಂಗ್​​ಗೆ ಕೊಲೆ ಬೆದರಿಕೆ ಹಾಕಲಾಗಿತ್ತು. ಅದಾಗಿ ಕೆಲವೇ ದಿನಗಳ ಬಳಿಕ ಮತ್ತೆ ರಣ್ವೀರ್ ಸಿಂಗ್​​ಗೆ ವಾಟ್ಸ್ಪ್​ ಮೂಲಕ ಬೆದರಿಕೆ ಹಾಕಲಾಗಿದ್ದು, ‘ನಿಮ್ಮ ಮ್ಯಾನೇಜರ್, ನಿಮ್ಮ ಎಲ್ಲ ಸಿಬ್ಬಂದಿಯನ್ನೂ ಕೊಲ್ಲುತ್ತೇವೆ’ ಎಂದು ಮಾಫಿಯಾಕ್ಕೆ ಸೇರಿದ ದುರುಳರು ಎಚ್ಚರಿಕೆ ನೀಡಿದ್ದಾರೆ.

ವಾಯ್ಸ್ ಮೆಜೇಜ್​ ಮೂಲಕ ರೋಹಿತ್ ಶೆಟ್ಟಿಗೆ ಬಂದಿರುವ ಎಚ್ಚರಿಕೆಯಲ್ಲಿ ‘ಲೈನ್​​ ಗೆ ಬಂದುಬಿಡು, ಇಲ್ಲದೇ ಹೋದರೆ ಅದರ ಪರಿಣಾಮ ಹೇಗಿರುತ್ತದೆ ಎಂದು ನೀನು ನೋಡಬೇಕಾಗುತ್ತದೆ. ಮಾತಿನಂತೆ ನಡೆದುಕೊಳ್ಳದೇ ಹೋದರೆ ಶಿಕ್ಷೆ ಹೇಗಿರುತ್ತದೆ ಎಂದು ನಿನಗೆ ತೋರಿಸುತ್ತೇವೆ’ ಎಂದು ವಾಯ್ಸ್ ಮೆಸೇಜ್​​ನಲ್ಲಿ ಹೇಳಲಾಗಿದೆ. ಈ ಎಚ್ಚರಿಕೆ ನಿನಗೆ ಮಾತ್ರವಲ್ಲ, ಇಡೀ ಚಿತ್ರರಂಗಕ್ಕೆ ಎಂದು ಸಹ ವಾಯ್ಸ್ ಮೆಸೇಜ್​​ನಲ್ಲಿದೆ. ಇನ್ನು ರಣ್ವೀರ್ ಸಿಂಗ್​​ಗೂ ಸಹ ಹೊಸದಾಗಿ ಎಚ್ಚರಿಕೆ ಬಂದಿದ್ದು ಕೊಲೆ ಮಾಡುವ ಎಚ್ಚರಿಕೆಯನ್ನು ನೀಡಲಾಗಿದೆ.

ಇದನ್ನೂ ಓದಿ:‘ಧುರಂಧರ್’ ಬಳಿಕ ಹಾರರ್ ಸಿನಿಮಾಕ್ಕೆ ಕೈ ಹಾಕಿದ ರಣ್ವೀರ್ ಸಿಂಗ್

ಬೆದರಿಕೆ ಬಂದ ಬೆನ್ನಲ್ಲೆ ರಣ್ವೀರ್ ಸಿಂಗ್ ಮನೆಗೆ ಭದ್ರತೆ ಹೆಚ್ಚಿಸಲಾಗಿದೆ ಮಾತ್ರವಲ್ಲದೆ, ಅವರ ಪತ್ನಿ ದೀಪಿಕಾ ಪಡುಕೋಣೆಗೂ ಸಹ ಭದ್ರತೆಯನ್ನು ಹೆಚ್ಚು ಮಾಡಲಾಗಿದೆ. ರಣ್ವೀರ್ ಸಿಂಗ್​​ ಅವರ ಮ್ಯಾನೇಜರ್​​ಗೆ ಬಂದಿರುವ ವಾಯ್ಸ್ ಮೆಸೇಜ್​​ನಲ್ಲಿ ಒಂದು ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಡಲಾಗಿದೆ. ಹಣ ನೀಡದೇ ಹೋದರೆ ರಣ್ವೀರ್ ಸಿಂಗ್ ಅವರಿಗೆ ‘ಬುದ್ಧಿ’ ಕಲಿಸುವುದಾಗಿ ಹೇಳಲಾಗಿದೆ. ರಣ್ವೀರ್ ಸಿಂಗ್ ಅವರಿಗೆ ಸಂಬಂಧಪಟ್ಟವರನ್ನು ಕೊಲೆ ಮಾಡುವುದಾಗಿ ಸಹ ಹೇಳಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್
ತುಂಗಭದ್ರ ನದಿಯಲ್ಲಿ ಕಾಣಿಸಿಕೊಳ್ತು ಬೃಹದಾಕಾರದ ಮೊಸಳೆ!
ತುಂಗಭದ್ರ ನದಿಯಲ್ಲಿ ಕಾಣಿಸಿಕೊಳ್ತು ಬೃಹದಾಕಾರದ ಮೊಸಳೆ!
ಕನ್ನಡದ ಯಾವ ಹೀರೋಗೆ ವಿಜಯ್ ತರಹ ಗೆಲ್ಲುವ ತಾಕತ್ತಿದೆ? ಉಪ್ಪಿ ಹೇಳಿದ್ದಿಷ್ಟು
ಕನ್ನಡದ ಯಾವ ಹೀರೋಗೆ ವಿಜಯ್ ತರಹ ಗೆಲ್ಲುವ ತಾಕತ್ತಿದೆ? ಉಪ್ಪಿ ಹೇಳಿದ್ದಿಷ್ಟು