‘ದಿ ಕೇರಳ ಸ್ಟೋರಿ’ ಯಶಸ್ಸಿನ ಬಗ್ಗೆ ಬಾಲಿವುಡ್​ ಮೌನವನ್ನು ಪ್ರಶ್ನಿಸಿದ ನಿರ್ದೇಶಕ ಆರ್​ಜಿವಿ

ರಾಮ್ ಗೋಪಾಲ್ ವರ್ಮಾ ಸಿನಿಮಾಗಳನ್ನು ಮಾಡುವುದರ ಜೊತೆಗೆ ಚಿತ್ರರಂಗದ ಆಗುಹೋಗುಗಳ ಬಗ್ಗೆ ಮಾತನಾಡುತ್ತಾ ಇರುತ್ತಾರೆ. ಈಗ ಅವರು ‘ದಿ ಕೇರಳ ಸ್ಟೋರಿ’ ಚಿತ್ರವನ್ನು ಬೆಂಬಲಿಸಿದ್ದಾರೆ.

‘ದಿ ಕೇರಳ ಸ್ಟೋರಿ’ ಯಶಸ್ಸಿನ ಬಗ್ಗೆ ಬಾಲಿವುಡ್​ ಮೌನವನ್ನು ಪ್ರಶ್ನಿಸಿದ ನಿರ್ದೇಶಕ ಆರ್​ಜಿವಿ
ರಾಮ್ ಗೋಪಾಲ್ ವರ್ಮಾ-ಅದಾ ಶರ್ಮಾ

Updated on: May 22, 2023 | 7:21 AM

‘ದಿ ಕೇರಳ ಸ್ಟೋರಿ’ ಸಿನಿಮಾ (The Kerala Story) ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ಸಿನಿಮಾ ನೋಡಿದ ಅನೇಕರು ಮೆಚ್ಚುಗೆ ಸೂಚಿಸಿದರೆ, ಇನ್ನೂ ಕೆಲವರು ತೆಗಳುವ ಕೆಲಸ ಮಾಡಿದ್ದಾರೆ. ಈ ಮಧ್ಯೆ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಅನೇಕ ಸೆಲೆಬ್ರಿಟಿಗಳು ಈ ಚಿತ್ರದ ಪರವಾಗಿ ಟ್ವೀಟ್ ಮಾಡಿದ್ದಾರೆ. ‘ದಿ ಕೇರಳ ಸ್ಟೋರಿ’ ಚಿತ್ರವನ್ನು ಖ್ಯಾತ ನಿರ್ದೇಶಕ, ನಿರ್ಮಾಪಕ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರು ಬೆಂಬಲಿಸಿದ್ದಾರೆ. ಈ ಸಿನಿಮಾ ಯಶಸ್ಸಿನ ಬಳಿಕ ಬಾಲಿವುಡ್​ನಲ್ಲಿ ಉಂಟಾದ ಮೌನವನ್ನು ಅವರು ಪ್ರಶ್ನೆ ಮಾಡಿದ್ದಾರೆ.

ರಾಮ್ ಗೋಪಾಲ್ ವರ್ಮಾ ಸಿನಿಮಾಗಳನ್ನು ಮಾಡುವುದರ ಜೊತೆಗೆ ಚಿತ್ರರಂಗದ ಆಗುಹೋಗುಗಳ ಬಗ್ಗೆ ಮಾತನಾಡುತ್ತಾ ಇರುತ್ತಾರೆ. ಅವರು ಕಾಂಟ್ರವರ್ಸಿ ನಿರ್ದೇಶಕ ಎಂದೇ ಫೇಮಸ್. ಈಗ ಅವರು ‘ದಿ ಕೇರಳ ಸ್ಟೋರಿ’ ಚಿತ್ರವನ್ನು ಬೆಂಬಲಿಸಿದ್ದಾರೆ. ಇದರಿಂದ ಸಿನಿಮಾಗೆ ಮತ್ತಷ್ಟು ಬಲ ಸಿಕ್ಕಂತೆ ಆಗಿದೆ.

‘ನಮಗೆ ಹಾಗೂ ಇತರರಿಗೆ ನಾವು ಸುಳ್ಳುಗಳನ್ನು ಹೇಳಿಕೊಳ್ಳುತ್ತೇವೆ. ಯಾರಾದರೂ ಮುಂದೆ ಹೋಗಿ ಸತ್ಯವನ್ನು ತೋರಿಸಿದಾಗ ನಾವು ಆಘಾತಕ್ಕೊಳಗಾಗುತ್ತೇವೆ. ದಿ ಕೇರಳ ಸ್ಟೋರಿಯ ಯಶಸ್ಸಿನ ಬಗ್ಗೆ ಬಾಲಿವುಡ್​ನಲ್ಲಿ ಮೌನ ಆವರಿಸಿದೆ’ ಎಂದಿರುವ ಅವರು, ‘ಬಾಲಿವುಡ್​ನಲ್ಲಿ ದಿ ಕೇರಳ ಸ್ಟೋರಿ ಬಗ್ಗೆ ಸದಾ ಚರ್ಚೆ ಇರುತ್ತದೆ. ಸುಳ್ಳನ್ನು ಕಾಪಿ ಮಾಡುವುದು ಸುಲಭ. ಆದರೆ ಸತ್ಯವನ್ನು ಕಾಪಿ ಮಾಡೋದು ತುಂಬಾ ಕಷ್ಟ’ ಎಂದಿದ್ದಾರೆ.

ಇದನ್ನೂ ಓದಿ: ಅಜ್ಜಿಗೆ ‘ದಿ ಕೇರಳ ಸ್ಟೋರಿ’ ಸಿನಿಮಾ ತೋರಿಸಲು ಭಯಬಿದ್ದ ನಟಿ ಅದಾ ಶರ್ಮಾ; ನಂತರ ಏನಾಯ್ತು?

ಶಾಲಿನಿ ಉನ್ನಿಕೃಷ್ಣನ್ ಎಂಬ ಯುವತಿ ಇಸ್ಲಾಂ ಧರ್ಮದ ತತ್ವಗಳಿಂದ ಪ್ರಭಾವಿತಗೊಂಡು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುತ್ತಾಳೆ. ಫಾತಿಮಾ ಎಂದು ಹೆಸರು ಬದಲಾಯಿಸಿಕೊಳ್ಳುತ್ತಾಳೆ. ಆ ಬಳಿಕ ಆಕೆಯನ್ನು ಸಿರಿಯಾಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಆಕೆಯ ಮೇಲೆ ಅತ್ಯಾಚಾರಗಳು ನಡೆಯುತ್ತವೆ. ಆ ಬಳಿಕ ಆಕೆ ಅಲ್ಲಿಂದ ತಪ್ಪಿಸಿಕೊಂಡು ಬರುತ್ತಾಳೆ. ಇದು ನಿಜವಾದ ಘಟನೆ ಆಧರಿಸಿದ ಸಿನಿಮಾ ಎಂದು ನಿರ್ದೇಶಕ ಸುದಿಪ್ತೋ ಸೇನ್ ಹೇಳಿಕೊಂಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 200 ಕೋಟಿ ರೂಪಾಯಿ ಗಳಿಕೆ ಮಾಡುವುದರತ್ತ ಮುನ್ನುಗ್ಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:05 am, Mon, 22 May 23