‘ಧುರಂಧರ್ 2’ ಬಿಡುಗಡೆಗೆ ಮುಂಚೆ ಮರು ಬಿಡುಗಡೆ ಆಯ್ತು ‘ಧುರಂಧರ್’

Dhurandhar movie re release: ‘ಧುರಂಧರ್ 2’ ಸಿನಿಮಾದ ಬಿಡುಗಡೆಗೆ ಇನ್ನೂ ಒಂದು ವಾರ ಇರುವಾಗಲೇ ಇದೇ ಸಿನಿಮಾದ ಮೊದಲ ಭಾಗ ‘ಧುರಂಧರ್’ ಮರು ಬಿಡುಗಡೆ ಆಗಿದೆ. 2025ರ ಡಿಸೆಂಬರ್​​ನಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿದ್ದ ‘ಧುರಂಧರ್’ ಸಿನಿಮಾ ಇದೀಗ ಮಾರ್ಚ್ 12 ರಂದು ಮರು ಬಿಡುಗಡೆ ಆಗಿದ್ದು, ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.

‘ಧುರಂಧರ್ 2’ ಬಿಡುಗಡೆಗೆ ಮುಂಚೆ ಮರು ಬಿಡುಗಡೆ ಆಯ್ತು ‘ಧುರಂಧರ್’
Dhurandhar Part 1

Updated on: Mar 12, 2026 | 5:38 PM

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗುತ್ತಿದೆ. ಮಾರ್ಚ್ 19ರಂದು ಸಿನಿಮಾ ರಿಲೀಸ್ ಆಗುತ್ತಿದ್ದು, ಮಾರ್ಚ್ 18ರಂದು ಸಿನಿಮಾದ ಪ್ರೀಮಿಯರ್ ಶೋ ಆಯೋಜನೆಗೊಳ್ಳಲಿದೆ. ಸಿನಿಮಾದ ಬಿಡುಗಡೆಗೆ ಇನ್ನೂ ಒಂದು ವಾರ ಇರುವಾಗಲೇ ಇದೇ ಸಿನಿಮಾದ ಮೊದಲ ಭಾಗ ‘ಧುರಂಧರ್’ ಮರು ಬಿಡುಗಡೆ ಆಗಿದೆ. 2025ರ ಡಿಸೆಂಬರ್​​ನಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿದ್ದ ‘ಧುರಂಧರ್’ ಸಿನಿಮಾ ಇದೀಗ ಮಾರ್ಚ್ 12 ರಂದು ಮರು ಬಿಡುಗಡೆ ಆಗಿದ್ದು, ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.

‘ಧುರಂಧರ್ 2’ ಸಿನಿಮಾಕ್ಕೆ ಪ್ರೇಕ್ಷಕರನ್ನು ಸಜ್ಜುಗೊಳಿಸುವ ಉದ್ದೇಶದಿಂದ ‘ಧುರಂಧರ್’ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡಲಾಗಿದೆ. ಸುಮಾರು 250 ಪರದೆಗಳಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ವಿದೇಶಗಳಲ್ಲಿ ವಿಶೇಷವಾಗಿ ಅಮೆರಿಕ, ಕೆನಡಾಗಳಲ್ಲಿ ಮಾರ್ಚ್ 13 ರಿಂದ ‘ಧುರಂಧರ್’ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಉತ್ತರ ಅಮೆರಿಕ ಒಂದರಲ್ಲೇ 185 ಸ್ಕ್ರೀನ್​​ಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿರುವುದು ವಿಶೇಷ. ವಿಶ್ವದಾದ್ಯಂತ ಒಟ್ಟು 500 ಸ್ಕ್ರೀನ್​​ಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಮರು ಬಿಡುಗಡೆ ಆಗುತ್ತಿರುವ ಸಿನಿಮಾ ಒಂದು ಇಷ್ಟು ದೊಡ್ಡ ಪ್ರಮಾಣದಲ್ಲಿ ರಿಲೀಸ್ ಆಗುತ್ತಿರುವುದು ಅಪರೂಪ.

ಇದನ್ನೂ ಓದಿ:‘ಧುರಂಧರ್’ ಬಳಿಕ ಹಾರರ್ ಸಿನಿಮಾಕ್ಕೆ ಕೈ ಹಾಕಿದ ರಣ್ವೀರ್ ಸಿಂಗ್

ಅಭಿಮಾನಿಗಳು ಮೊದಲ ಭಾಗದ ರೋಮಾಂಚನಕಾರಿ ಕ್ಷಣಗಳನ್ನು ಮತ್ತೊಮ್ಮೆ ಬೆಳ್ಳಿತೆರೆಯ ಮೇಲೆ ಸವಿದು, ಕೆಲವೇ ದಿನಗಳ ಅಂತರದಲ್ಲಿ (ಮಾರ್ಚ್ 19) ಅದರ ಮುಂದುವರಿದ ಭಾಗವಾದ ‘ದಿ ರಿವೆಂಜ್’ ಅನ್ನು ನೋಡುವ ಅವಕಾಶವನ್ನು ಈ ಮೂಲಕ ಕಲ್ಪಿಸಲಾಗಿದೆ. ‘ಧುರಂಧರ್’ ಸಿನಿಮಾದ ಮುಂದಿನ ಭಾಗ ‘ಧುರಂಧರ್ 2’ ಆಗಿರುವ ಕಾರಣ ಪ್ರೇಕ್ಷಕರು ಕತೆಯನ್ನು ಸ್ಮರಿಸಿಕೊಳ್ಳಲು ಇದು ಸಹಾಯ ಮಾಡಲಿದೆ. ಹಾಗೂ ‘ಧುರಂಧರ್ 2’ ಸಿನಿಮಾಕ್ಕೆ ಪ್ರೇಕ್ಷಕರನ್ನು ಸಜ್ಜುಗೊಳಿಸಲಿದೆ.

ಎರಡು ಪಾರ್ಟ್​​ನಲ್ಲಿ ಬಿಡುಗಡೆ ಆಗುವ ಹಲವು ಸಿನಿಮಾಗಳು, ಎರಡನೇ ಭಾಗದ ಬಿಡುಗಡೆಗೆ ಮುಂಚೆ ಹೀಗೆ ಮೊದಲ ಪಾರ್ಟ್​​ ಅನ್ನು ರಿ-ರಿಲೀಸ್ ಮಾಡುತ್ತಾರೆ. ‘ಬಾಹುಬಲಿ’, ‘ಕೆಜಿಎಫ್’, ‘ಪುಷ್ಪ’ ಸಿನಿಮಾಗಳು ಸಹ ರಿ-ರಿಲೀಸ್ ಆಗಿದ್ದವು. ಈಗ ‘ಧುರಂಧರ್’ ಸಿನಿಮಾ ಸಹ ಮರು ಬಿಡುಗಡೆ ಆಗುತ್ತಿದೆ. ‘ಧುರಂಧರ್ 2’ ಸಿನಿಮಾ ಮಾರ್ಚ್ 19 ರಂದು ಬಿಡುಗಡೆ ಆಗುತ್ತಿದೆ. ಸಿನಿಮಾದ ಪ್ರೀಮಿಯರ್ ಶೋ ಮಾರ್ಚ್ 18ರಿಂದಲೇ ಪ್ರದರ್ಶನವಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us