ಅನಂತ್ ಅಂಬಾನಿ ಮದುವೆಯಲ್ಲಿ ಶಾರುಖ್, ರಣವೀರ್ ಜೊತೆ ಪೋಸ್ ಕೊಟ್ಟ ಡ್ವೇನ್ ಬ್ರಾವೋ

|

Updated on: Mar 02, 2024 | 11:39 AM

ಡ್ವೇನ್ ಬ್ರಾವೋ ಅವರಿಗೆ ಭಾರತದ ಜೊತೆ ಒಳ್ಳೆಯ ನಂಟಿದೆ. ಅವರು ಐಪಿಎಲ್​ನಲ್ಲಿ ಸಿಎಸ್​ಕೆ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ರಣವೀರ್ ಸಿಂಗ್ ಜೊತೆಯೂ ಪೋಸ್ ಕೊಟ್ಟಿದ್ದಾರೆ. ‘ಮದುವೆಯ ವೈಬ್ಸ್. ದೊಡ್ಡ ವ್ಯಕ್ತಿಗಳ ಜೊತೆ ಚಿಲ್ಲಿಂಗ್’ ಎಂದು ಬರೆದುಕೊಂಡಿರುವ ಅವರು ‘ಬಾಲಿವುಡ್​ ಕ್ರಿಕೆಟ್​ನ ಭೇಟಿ ಮಾಡಿದಾಗ’ ಎಂದು ಅವರು ಹೇಳಿದ್ದಾರೆ.

ಅನಂತ್ ಅಂಬಾನಿ ಮದುವೆಯಲ್ಲಿ ಶಾರುಖ್, ರಣವೀರ್ ಜೊತೆ ಪೋಸ್ ಕೊಟ್ಟ ಡ್ವೇನ್ ಬ್ರಾವೋ
Follow us on

ಅನಂತ್ ಅಂಬಾನಿ (Anant Ambani) ಹಾಗೂ ರಾಧಿಕಾ ಮರ್ಚಂಟ್ ಮದುವೆಗೂ ಮೊದಲು ಭರ್ಜರಿ ಮನರಂಜನೆ ಕಾರ್ಯಕ್ರಮಗಳು ನಡೆಯುತ್ತಿವೆ. ಜಾಮ್​ನಗರದಲ್ಲಿ ಈ ಮದುವೆ ಜರುಗುತ್ತಿದೆ. ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗುತ್ತಿದ್ದಾರೆ. ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಅವರು ಕೂಡ ಈ ಮದುವೆಗೆ ಹಾಜರಿ ಹಾಕಿದ್ದಾರೆ. ಖ್ಯಾತ ಕ್ರಿಕೆಟರ್ ಡ್ವೇನ್ ಬ್ರಾವೋ ಜೊತೆ ಅವರು ಪೋಸ್ ನೀಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಇವರನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಡ್ವೇನ್ ಬ್ರಾವೋ ಅವರಿಗೆ ಭಾರತದ ಜೊತೆ ಒಳ್ಳೆಯ ನಂಟಿದೆ. ಅವರು ಐಪಿಎಲ್​ನಲ್ಲಿ ಸಿಎಸ್​ಕೆ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ರಣವೀರ್ ಸಿಂಗ್ ಜೊತೆಯೂ ಪೋಸ್ ಕೊಟ್ಟಿದ್ದಾರೆ. ‘ಮದುವೆಯ ವೈಬ್ಸ್. ದೊಡ್ಡ ವ್ಯಕ್ತಿಗಳ ಜೊತೆ ಚಿಲ್ಲಿಂಗ್’ ಎಂದು ಬರೆದುಕೊಂಡಿರುವ ಅವರು ‘ಬಾಲಿವುಡ್​ ಕ್ರಿಕೆಟ್​ನ ಭೇಟಿ ಮಾಡಿದಾಗ’ ಎಂದು ಅವರು ಹೇಳಿದ್ದಾರೆ.

ಶಾರುಖ್ ಖಾನ್ ಮಾತ್ರವಲ್ಲದೆ, ಸಲ್ಮಾನ್ ಖಾನ್, ಸಿದ್ದಾರ್ಥ್ ಮಲ್ಹೋತ್ರ, ಕಿಯಾರಾ ಅಡ್ವಾಣಿ, ಸೈಫ್ ಅಲಿ ಖಾನ್, ಕರೀನಾ ಕಪೂರ್, ಮಾಧುರಿ ದೀಕ್ಷಿತ್, ವರುಣ್ ಧವನ್, ಅನಿಲ್ ಕಪೂರ್, ಸಾರಾ ಅಲಿ ಖಾನ್, ಇಬ್ರಾಹಿಮ್ ಅಲಿ ಖಾನ್, ಅನನ್ಯಾ ಪಾಂಡೆ ಮೊದಲಾದವರು ಮದುವೆಯಲ್ಲಿ ಹಾಜರಿ ಹಾಕಿದ್ದಾರೆ. ರಣವೀರ್ ಸಿಂಗ್, ರಾಣಿ ಮುಖರ್ಜಿ, ದೀಪಿಕಾ ಪಡುಕೋಣೆ ಕೂಡ ಹಾಜರಿ ಹಾಕಿದ್ದಾರೆ.

ಇದನ್ನೂ ಓದಿ: ಅನಂತ್ ಅಂಬಾನಿ ವಿವಾಹ ಪೂರ್ವ ಸಮಾರಂಭಕ್ಕೆ ತಯಾರಾಗುತ್ತಿದೆ 2500 ಬಗೆಯ ಖಾದ್ಯಗಳು

ಅನಂತ್ ಅಂಬಾನಿ ಮದುವೆಗೆ ವಿದೇಶದಿಂದ ಗಾಯಕಿಯರು ಬಂದಿದ್ದಾರೆ. ಬಾರ್ಬೆಡೋಸ್​ನ ರಿಯಾನಾ ಅವರು ಭಾರತಕ್ಕೆ ಬಂದಿದ್ದಾರೆ. ಅವರು ಭಾರತದಲ್ಲಿ ಕಾರ್ಯಕ್ರಮ ನೀಡಿದ್ದು ಇದೇ ಮೊದಲು. ಅವರ ಒಂದು ದಿನದ ಸಂಭಾವನೆ 74 ಕೋಟಿ ರೂಪಾಯಿ ಅನ್ನೋದು ಎಲ್ಲರಿಗೂ ಅಚ್ಚರಿ ತಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:39 am, Sat, 2 March 24