ವಿಚಿತ್ರ ಮುಖದ ವ್ಯಕ್ತಿಯೊಟ್ಟಿಗೆ ಪ್ರೀತಿಗೆ ಬಿದ್ದ ಬಾಲಿವುಡ್ ಹಾಟ್ ನಟಿ ದಿಶಾ ಪಟಾನಿ

Disha Patani boy friend: ದಿಶಾ ಪಟಾನಿ ಈ ಹಿಂದೆ ಬಾಲಿವುಡ್ ಸ್ಟಾರ್ ನಟ ಟೈಗರ್ ಶ್ರಾಫ್ ಜೊತೆಗೆ ಪ್ರೀತಿಯಲ್ಲಿದ್ದರು. ಇವರಿಬ್ಬರ ಪ್ರೇಮ ಸಂಬಂಧ ಕೆಲ ವರ್ಷ ನಡೆಯಿತು, ಬಳಿಕ ಇಬ್ಬರೂ ದೂರಾದರು. ಬಳಿಕ ದಿಶಾ ಹೆಸರು ವಿದೇಶಿ ವ್ಯಕ್ತಿಯೊಬ್ಬನ ಜೊತೆ ಕೇಳಿ ಬಂತು. ಆದರೆ ಇದೀಗ ದಿಶಾ ಪಟಾನಿ, ಸದಾ ಕಾಲ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಓಡಾಡುವ ಸಂಗೀತಗಾರನೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ಪರಸ್ಪರ ಕೈ-ಕೈ ಹಿಡಿದುಕೊಂಡು ಓಡಾಡುವ ಹಲವು ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಷ್ಟಕ್ಕೂ ಈ ವಿಚಿತ್ರ ವ್ಯಕ್ತಿ ಯಾರು?

ವಿಚಿತ್ರ ಮುಖದ ವ್ಯಕ್ತಿಯೊಟ್ಟಿಗೆ ಪ್ರೀತಿಗೆ ಬಿದ್ದ ಬಾಲಿವುಡ್ ಹಾಟ್ ನಟಿ ದಿಶಾ ಪಟಾನಿ
Disha Patani Talwinder

Updated on: Feb 05, 2026 | 1:29 PM

ಬಾಲಿವುಡ್​​ನಲ್ಲಿ (Bollywood) ಸಾಕಷ್ಟು ಹಾಟ್ ನಟಿಯರಿದ್ದಾರೆ ಆದರೆ ದಿಶಾ ಪಟಾನಿ ನಂಬರ್ 1 ಎನ್ನಬಹುದು. ಫಿಟ್​​ನೆಸ್​ಗೆ ಅಪಾರ ಒತ್ತು ಕೊಡುವ ದಿಶಾ ಪಟಾನಿ, ಗ್ಲಾಮರಸ್ ಆಗಿಯೂ ಕಾಣಿಸಿಕೊಳ್ಳುತ್ತಾರೆ. ಸಿನಿಮಾ, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ನಟಿ ದಿಶಾ ಪಟಾನಿ, ನಿಜ ಜೀವನದಲ್ಲಿ ಸಹ ಸಖತ್ ಬೋಲ್ಡ್ ಆದ ನಿರ್ಣಯಗಳನ್ನೇ ತೆಗೆದುಕೊಳ್ಳುತ್ತಾರೆ. ಪದೇ ಪದೇ ಬಾಯ್​​ಫ್ರೆಂಡ್ ಬದಲಾಯಿಸುವ ದಿಶಾ ಪಟಾನಿ ಇದೀಗ ವಿಚಿತ್ರ ವ್ಯಕ್ತಿಯೊಡನೆ ಪ್ರೀತಿಗೆ ಬಿದ್ದಿದ್ದಾರೆ. ಮುಖಕ್ಕೆ ಪ್ರೇತತ ಪೇಯಿಂಟ್ ಬಳಿದುಕೊಂಡು ಓಡಾಡುವ ಯುವಕನೊಟ್ಟಿಗೆ ದಿಶಾ ರಿಲೇಷನ್​​ನಲ್ಲಿದ್ದಾರೆ.

ದಿಶಾ ಪಟಾನಿ ಈ ಹಿಂದೆ ಬಾಲಿವುಡ್ ಸ್ಟಾರ್ ನಟ ಟೈಗರ್ ಶ್ರಾಫ್ ಜೊತೆಗೆ ಪ್ರೀತಿಯಲ್ಲಿದ್ದರು. ಇವರಿಬ್ಬರ ಪ್ರೇಮ ಸಂಬಂಧ ಕೆಲ ವರ್ಷ ನಡೆಯಿತು, ಬಳಿಕ ಇಬ್ಬರೂ ದೂರಾದರು. ಬಳಿಕ ದಿಶಾ ಹೆಸರು ವಿದೇಶಿ ವ್ಯಕ್ತಿಯೊಬ್ಬನ ಜೊತೆ ಕೇಳಿ ಬಂತು. ಆದರೆ ಇದೀಗ ದಿಶಾ ಪಟಾನಿ, ಸದಾ ಕಾಲ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಓಡಾಡುವ ಸಂಗೀತಗಾರನೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ಪರಸ್ಪರ ಕೈ-ಕೈ ಹಿಡಿದುಕೊಂಡು ಓಡಾಡುವ ಹಲವು ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಷ್ಟಕ್ಕೂ ಈ ವಿಚಿತ್ರ ವ್ಯಕ್ತಿ ಯಾರು?

ಇದನ್ನೂ ಓದಿ:ರಾಯಲ್ ಲುಕ್​​ನಲ್ಲಿ ಕಂಗೊಳಿಸಿದ ನಟಿ ದಿಶಾ ಪಟಾನಿ ಇಲ್ಲಿವೆ ಚಿತ್ರಗಳು

ದಿಶಾ ಪಟಾನಿ ಪ್ರೀತಿಗೆ ಬಿದ್ದಿರುವ ಆ ವಿಚಿತ್ರ ಮುಖದ ವ್ಯಕ್ತಿಯ ಹೆಸರು ತಲ್ವಿಂಧರ್. ಭಾರತೀಯ ಮೂಲದ ಆದರೆ ಅಮೆರಿಕದ ಬೇ ಏರಿಯಾನಲ್ಲಿ ಬೆಳೆದ ತಲ್ವೀಂದರ್ ಇತ್ತೀಚೆಗೆ ಜನಪ್ರಿಯತೆ ಗಳಿಸಿರುವ ಗಾಯಕ. ಪಂಜಾಬಿ ಹಾಡುಗಳನ್ನು ಹಿಪ್-ಹಾಪ್, ಎಲೆಕ್ಟ್ರಾನಿಕ್ ಸಂಗೀತ ಜೊತೆಗೆ ಸೇರಿಸಿ ಹಾಡುವುದು ಇವರ ಸ್ಟೈಲ್. ಹಲವು ಶೋಗಳನ್ನು ಸಹ ನೀಡಿರುವ ತಲ್ವೀಂಧರ್, ಭಾರತದ ಜನಪ್ರಿಯ ಹಿಪ್-ಹಾಪ್ ಗಾಯಕರುಗಳಲ್ಲಿ ಒಬ್ಬರಾಗಿದ್ದಾರೆ.

ಮುಖಕ್ಕೆ ಬೇತಾಳದಂತೆ ಬಣ್ಣವನ್ನು ಬಳಿದುಕೊಂಡೇ ಓಡಾಡುತ್ತಾರೆ ತಲ್ವಿಂಧರ್. ಇತ್ತೀಚೆಗೆ ಸಂದರ್ಶನದಲ್ಲಿ ಭಾಗಿ ಆಗಿದ್ದಾಗಲೂ ಸಹ ಮುಖಕ್ಕೆ ಅವರು ಬಣ್ಣ ಬಳಿದುಕೊಂಡಿದ್ದರು. ತಲ್ವಿಂಧರ್ ಅವರ ತಂದೆ ಪೇಂಟರ್ ಆಗಿದ್ದರಂತೆ, ಅವರಿಗೆ ಗೌರವ ನೀಡಲೆಂದು ತಲ್ವಿಂಧರ್ ಮುಖಕ್ಕೆ ಬಣ್ಣ ಹಚ್ಚಿಕೊಳ್ಳುತ್ತಾರೆ. ಮಾತ್ರವಲ್ಲದೆ, ತಮ್ಮ ಮುಖವನ್ನು ಅವರು ಈ ವರೆಗೆ ಯಾವುದೇ ಕಾರ್ಯಕ್ರಮ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ತೋರಿಸಿಲ್ಲ.

ಇತ್ತೀಚೆಗೆ ತಲ್ವಿಂಧರ್ ನೀಡಿರುವ ಸಂದರ್ಶನದಲ್ಲಿ ಅವರಿಗೆ ದಿಶಾ ಪಟಾನಿಯೊಟ್ಟಿಗಿನ ಪ್ರೀತಿಯ ಬಗ್ಗೆ ಪ್ರಶ್ನೆ ಕೇಳಲಾಯ್ತು. ಹೌದು, ತಾವು ಪ್ರೀತಿಯಲ್ಲಿರುವುದಾಗಿ ತಲ್ವಿಂಧರ್ ಹೇಳಿದ್ದಾರೆ ಅಲ್ಲದೆ, ನಾನು ಪಇನ್ನೂ ನಿಜವಾದ ಪ್ರೀತಿಯನ್ನು ಹುಡುಕುತ್ತಲೇ ಇದ್ದೇನೆ ಎಂದು ಸಹ ಹೇಳಿದ್ದಾರೆ. ಆ ಮೂಲಕ ತಾವು ದಿಶಾ ಜೊತೆಗೆ ಭವಿಷ್ಯದಲ್ಲಿ ಬ್ರೇಕ್ ಅಪ್ ಮಾಡಿಕೊಳ್ಳಬಹುದು ಎಂದು ಸಹ ಹೇಳಿದ್ದಾರೆ.

ದಿಶಾ, ಬಾಲಿವುಡ್​​ನ ಹಾಟೆಸ್ಟ್ ನಟಿ, ದಿಶಾಗೆ ಈ ದೆವ್ವದ ಮುಖದವನಿಗಿಂತಲೂ ಬಹಳ ಒಳ್ಳೆಯ ಹುಡುಗರು, ನಟರುಗಳೇ ಸಿಗುತ್ತಿದ್ದರು ಎಂದು ದಿಶಾ ಅಭಿಮಾನಿಗಳೇ ಮೂಗು ಮುರಿಯುತ್ತಿದ್ದಾರೆ. ಏನೇ ಆಗಲಿ, ಪ್ರೀತಿಗೆ ಕಣ್ಣಿಲ್ಲ ಎಂಬುದು ದಿಶಾ ಪಟಾನಿ ವಿಷಯದಲ್ಲಿ ಸತ್ಯವೇ ಆದಂತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ