AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ ಖಾನ್​​ಗಳ ಬುಡ ಅಲ್ಲಾಡಿಸುತ್ತಿರುವ ಮೂವರು ಸ್ಟಾರ್ ನಟರು

Khans of Bollywood: ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್ ಅವರದ್ದೇ ಪಾರುಪತ್ಯ. ‘ದಿ ಥ್ರೀ ಖಾನ್ಸ್’ ಎಂದೇ ಅವರು ಖ್ಯಾತರು. ಆದರೆ ಸಮಯ ಬದಲಾಗುತ್ತಲೇ ಇರುತ್ತದೆ. ಇದೀಗ ಖಾನ್​​ಗಳ ಸ್ಥಾನವನ್ನು ಬೇರೆಯವರು ತುಂಬುವ ಸಮಯ ಸನಿಹ ಬಂದಂತೆ ತೋರುತ್ತಿದೆ. ಈಗಿನ ಕಾಲಘಟ್ಟದಲ್ಲಿ ಈ 'ಮೂವರು ಖಾನ್'ಗಳ ಜನಪ್ರಿಯತೆಗೆ ಸರಿಸಮನಾಗಿ ಹೊಸ ತಲೆಮಾರಿನ ನಟರು ಬೆಳೆಯುತ್ತಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.

ಬಾಲಿವುಡ್​ ಖಾನ್​​ಗಳ ಬುಡ ಅಲ್ಲಾಡಿಸುತ್ತಿರುವ ಮೂವರು ಸ್ಟಾರ್ ನಟರು
Khans Of Bollywood
ಮಂಜುನಾಥ ಸಿ.
|

Updated on: Feb 12, 2026 | 9:19 PM

Share

ಬಾಲಿವುಡ್ (Bollywood) ಚಿತ್ರರಂಗದಲ್ಲಿ ಕಳೆದ ಮೂರು ದಶಕಗಳಿಂದ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್ ಅವರದ್ದೇ ಪಾರುಪತ್ಯ. ‘ದಿ ಥ್ರೀ ಖಾನ್ಸ್’ ಎಂದೇ ಅವರು ಖ್ಯಾತರು. ಆದರೆ ಸಮಯ ಬದಲಾಗುತ್ತಲೇ ಇರುತ್ತದೆ. ಇದೀಗ ಖಾನ್​​ಗಳ ಸ್ಥಾನವನ್ನು ಬೇರೆಯವರು ತುಂಬುವ ಸಮಯ ಸನಿಹ ಬಂದಂತೆ ತೋರುತ್ತಿದೆ. ಈಗಿನ ಕಾಲಘಟ್ಟದಲ್ಲಿ ಈ ‘ಮೂವರು ಖಾನ್’ಗಳ ಜನಪ್ರಿಯತೆಗೆ ಸರಿಸಮನಾಗಿ ಹೊಸ ತಲೆಮಾರಿನ ನಟರು ಬೆಳೆಯುತ್ತಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.

ಮೂವರು ಖಾನ್​​ಗಳಿಗೆ ಭಾರಿ ಪೈಪೋಟಿಯನ್ನು ನೀಡುತ್ತಿರುವ ಬಾಲಿವುಡ್ ನಟರೆಂದರೆ ರಣ್​​ಬೀರ್ ಕಪೂರ್, ವಿಕ್ಕಿ ಕೌಶಲ್ ಮತ್ತು ರಣ್ವೀರ್ ಸಿಂಗ್. ಈ ಮೂವರೂ ಸಹ ಕಳೆದ ಕೆಲ ವರ್ಷಗಳಲ್ಲಿ ಬಾಕ್ಸ್ ಆಫೀಸ್​​ನಲ್ಲಿ ಅಕ್ಷರಷಃ ಅಬ್ಬರಿಸುತ್ತಿದ್ದಾರೆ. ಈ ಬಗ್ಗೆ ಸ್ವತಃ ‘ಮಿಸ್ಟರ್ ಪರ್ಫೆಕ್ಟ್’ ಆಮಿರ್ ಖಾನ್ ಅವರು ಮುಕ್ತವಾಗಿ ಮಾತನಾಡಿದ್ದು, ರಣ್​​ಬೀರ್, ರಣ್ವೀರ್ ಮತ್ತು ವಿಕ್ಕಿ ಕೌಶಲ್​​ ಅವರ ಪ್ರತಿಭೆಯನ್ನು ಕೊಂಡಾಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಆಮಿರ್ ಖಾನ್, ರಣಬೀರ್ ಕಪೂರ್, ರಣವೀರ್ ಸಿಂಗ್ ಮತ್ತು ವಿಕ್ಕಿ ಕೌಶಲ್ ಅವರ ಅಭಿನಯ ಹಾಗೂ ಸಾಮರ್ಥ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ‘ಇಂದಿನ ಯುವ ನಟರು ಅತ್ಯಂತ ಪ್ರತಿಭಾವಂತರು. ಅವರು ಕೇವಲ ಸ್ಟಾರ್‌ಗಳಲ್ಲ, ಬದಲಿಗೆ ಅದ್ಭುತ ನಟರು’ ಎಂದಿದ್ದಾರೆ.

‘ಖಾನ್‌ಗಳ ಸ್ಥಾನವನ್ನು ಈ ಹೊಸಬರು ತುಂಬಬಲ್ಲರೇ?’ ಎಂಬ ಪ್ರಶ್ನೆಗೆ ಉತ್ತರಿಸಿದ ಆಮೀರ್, ‘ಖಂಡಿತವಾಗಿಯೂ ಸಾಧ್ಯವಿದೆ. ರಣಬೀರ್ ಕಪೂರ್ ಈಗಾಗಲೇ ತಮ್ಮ ನಟನೆಯ ಮೂಲಕ ದೊಡ್ಡ ಮಟ್ಟದ ಹೆಸರು, ಪ್ರೇಕ್ಷಕರ ಮೇಲೆ ಪ್ರಭಾವ ಬೀರಿದ್ದಾರೆ. ರಣವೀರ್ ಸಿಂಗ್ ಅವರಲ್ಲಿರುವ ಎನರ್ಜಿ ಮತ್ತು ವಿಕ್ಕಿ ಕೌಶಲ್ ಅವರ ನಟನಾ ಕೌಶಲ ಅದ್ಭುತವಾಗಿದೆ. ಚಿತ್ರರಂಗದಲ್ಲಿ ಬದಲಾವಣೆ ಸಹಜ. ನಾವು (ಖಾನ್​​ಗಳು) ಸದಾಕಾಲ ಇಲ್ಲೇ ಇರುವುದಿಲ್ಲ. ನಮ್ಮ ನಂತರ ಈ ನಟರು ಉದ್ಯಮವನ್ನು ಮುನ್ನಡೆಸುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದ್ದಾರೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ:ದಕ್ಷಿಣದ ಆ ನಟ ನಟಿಯರನ್ನು ತೆರೆಮೇಲೂ ಕೀಳಾಗಿ ಕಾಣಲು ಇಷ್ಟಪಡಲ್ಲ; ಬಾಲಿವುಡ್ ನಟಿ

ಈ ಹಿಂದೆ ಸಿನಿರಂಗದಲ್ಲಿ ಖಾನ್‌ಗಳ ಚಿತ್ರಗಳು ಮಾತ್ರ ನೂರು-ನಾನೂರು ಕೋಟಿ ಗಳಿಸುತ್ತಿದ್ದವು. ಆದರೆ ಈಗ ರಣಬೀರ್ ಕಪೂರ್ ಅವರ ‘ಅನಿಮಲ್’ ನಂತಹ ಚಿತ್ರಗಳು ಸಾವಿರ ಕೋಟಿಯ ಗಡಿ ತಲುಪುತ್ತಿವೆ. ವಿಕ್ಕಿ ಕೌಶಲ್ ಅವರ ‘ಸ್ಯಾಮ್ ಬಹದ್ದೂರ್’ ಮತ್ತು ರಣವೀರ್ ಸಿಂಗ್ ಅವರ ವೈವಿಧ್ಯಮಯ ಪಾತ್ರಗಳು ಪ್ರೇಕ್ಷಕರ ಮನಗೆಲ್ಲುತ್ತಿವೆ. ಇದು ಬಾಲಿವುಡ್‌ನಲ್ಲಿ ಹೊಸ ಯುಗ ಆರಂಭವಾಗುತ್ತಿರುವುದರ ಮುನ್ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇತ್ತ ಖಾನ್​​ಗಳು ಅದರಲ್ಲೂ ಸಲ್ಮಾನ್ ಖಾನ್ ಮತ್ತು ಆಮಿರ್ ಖಾನ್ ಒಂದೇ ಒಂದು ಹಿಟ್ ನೀಡಲು ವರ್ಷಗಳಿಂದಲೂ ಒದ್ದಾಡುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಪ್ರತಿ ಸಿನಿಮಾ ಮೂಲಕ ಬಾಕ್ಸ್​ ಆಫೀನ್​​ ಅನ್ನು ನಡುಗಿಸುತ್ತಿದ್ದ ಸಲ್ಮಾನ್ ಖಾನ್​ ಈಗ ಒಂದೇ ಒಂದು ಹಿಟ್ ಸಿನಿಮಾಕ್ಕಾಗಿ ಪರದಾಡುತ್ತಿದ್ದಾರೆ. ಆಮಿರ್ ಖಾನ್​ ಸಹ ‘ದಂಗಲ್’ ಬಳಿಕ ದೊಡ್ಡ ಹಿಟ್ ನೋಡಿಯೇ ಇಲ್ಲ. ಶಾರುಖ್ ಖಾನ್ ಮಾತ್ರ ‘ಜವಾನ್’, ‘ಪಠಾಣ್’ ಸಿನಿಮಾಗಳ ಮೂಲಕ ದೊಡ್ಡ ಹಿಟ್ ನೀಡಿದರಾದರೂ ಅವರಿಗೂ ಮುಂದಿನ ದಿನಗಳು ಸುಲಭವಾಗಂತೂ ಇಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ