AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜ್ಜಿಗೆ ‘ದಿ ಕೇರಳ ಸ್ಟೋರಿ’ ಸಿನಿಮಾ ತೋರಿಸಲು ಭಯಬಿದ್ದ ನಟಿ ಅದಾ ಶರ್ಮಾ; ನಂತರ ಏನಾಯ್ತು?

The Kerala Story Movie: ಅತ್ಯಾಚಾರ ದೃಶ್ಯಗಳನ್ನು ವಯಸ್ಸಾದವರು ನೋಡುವುದರಿಂದ ಆಘಾತ ಉಂಟಾಗಬಹುದು. ಹೀಗಾಗಿ, ಚಿತ್ರವನ್ನು ಅಜ್ಜಿಗೆ ತೋರಿಸಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿ ಅದಾ ಶರ್ಮಾ ಇದ್ದರು.

ಅಜ್ಜಿಗೆ ‘ದಿ ಕೇರಳ ಸ್ಟೋರಿ’ ಸಿನಿಮಾ ತೋರಿಸಲು ಭಯಬಿದ್ದ ನಟಿ ಅದಾ ಶರ್ಮಾ; ನಂತರ ಏನಾಯ್ತು?
ಅದಾ ಶರ್ಮಾ
ರಾಜೇಶ್ ದುಗ್ಗುಮನೆ
|

Updated on: May 20, 2023 | 9:44 AM

Share

ನಟಿ ಅದಾ ಶರ್ಮಾ ನಟನೆಯ ‘ದಿ ಕೇರಳ ಸ್ಟೋರಿ’ ಸಿನಿಮಾ (The Kerala Story Movie) ಮೇ 5ರಂದು ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಈ ಚಿತ್ರ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಈ ಸಿನಿಮಾದಿಂದ ಅದಾ ಶರ್ಮಾ (Adah Sharma) ಅವರಿಗೆ ಬೇಡಿಕೆ ಹೆಚ್ಚಿದೆ. ಈ ಚಿತ್ರದ ಬಗ್ಗೆ ಒಬ್ಬರು ಒಂದೊಂದು ರೀತಿಯ ಅಭಿಪ್ರಾಯ ತಿಳಿಸಿದ್ದಾರೆ. ಕೆಲವರು ಇದನ್ನು ನೋಡಲೇಬೇಕಾದ ಸಿನಿಮಾ ಎಂದರೆ ಇನ್ನೂ ಕೆಲವರು ಇಂದೊಂದು ಪ್ರೊಪೊಗಾಂಡ ಚಿತ್ರ ಎಂದು ಕರೆದಿದ್ದಾರೆ. ಸಿನಿಮಾ ಯಶಸ್ಸಿನ ಬೆನ್ನಲ್ಲೇ ಅನೇಕ ಕಡೆಗಳಲ್ಲಿ ನಟಿ ಅದಾ ಶರ್ಮಾ ಅವರ ಸಂದರ್ಶನ ಮಾಡಲಾಗುತ್ತಿದೆ. ಈಗ ಅವರು ಅಚ್ಚರಿಯ ವಿಚಾರ ಒಂದನ್ನು ಬಿಚ್ಚಿಟ್ಟಿದ್ದಾರೆ.

ಈ ಚಿತ್ರವನ್ನು ಅಜ್ಜಿಗೆ ಹಾಗೂ ಅಮ್ಮನಿಗೆ ತೋರಿಸೋಕೆ ಅದಾ ಶರ್ಮಾ ಅವರು ಹೆದರಿದ್ದರು. ಇದಕ್ಕೆ ಕಾರಣ ಸಿನಿಮಾದಲ್ಲಿರುವ ಅತ್ಯಾಚಾರದ ದೃಶ್ಯಗಳು. ಅದಾ ಶರ್ಮಾ ಮಾಡಿರುವ ಫಾತಿಮಾ ಪಾತ್ರದ ಮೇಲೆ ಅತ್ಯಾಚಾರ ನಡೆಯುವ ಘಟನೆಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ವಯಸ್ಸಾದವರಿಗೆ ಈ ರೀತಿಯ ದೃಶ್ಯಗಳನ್ನು ನೋಡುವುದರಿಂದ ಆಘಾತ ಆಗಬಹುದು. ಹೀಗಾಗಿ, ಚಿತ್ರವನ್ನು ತೋರಿಸಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿ ಅದಾ ಶರ್ಮಾ ಇದ್ದರು.

‘ನನ್ನ ಅಮ್ಮ ಹಾಗೂ ಅಜ್ಜಿಗೆ ಸಿನಿಮಾದ ಕಥೆ ಗೊತ್ತಿತ್ತು. ಸಿನಿಮಾ ನೋಡಿ ಅವರು ಹೇಗೆ ಪ್ರತಿಕ್ರಿಯಿಸಬಹುದು ಎನ್ನುವ ಭಯ ಇತ್ತು. ಮುಖ್ಯವಾಗಿ ಅತ್ಯಾಚಾರದ ದೃಶ್ಯಗಳು. ಈ ರೀತಿಯ ದೃಶ್ಯಗಳಿಗೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಭಯ ಇತ್ತು’ ಎಂದಿದ್ದಾರೆ ಅದಾ ಶರ್ಮಾ. ಸಿನಿಮಾ ನೋಡಿದ ಬಳಿಕ ಅಜ್ಜಿಯ ಉತ್ತರ ಕಂಡು ಅವರು ಅಚ್ಚರಿಗೊಂಡಿದ್ದಾರೆ.

‘ನನ್ನ ಅಜ್ಜಿ ಗಟ್ಟಿ ಆಗಿದ್ದಾರೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಸಿನಿಮಾ ನೋಡಿದ ಬಳಿಕ ಅವರು ಸಿನಿಮಾ ತಿಳುವಳಿಕೆ ನೀಡುವ ರೀತಿಯಲ್ಲಿದೆ ಎಂದರು. ಎಲ್ಲಾ ವಿದ್ಯಾರ್ಥಿಗಳು ಇದನ್ನು ನೋಡಬೇಕು ಎನ್ನುವ ಅಭಿಪ್ರಾಯ ಹೊರಹಾಕಿದರು’ ಎಂದಿದ್ದಾರೆ ಅದಾ ಶರ್ಮಾ.

ಇದನ್ನೂ ಓದಿ: ‘ಬುರ್ಖಾ ಧರಿಸಿದ ಬಳಿಕ ಯಶಸ್ಸು ಸಿಕ್ತು’; ಗ್ಲಾಮರಸ್ ಅದಾ ಶರ್ಮಾ ಬಗ್ಗೆ ಟೀಕೆ

200 ಕೋಟಿ ರೂಪಾಯಿ ಬಿಸ್ನೆಸ್ ಮಾಡುವತ್ತ ‘ದಿ ಕೇರಳ ಸ್ಟೋರಿ’ ಸಾಗುತ್ತಿದೆ. ಈ ಚಿತ್ರದಿಂದ ಅದಾ ಶರ್ಮಾ ಅವರನ್ನು ಹಲವು ಆಫರ್​ಗಳು ಹುಡುಕಿ ಬರುತ್ತಿವೆ. ಸುದಿಪ್ತೋ ಸೇನ್ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಸಿನಿಮಾಗೆ ಹೇರಿದ್ದ ತಡೆಯನ್ನು ತೆಗೆಯಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ