ರಿವಾ ಅರೋರಾ (Riva Arora) ಅವರಿಗೆ ಈಗಿನ್ನೂ ಸಣ್ಣ ವಯಸ್ಸು. ಈ ವಯಸ್ಸಿಗೇ ಅವರು ಸಖತ್ ಗ್ಲಾಮರಸ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ವೈರಲ್ ಹಾಡುಗಳಿಗೆ ರೀಲ್ಸ್ ಮಾಡಿ ಗಮನ ಸೆಳೆಯುತ್ತಾರೆ. ಇಷ್ಟು ಸಣ್ಣ ವಯಸ್ಸಿಗೆ ರಿವಾ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರು ಕೆಲವು ಸಿನಿಮಾಗಳಲ್ಲಿ (Hindi Cinema) ಬಾಲ ಕಲಾವಿದೆಯಾಗಿ ನಟಿಸಿದ್ದಾರೆ. ರಿವಾ ಅವರು ಹಾರ್ಮೋನ್ ಇಂಜೆಕ್ಷನ್ (Hormone Injection) ಪಡೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಕಾರಣದಿಂದಲೇ ಅವರ ದೇಹ ಬೇಗ ಬೆಳವಣಿಗೆ ಕಂಡಿದೆ ಎನ್ನಲಾಗುತ್ತಿದೆ. ಆದರೆ, ಕುಟುಂಬದವರು ಇದನ್ನು ತಳ್ಳಿ ಹಾಕಿದ್ದಾರೆ.
‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ 2019ರಲ್ಲಿ ರಿಲೀಸ್ ಆಯಿತು. ವಿಕ್ಕಿ ಕೌಶಲ್ ನಟನೆಯ ಈ ಸಿನಿಮಾ ಭಾರತವು ಪಾಕ್ ಉಗ್ರರ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಆಧರಿಸಿದೆ. ಈ ಸಿನಿಮಾದಲ್ಲಿ ರಿವಾ ಅರೋರಾ ಅವರು ಯೋಧನ ಮಗಳಾಗಿ ಕಾಣಿಸಿಕೊಂಡಿದ್ದರು. ಹುತಾತ್ಮನಾದ ತಂದೆಯ ಅಂತ್ಯ ಸಂಸ್ಕಾರದ ವೇಳೆ ಅಳುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆದಿತ್ತು. ಈ ಮೂಲಕ ಅವರು ಫೇಮಸ್ ಆದರು. 2020ರಲ್ಲಿ ರಿಲೀಸ್ ಆದ ‘ಗುಂಜನ್ ಸಕ್ಸೇನಾ: ದಿ ಕಾರ್ಗಿಲ್’ ಗರ್ಲ್ ಸಿನಿಮಾದಲ್ಲಿ ಗುಂಜನ್ ಅವರು ಬಾಲ್ಯದ ಪಾತ್ರವನ್ನು ಅವರು ಮಾಡಿದ್ದರು. ಕೆಲವೇ ವರ್ಷಗಳಲ್ಲಿ ಅವರ ದೇಹದಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದೆ.
Happy Hormones: ಹ್ಯಾಪಿ ಹಾರ್ಮೋನ್ಗಳನ್ನು ಹೆಚ್ಚಿಸುವುದು ಹೇಗೆ ಇಲ್ಲಿದೆ ಕೆಲವು ಉಪಯುಕ್ತ ಸಲಹೆಗಳು
‘ಉರಿ’ ಸಿನಿಮಾ ಶೂಟಿಂಗ್ ವೇಳೆ ರಿವಾ ಅವರಿಗೆ 12 ವರ್ಷ ಆಗಿತ್ತು ಎನ್ನಲಾಗಿದೆ. ನಾಲ್ಕೇ ವರ್ಷಗಳಲ್ಲಿ ಅವರು ಸಾಕಷ್ಟು ಬೆಳೆದರು. ಇದು ಅನೇಕರಿಗೆ ಅಚ್ಚರಿ ಮೂಡಿಸಿತ್ತು. ರಿವಾ ಬೇಗ ಬೆಳವಣಿಗೆ ಕಾಣಬೇಕು ಎನ್ನುವ ಕಾರಣಕ್ಕೆ ಅವರಿಗೆ ಹಾರ್ಮೋನ್ ಇಂಜಕ್ಷನ್ ಕೊಡಿಸಲಾಗಿದೆ ಎನ್ನಲಾಗುತ್ತಿದೆ. ಅವರನ್ನು ಅನೇಕರು ಟೀಕಿಸಿದ್ದರು. ಅವರ ನಿಜವಾದ ವಯಸ್ಸೆಷ್ಟು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ‘ನನ್ನ ನಿಜವಾದ ವಯಸ್ಸನ್ನು ರಿವೀಲ್ ಮಾಡುತ್ತೇನೆ’ ಎಂದು ಅವರು ಹೇಳಿಕೊಂಡಿದ್ದರು.
ಸಣ್ಣ ವಯಸ್ಸಿಗೆ ರಿವಾ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾರೆ. ಅವರನ್ನು ಈ ವಿಚಾರದಲ್ಲಿ ಅನೇಕರು ಟೀಕೆ ಮಾಡಿದ್ದಾರೆ. ರಿವಾ ಅವರು ಇದಕ್ಕೆಲ್ಲ ತಲೆಕೆಡಿಸಿಕೊಂಡಿಲ್ಲ. ಸಾಕಷ್ಟು ರೀಲ್ಸ್ ಮಾಡಿ ಅವರು ಪೋಸ್ಟ್ ಮಾಡುತ್ತಾ ಇರುತ್ತಾರೆ. ಸಾಕಷ್ಟು ಸೆಲೆಬ್ರಿಟಿಗಳ ಜೊತೆ ಅವರು ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ರಿವಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು 1.12 ಕೋಟಿ ಜನರು ಹಿಂಬಾಲಿಸುತ್ತಿದ್ದಾರೆ. ಸುಮಾರು 3 ಸಾವಿರ ಪೋಸ್ಟ್ಗಳನ್ನು ಅವರು ಹಾಕಿದ್ದಾರೆ. ಸೋಶಿಯಲ್ ಮೀಡಿಯಾ ಖಾತೆಯನ್ನು ರಿವಾ ಅವರ ತಾಯಿ ಹ್ಯಾಂಡಲ್ ಮಾಡುತ್ತಿದ್ದಾರಂತೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.