ಆ್ಯಕ್ಷನ್, ಆ್ಯಕ್ಷನ್, ಆ್ಯಕ್ಷನ್; ಬೀಸ್ಟ್​ ಮೋಡ್​​​ನಲ್ಲಿ ರಿವೇಂಜ್​ಗೆ ಇಳಿದ ರಣವೀರ್

Dhurandha 2 Trailer : ‘ಧುರಂಧರ್’ ಚಿತ್ರವನ್ನು ಆದಿತ್ಯ ಧಾರ್ ನಿರ್ದೇಶನ ಮಾಡಿದ್ದಾರೆ. ಮೊದಲ ಚಿತ್ರ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಮೊದಲ ಭಾಗಕ್ಕಿಂತಲೂ ಸೀಕ್ವೆಲ್ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ‘ಧುರಂಧರ್’ ಸಿನಿಮಾ ಕೇವಲ ಹಿಂದಿಯಲ್ಲಿ ಮಾತ್ರ ರಿಲೀಸ್ ಆಗಿತ್ತು. ಈಗ ‘ಧುರಂದರ್ 2’ ಸಿನಿಮಾ ಹಿಂದಿ ಜೊತೆಗೆ ಕನ್ನಡ ಮೊದಲಾದ ಭಾಷೆಗಳಲ್ಲಿ ರಿಲೀಸ್ ಆಗಲಿದೆ.

ಆ್ಯಕ್ಷನ್, ಆ್ಯಕ್ಷನ್, ಆ್ಯಕ್ಷನ್;  ಬೀಸ್ಟ್​ ಮೋಡ್​​​ನಲ್ಲಿ ರಿವೇಂಜ್​ಗೆ ಇಳಿದ ರಣವೀರ್
ರಣವೀರ್ ಸಿಂಗ್

Updated on: Mar 07, 2026 | 11:56 AM

‘ಧುರಂಧರ್’ ಸಿನಿಮಾ (Dhurandhar) ಸೂಪರ್ ಹಿಟ್ ಆಯಿತು. ಈಗ ಚಿತ್ರದ ಸೀಕ್ವೆಲ್ ‘ಧುರಂಧರ್ 2’ ರಿಲೀಸ್​​ಗೆ ರೆಡಿ ಆಗುತ್ತಿದೆ. ಮಾರ್ಚ್​ 19ರಂದು ಸಿನಿಮಾ ವಿಶ್ವ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರದ ಟ್ರೇಲರ್​​ಗಾಗಿ ಫ್ಯಾನ್ಸ್ ಕಾದಿದ್ದರು. ಇಂದು (ಮಾರ್ಚ್ 7) ಬೆಳಿಗ್ಗೆ 11.01ಕ್ಕೆ ಸಿನಿಮಾದ ಟ್ರೇಲರ್ ಬಿಡುಗಡೆ ಕಂಡಿದೆ. ಈ ಟ್ರೇಲರ್ ನೋಡಿದ ಬಳಿಕ ಸಿನಿಮಾ ಯಾವ ರೀತಿಯಲ್ಲಿ ಇರಲಿದೆ ಎಂಬುದರ ಸ್ಪಷ್ಟ ಚಿತ್ರಣ ಸಿಕ್ಕಿದೆ.

ರೆಹಮಾನ್ ಡಕಾಯಿತ್ ಹತ್ಯೆಯನ್ನು ಹಮ್ಜಾ ಅಲಿ ಮಜಾರಿ (ರಣವೀರ್ ಸಿಂಗ್) ಮಾಡುತ್ತಾನೆ. ಭೀಕರವಾಗಿ ಈ ಕೊಲೆ ನಡೆಯುತ್ತದೆ. ಈ ಕೊಲೆ ಬಳಿಕ ‘ಧುರಂಧರ್’ ಸಿನಿಮಾ ಕೊನೆ ಆಗಿತ್ತು. ಈಗ ‘ಧುರಂಧರ್ 2’ ಸಿನಿಮಾ ಇಲ್ಲಿಂದಲೇ ಆರಂಭ ಆಗುತ್ತಿದೆ. ಹಮ್ಜಾ ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ರಿವೇಂಜ್​​ಗೆ ಇಳಿಯುತ್ತಾನೆ. ಹೀಗಾಗಿ, ಇಡೀ ಸಿನಿಮಾ ಉದ್ದಕ್ಕೂ ಸೇಡಿನ ಕತೆ ಇರಲಿದೆ ಎಂಬುದು ಸ್ಪಷ್ಟವಾಗಿದೆ.

YouTube video player

ಟ್ರೇಲರ್ ಉದ್ದಕ್ಕೂ ಆ್ಯಕ್ಷನ್ ಇದೆ. ಹಮ್ಜಾ  ಮೂಲ ಹೆಸರು ಜಸ್ಕಿರತ್ ಸಿಂಗ್ ರಂಗಿ. ಆತ ಹಮ್ಜಾ ಆಗಲು ಒಪ್ಪಿಕೊಂಡಿದ್ದು ಹೇಗೆ? ಆತನನ್ನು ಈ ಸೀಕ್ರೆಟ್ ಮಿಷನ್​​ಗೆ ಆಯ್ಕೆ ಮಾಡಿಕೊಂಡಿದ್ದು ಹೇಗೆ ಎಂಬಿತ್ಯಾದಿ ವಿಷಯಗಳನ್ನು ಟ್ರೇಲರ್​​ನಲ್ಲಿ ತೋರಿಸಲಾಗಿದೆ. ಸಿನಿಮಾ ರಕ್ತಸಿಕ್ತವಾಗಿರಲಿದೆ ಎಂಬುದು ವೀಕ್ಷಕರಿಗೆ ಸ್ಪಷ್ಟವಾಗಿದೆ.

ಇದನ್ನೂ ಓದಿ: ‘ಧುರಂಧರ್ 2’ ಟ್ರೇಲರ್ ಬಿಡುಗಡೆ ಬೆನ್ನಲ್ಲೇ ಶುರು ಆಗಲಿದೆ ಅಡ್ವಾನ್ಸ್ ಬುಕಿಂಗ್

‘ಧುರಂಧರ್’ ಚಿತ್ರವನ್ನು ಆದಿತ್ಯ ಧಾರ್ ನಿರ್ದೇಶನ ಮಾಡಿದ್ದಾರೆ. ಮೊದಲ ಚಿತ್ರ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಈ ಸಿನಿಮಾ ಸೀಕ್ವೆಲ್ ಮೊದಲ ಭಾಗಕ್ಕಿಂತಲೂ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ‘ಧುರಂಧರ್’ ಸಿನಿಮಾ ಕೇವಲ ಹಿಂದಿಯಲ್ಲಿ ಮಾತ್ರ ರಿಸಿಲೀಸ್ ಆಗಿತ್ತು. ಈಗ ‘ಧುರಂದರ್ 2’ ಸಿನಿಮಾ ಹಿಂದಿ ಜೊತೆಗೆ ಕನ್ನಡ ಮೊದಲಾದ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಆದರೆ, ಸಿನಿಮಾದ ಟ್ರೇಲರ್ ಸದ್ಯ ಹಿಂದಿಯಲ್ಲಿ ಮಾತ್ರ ಬಂದಿದೆ.


‘ಧುರಂಧರ್’ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಪಾಕಿಸ್ತಾನಕ್ಕೆ ತೆರಳುತ್ತಾರೆ. ಅಲ್ಲಿ ಪಾಕಿಸ್ತಾನದವರಂತೆ ಇದ್ದು, ಸ್ಪೈ ಆಗಿ ಕೆಲಸ ಮಾಡುತ್ತಾರೆ. ಸಿನಿಮಾ ಭರ್ಜರಿ ಆ್ಯಕ್ಷನ್​​ಗಳನ್ನು ಒಳಗೊಂಡಿತ್ತು. ಕಂದಾಹಾರ್ ಹೈಜ್ಯಾಕ್, ಮುಂಬೈ ದಾಳಿ ಇತ್ಯಾದಿ ವಿಷಯಗಳನ್ನು ಒಳಗೊಂಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:09 am, Sat, 7 March 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us